ಮೈಸೂರು ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಮತ್ತು ಮೈಸೂರು ಗೇಮ್ ಅಸೋಸಿಯೇಷನ್ ಆಫ್ ಕರ್ನಾಟಕದ ಸಹಯೋಗದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2021ನೇ ರಾಜ್ಯ ಮಟ್ಟದ ಹಿರಿಯರ ಕುಸ್ತಿ ಪಂದ್ಯಾವಳಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಚೆಲುವರಾಜು ಹಾಗೂ ಗೋವಿಂದ ರಾಜು ನಡುವೆ ನಡೆದ ಕುಸ್ತಿ ಪಂದ್ಯವನ್ನು ವೀಕ್ಷಿಸಿದರು.
ನಂತರ ಮಾದ್ಯಮದೊಂದಿಗೆ ಮಾತನಾಡಿದ ಅವರು ಮಹಾನಾಯಕ ಯಾರೆಂದು ತನಿಖೆಯಿಂದ ಹೊರಬೀಳಲಿದೆ ಸಿಡಿ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆಸಿರುವ ಮಹಾನಾಯಕ ಯಾರೆಂದು ತನಿಖೆಯಿಂದ ತಿಳಿಯಲಿದೆ
ಸಿಡಿ ಕೈವಾಡದ ಹಿಂದಿರುವ ಮಹಾನಾಯಕ ಯಾರೆಂದು ಕರ್ನಾಟಕದ ಜನತೆಗೆ ಹಾಗೂ ನಮಗೂ ಕುತೂಹಲ ಇದೆ.
ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರು ಹರಿದಾಡುತ್ತಿತ್ತು, ಅದು ಅಚ್ಚರಿ ವಿಷಯವೇನಲ್ಲ. ಆದರೆ ಎಸ್‌ಐಟಿ ಅಧಿಕಾರಿಗಳು ನಡೆಸುವ ಹೆಚ್ಚಿನ ತನಿಖೆಯಿಂದ ಸತ್ಯಾಂಶವು ತಿಳಿಯಲಿದೆ ಎಂದು ಹೇಳಿದರು.
ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವವನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಲಿದ್ದಾರೆ. ಇದಕ್ಕೆ ಸ್ಕ್ರಿಪ್ಟ್ ರಚಿಸಿದವರು, ನಿರ್ಮಾಪಕರು, ಸ್ಥಳ ಯಾವುದು ಎಂಬ ಎಲ್ಲಾ ವಿಚಾರಗಳನ್ನು ಪರಿಶೀಲಿಸಲು ವಿಧಾನಸಭೆಯಲ್ಲು ಹೇಳಿದ್ದೇವೆ. ಸದ್ಯದಲ್ಲೇ ಸತ್ಯಾಂಶ ಹೊರ ಬೀಳಲಿದೆ ಎಂದು ಮಾಹಿತಿ ನೀಡಿದರು.
ಸಿಡಿ ಪ್ರಕರಣಲ್ಲಿ ರಾಜಕಾರಣಿಗಳನ್ನೆ ಗುರಿ ಮಾಡಲಾಗುತ್ತದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಂತ್ರಸ್ತೆಯು ವಿಡಿಯೊ ಮೂಲಕ ಕೆಲವು ನಾಯಕರ ಹೆಸರೇಳಿದ್ದಾರೆ. ಸಂತ್ರಸ್ತೆಗೆ ಯಾರಾದರೂ ಇಂತವರ ಹೆಸರೇಳಿ ಎಂದು ಹೇಳಿಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
*ಎಸ್‌ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ:*
ಭಾರತದಲ್ಲೇ ಕರ್ನಾಟಕ ಪೊಲೀಸರು ಸಮರ್ಥರಿದ್ದು, ರಾಜಕೀಯ ಒತ್ತಡಗಳಿಗೆ ಮಣಿಯದೆ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುತ್ತಾರೆ. ಎಸ್ಐಟಿಯಲ್ಲಿ ಉತ್ತಮವಾದ ಅಧಿಕಾರಿಗಳಿದ್ದು, ಸಂತ್ರಸ್ತೆಗೆ ರಕ್ಷಣೆ ನೀಡಲಿದ್ದಾರೆ. ಸಂತ್ರಸ್ತೆಯು ಸೂಕ್ತ ಅನ್ನಿಸುವ ಸ್ಥಳದಲ್ಲಿ ಮಾಹಿತಿ ನೀಡಲು ಒಪ್ಪಿದರೆ, ಪೊಲೀಸರ ರಕ್ಷಣೆಯಲ್ಲಿ ತನಿಖೆ ನಡೆಯಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ರಕ್ಷಣೆ ನೀಡುವುದಿಲ್ಲ ಎಂಬುದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಎಂ.ಜಿ.ಎ ಪ್ರಧಾನ ಕಾರ್ಯದರ್ಶಿ ಹೆಚ್.ನಟರಾಜ್, ಎಂ.ಎಂ.ಜಿ.ಎ ಅಧ್ಯಕ್ಷ ವಿಜಯರಮೇಶ್, ಉಪಾಧ್ಯಕ್ಷ ಲೋಕೇಶ್, ನಿವೃತ್ತ ಸೈನ್ಯಾಧಿಕಾರಿ ಮೇಜರ್ ಶ್ರೀಧರ್ ಸೇರಿದಂತೆ ಇತರರು ಹಾಜರಿದ್ದರು.