ಉತ್ತರ ಕರ್ನಾಟಕದಲ್ಲಿ ಹೊಲ ಗದ್ದೆಗಳಲ್ಲಿ ಎಥೆಚ್ಚವಾಗಿ ತನ್ನಿಂದ ತಾನೇ ಬೆಳೆಯುವ ಉಚಿತವಾದ ಔಷಧೀಯ ಸೊಪ್ಪು ಅನ್ನಬಹುದು ನನಗೆ ತಿಳಿದ ಮಟ್ಟಿಗೆ ಇದಕ್ಕಿಂತ ಪ್ರಯೋಜನ ಕಾರಿ ಸೊಪ್ಪು ಇನ್ನೊಂದಿಲ್ಲ
ಅದೇ ಈ ಹಕ್ಕರಿಕಿ(ಹತ್ತರಕಿ) ಸೊಪ್ಪು
ಸಾಕಷ್ಟು ಜನರಿಗೆ ಈಗಾಗಲೇ ಇದರ ಬಗ್ಗೆ ಗೊತ್ತಿರಬಹುದು ಉಳಿದವರಿಗೂ ತಿಳಿಯಲಿ ಅಂತ ಪೋಸ್ಟ್ ಮಾಡಿದೆ ನೀವು ಓದಿ ಮತ್ತೆ ವಿನಿಮಯ ಮಾಡಿ
ಹುಲ್ಲು ಹುಲ್ಲಾಗಿರುವ, ಅಗಲವಾದ ಎಲೆಗಳನ್ನು ಬಿಡುವ, ಟರ‌್ಯಾಕ್ಸಕಮ್ ಅಫಿಷಿನೇಲ್ ಕುಲದ ಸಸ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯ ಮಧ್ಯ ವರ್ಷವಿಡೀ ತಾನೇ ತಾನಾಗಿ ಹುಟ್ಟಿ ಬೆಳೆಯುವ ಸೊಪ್ಪಿನ ಗಿಡವಿದು. (ಆದರೆ, ಬೇರೆ ಸೊಪ್ಪಿನ ರೀತಿ ಇದನ್ನು ಮಾರಾಟಕ್ಕೆಂದು ಬೆಳೆಯುವುದಿಲ್ಲ.) ಹೊಲದಲ್ಲಿ ಕೆಲಸ ಮಾಡುವವರಿಗೆ ಊಟದ ಜತೆಗಿನ ಸೈಡ್ಸ್ ಆಗಿ ಬಳಕೆ. ಆಡು ಭಾಷೆಯಲ್ಲಿ ಹಕ್ಕರಿಕೆ ಎಂದು ಕರೆಯುತ್ತಾರೆ. ಈ ಸೊಪ್ಪಿನ ಇಂಗ್ಲಿಷ್ ಹೆಸರೇ ದಾಂಡೇಲಿಯನ್ ಗ್ರೀನ್ಸ್. ಇದರ ಎಲೆಗಳು ಅತಿ ಹೆಚ್ಚು ಪ್ರೊಟೀನ್ ಅಂಶ ಒಳಗೊಂಡಿವೆ. ಎಲೆ ಮತ್ತು ಬೇರಿನಲ್ಲಿರುವ ಹೆಚ್ಚಿನ ಅಂಶಗಳೆಂದರೆ, ವಿಟಮಿನ್ ಸಿ, ಇ ಮತ್ತು ಕಬ್ಬಿಣಾಂಶ. ಏಡ್ಸ್ ಮತ್ತು ಹರ್ಪಿಸ್ ಕಾಯಿಲೆ ಹರಡಲು ಕಾರಣವಾಗುವ ವೈರಸ್ ಅನ್ನು ನಾಶಪಡಿಸುವ ರೋಗನಿರೋಧಕ ಗುಣ ಈ ಸೊಪ್ಪಿನಲ್ಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಜೀರ್ಣಕ್ರಿಯೆಗೆ, ದೀರ್ಘಕಾಲದ ಕಾಯಿಲೆಗಳಿಗೆ ಔಷಧದಂತೆ ವರ್ತಿಸುತ್ತದೆ. ರೋಗ ಬರದಂತೆ ತಡೆಯುವ ನೈಸರ್ಗಿಕ ಪರಿಹಾರ ಗುಣ ಇದಕ್ಕಿದೆ. ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕಾರ್ಯವನ್ನು ಉತ್ತಮಗೊಳಿಸುತ್ತದೆ. ನರಮಂಡಲದ ಮೇಲೆ ಪ್ರಯೋಜನಕಾರಿ ಪರಿಣಾಮ ಉಂಟುಮಾಡಿ, ನಿದ್ರೆ ಬರುವಂತೆ ಮಾಡುತ್ತದೆ. ರಕ್ತ ಹೆಚ್ಚಿಸುತ್ತದೆ. ಚರ್ಮದ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಚಿಗುರಿನಿಂದ ಬೇರಿನವರೆಗೆ ಔಷಧೀಯ ಗುಣಗಳನ್ನೇi ಹೊಂದಿದೆ. ಇದರ ಉಪಯುಕ್ತತೆಯನ್ನು ಕೇಳಿದರೆ, ಊಟದ ಬದಲು ಸೊಪ್ಪನ್ನೇ ತಿಂದು ಬದುಕಬೇಕು ಎನಿಸುತ್ತದಲ್ಲವೇ?