ಇಡೀ ದೇಶದಾದ್ಯಂತ ಕೊರೊನ ಎರಡನೇ ಅಲೆ ತಾಂಡವವಾಡುತ್ತಿದೆ. ಇನ್ನು ಕೆಲ ರಾಜ್ಯಗಳು ಲಾಕ್ಡೌನ್ ಕರ್ಫ್ಯೂ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವ ಮೂಲಕ ಆಯಾ ರಾಜ್ಯಗಳು ಕೋವಿಡ್ ನಿಯಂತ್ರಿಸುವಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತೇವೆ.
ಇನ್ನು ಈ ಸಂದರ್ಭದಲ್ಲಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳಲ್ಲಿ ಪೊಲೀಸ್ ಇಲಾಖೆ ಕೂಡ ಅಷ್ಟೇ ಮುಖ್ಯವಾಗಿ ಕಾಣುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಕರ್ನಾಟಕ ರಾಜ್ಯದಲ್ಲೂ ಸಹ ಕೋರೋಣ ತನ್ನ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ವಿಸ್ತರಿಸಿಕೊಂಡು ಕರ್ನಾಟಕ ರಾಜ್ಯದಲ್ಲಿ ರುದ್ರತಾಂಡವ ನಡೆಸುತ್ತಿದೆ. ಆದರೂ ಸಹ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆ ಪಾಲಿಸುವಲ್ಲಿ ತಲ್ಲೀನರಾಗಿದ್ದಾರೆ. ಇನ್ನು ಅವರು ಕೂಡ ಜೀವದ ಹಂಗುತೊರೆದು ಸರ್ಕಾರದ ಮಾರ್ಗಸೂಚಿಗಳನ್ನು, ಸರ್ಕಾರಿ ನಿಯಮಗಳನ್ನು ಸೇರಿದಂತೆ ಹಲವು ಬಿಗಿಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೂ ಸಹ ಈ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಸಾಕಷ್ಟು ಒತ್ತಡ ಕಂಡುಬಂದರೂ ಸಹ ತಮ್ಮ ಕರ್ತವ್ಯ ನಿಷ್ಠೆ ತೋರುತ್ತಿದ್ದಾರೆ ಇನ್ನು ಈ ಸಂದರ್ಭದಲ್ಲಿ ತುಮಕೂರು ನಗರ ಠಾಣೆ ಎಲ್ಲ ತಾಣಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಹಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಗಳಿಗೋಸ್ಕರ ಥರ್ಮಲ್ ಸ್ಟೀಮ್ ಪ್ಲಾಂಟ್ ನಿರ್ಮಾಣ ಮಾಡುವ ಮೂಲಕ ಪೊಲೀಸರಿಗೆ ಅವರ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ
ಇನ್ನು ಠಾಣೆಯಿಂದ ಹೊರಹೋಗುವಾಗ ಹಾಗೂ ಠಾಣೆಗೆ ಬರುವಾಗ ಮುಖ್ಯ ದ್ವಾರದಲ್ಲಿ ನಿರ್ಮಾಣವಾಗಿರುವ ಈ ತರ್ಮಲ್ ಸ್ಟೀಮ್ ಪ್ಲಾಂಟ್ ನಿಂದ ಬರುವ ಬಿಸಿ ಹಬೆಯನ್ನು ತೆಗೆದುಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಪೊಲೀಸರಿಗೂ ಸಹ ಹೆಚ್ಚು ಸಹಕಾರಿಯಾಗಿದೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿ ಕರ್ತವ್ಯ ನಿರ್ವಹಿಸಲು ಇಂತಹ ಸ್ಟೀಮ್ ಪ್ಲಾಂಟ್ ಗಳು ಸಹಕಾರಿಯಾಗಿದೆ . ಇನ್ನು ಸಾರ್ವಜನಿಕ ವಲಯದಲ್ಲೂ ಸಹ ಪೊಲೀಸ್ ಇಲಾಖೆಯ ಈ ವಿನೂತನ ಪ್ರಯೋಗಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.