ರಿಯಲ್ ಹಿರೋಗೆ ವಿಶೇಷ ಗೌರವ…! ವಿಮಾನದ‌‌ ಮೇಲೆ‌ ರಾರಾಜಿಸಿತು ಸೋನು ಸೂದ್ ಪೋಟೋ…!!

 

 

ಚಿತ್ರಗಳಲ್ಲಿ ಖಳನಾಯಕನಾಗಿ‌ ಅಬ್ಬರಿಸುವ ಬಾಲಿವುಡ್ ನಟ ಸೋನು ಸೂದ್ ರಿಯಲ್‌ ಲೈಫ್ ನಲ್ಲಿ ಬಡವರಿಗಾಗಿ ಮಿಡಿದ ಕರುಣಾಮಯಿ. ಹೀಗಾಗಿ ಈ‌ನಟನಿಗೆ ಸ್ಪೈಸ್ ಜೆಟ್ ಸ್ಪೆಶಲ್ ಗೌರವ ಸಲ್ಲಿಸಿದೆ.

 

ಕಳೆದ ವರ್ಷ ಕರೋನಾದಿಂದ ಲಾಕ್ ಡೌನ್ ಜಾರಿಯಾದ ವೇಳೆ ಸೋನು ಸೂದ್ ಮುಂಬೈನ ಸಾವಿರಾರು ಕಾರ್ಮಿಕರಿಗೆ ಮನೆ ತಲುಪಲು ನೆರವಾಗಿದ್ದರು. ಅಷ್ಟೇ ಅಲ್ಲ ದೇಶದ ಎಲ್ಲೆಡೆ ಎಷ್ಟೋ ಬಡವರಿಗೆ ಸಹಾಯ ಹಸ್ತ ಚಾಚಿದ್ದಾರೆ.

 

ಕಷ್ಟ ಎಂದು ಸೋನು ಸೂದ್ ರನ್ನು ಸಂಪರ್ಕಿಸಿದ ಜನರಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ನೆರವಾಗುತ್ತಿದ್ದಾರೆ. ಹೀಗಾಗಿ ಸೋನು ಸೂದ್ ದೇಶದ ಎಲ್ಲೆಡೆಯಿಂದ ಶ್ಲಾಘನೆ ಪಡೆದುಕೊಳ್ಳುತ್ತಿದ್ದಾರೆ.

 

ಅವರಿಂದ ಸಹಾಯ ಪಡೆದವರು ಸೋನುಸೂದ್ ಹೆಸರಲ್ಲಿ ದೇವಾಲಯ ನಿರ್ಮಿಸಿ ಪೂಜಿಸುತ್ತಿದ್ದಾರೆ. ಹೀಗೆ ರಿಯಲ್ ಲೈಫ್ ನಲ್ಲಿ ಬಡವರ ಕಣ್ಣೀರು ಒರೆಸುವ ನಾಯಕನಾಗಿರೋ ಸೋನು ಸೂದ್ ಗೆ ಸ್ಪೈಸ್ ಜೆಟ್ ಗೌರವ ಸಲ್ಲಿಸಿದೆ.

 

ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಸ್ಪೈಸ್ ಜೆಟ್ ಬೋಯಿಂಗ್ ವಿಮಾನ -737 ಮೇಲೆ ಸೋನು ಸೂದ್ ಭಾವಚಿತ್ರ ಹಾಕಿ ಸಂರಕ್ಷಕ ಸೋನುಸೂದ್ ಗೆ ಒಂದು ನಮನ ಎಂದು ಬರೆದಿದೆ.

 

ಇದನ್ನು ಕಂಡು ಸೋನು ಸೂದ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.ಅಷ್ಟೇ ಅಲ್ಲ ಭಾರತೀಯ ವಿಮಾನಯಾನ ಸಂಸ್ಥೆಯಿಂದ ಈ ರೀತಿ ಗೌರವ ಪಡೆದ ಮೊದಲ ಬಾಲಿವುಡ್ ನಟ ಎಂಬ ಗೌರವಕ್ಕೂ ಸೋನು ಸೂದ್ ಪಾತ್ರರಾಗಿದ್ದಾರೆ.

 

 

Leave a Reply

Your email address will not be published. Required fields are marked *

You cannot copy content of this page

error: Content is protected !!