ರಾಣಿ_ಚೆನ್ನಬೈರಾದೇವಿ

 

 

 

ಭರತಖಂಡದ ಇತಿಹಾಸದಲ್ಲಿ ರಾಣಿ ಚೆನ್ನಭೈರಾದೇವಿಯಷ್ಟು ಸುದೀರ್ಘಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿಯಿಲ್ಲ.ರಾಜರೂ ಬೆರಳೆಣಿಕೆಯಷ್ಟೇ.ಸರಿಸುಮಾರು ಕ್ರಿಸ್ತಶಕ 1552ರಿಂದ 1606 ರವರೆಗೆ ಒಟ್ಟು 54 ವರ್ಷಗಳ ಕಾಲ ರಾಜ್ಯವಾಳಿದ ಸಾಳುವ ವಂಶದ ಈ ವೀರವನಿತೆ,ತಾನು ಬದುಕಿರುವಷ್ಟೂ ಕಾಲ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದವಳು.ದಕ್ಷಿಣ ಕೊಂಕಣಕ್ಕೆ ತಮ್ಮ ಒಡೆತನವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ತುದಿಗಾಲಲ್ಲಿ ನಿಂತಿದ್ದ ಪೋರ್ಚುಗೀಸರ ಪ್ರಯತ್ನಕ್ಕೆ ತಡೆಗೋಡೆಯಾಗಿ ಅಡ್ಡ ನಿಂತು ಇಂದಿನ ಕೆನರಾ ಪ್ರದೇಶವನ್ನು ಸಂರಕ್ಷಿಸಿದವಳು ಚೆನ್ನಭೈರಾದೇವಿ. ಪರಂಗಿಯವರೊಡನೆ ಅಗತ್ಯವಿದ್ದಾಗ ಸ್ನೇಹ, ಅನಿವಾರ್ಯವಾದಾಗ ಸಮರ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದವಳು.

 

ರಾಜಕೀಯವಾಗಿ ಪೋರ್ಚುಗೀಸರನ್ನು ವಿರೋಧಿಸಿದರೂ ಬಹು ಚಾಣಾಕ್ಷತೆಯಿಂದ ಅವರೊಂದಿಗೆ ವ್ಯಾವಹಾರಿಕ ಮೈತ್ರಿಯನ್ನು ಬೆಸೆದುಕೊಂಡು,ಅಕ್ಕಿ,ಮೆಣಸು,ಏಲಕ್ಕಿ,ದಾಲ್ಚಿನ್ನಿ,ಬೆಲ್ಲ, ಬೆತ್ತ,ಗಂಧ,ಶುಂಠಿ,ಲವಂಗ,ದಂತ ಮುಂತಾದ ಪದಾರ್ಥಗಳನ್ನು ಮಾರಿ ಅವರಿಂದಲೇ ‘Rainha Da Pimenta- The Pepper Queenಎಂಬ ಬಿರುದನ್ನು ಪಡೆದು ಮುತ್ಸದ್ದಿ ಎನ್ನಿಸಿಕೊಂಡವಳು.

 

ವಿದೇಶೀಯರೊಂದಿಗೆ ಕಾಳುಮೆಣಸಿನ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದ ಚೆನ್ನಭೈರಾದೇವಿಯನ್ನು ಮಣಿಸಲು ಕೆಳದಿ ನಾಯಕರು,ಬಿಳಗಿ ಅರಸರು ಹರಸಾಹಸ ಪಡುತ್ತಿದ್ದರು.

 

ಅವಳೊಬ್ಬಳಿಲ್ಲದಿದ್ದರೆ ಪೋರ್ಚುಗೀಸರು ನಾವೆಗಳ ನಿರ್ಮಾಣಕ್ಕೆ ಬೇಕಾದ ಮಾವು, ಗುಳಮಾವು,ಸುರಹೊನ್ನೆ,ಹೆಬ್ಬಲಸು ಮುಂತಾದ ಮರಗಳನ್ನು ಕಡಿದು ಕದ್ದೊಯ್ದು ಇಡೀ ಪಶ್ಚಿಮಘಟ್ಟದ ದಟ್ಟಡವಿಯನ್ನು ಅಂದೇ ಬೆತ್ತಲಾಗಿಸಿಬಿಡುತ್ತಿದ್ದರು.

ಆದರೆ ಆಕೆಯ ಇತಿಹಾಸ ಅಡವಿಯೊಳಗೆ ಅಡಗಿ ಹೊಗಿದ್ದು ದುರಂತ,

Leave a Reply

Your email address will not be published. Required fields are marked *

You cannot copy content of this page

error: Content is protected !!