ವಾಟ್ಸಪ್ ಫೇಸ್ಬುಕ್ ಇನ್ಸ್ಟಾಗ್ರಾಮ್ ಬಂದ್ – 9 ಗಂಟೆಯಲ್ಲಿ ಜುಕರ್‌ಬರ್ಗ್‌ಗೆ 44 ಸಾವಿರ ಕೋಟಿ ನಷ್ಟ
ವಿಶ್ವದಾದ್ಯಂತ ಸೋಮವಾರ ಸಾಮಾಜಿಕ ಜಾಲತಾಣಗಳ ವಾಟ್ಸಾಪ್ ಫೇಸ್ಬುಕ್ ಇನ್ಸ್ಟಾಗ್ರಾಮ್ ತಾಂತ್ರಿಕ ತೊಂದರೆಯಿಂದ ಸೋಮವಾರ ಸ್ಥಗಿತಗೊಂಡ ಪರಿಣಾಮ ಫೇಸ್ಬುಕ್ ಮಾಲೀಕರಾದ ಮಾರ್ಕ್ ಜುಕರ್ಬರ್ಗ್ ರವರಿಗೆ 44 ಸಾವಿರ ಕೋಟಿ ನಷ್ಟ ಉಂಟಾಗಿದೆ.
ಕ್ಷಮೆ ಕೋರಿದ ಫೇಸ್ಬುಕ್ ಮಾಲಿಕ ಮಾರ್ಕ್ ಜುಕರ್ಬರ್ಗ್.
ಸಾಮಾಜಿಕ ಜಾಲತಾಣಗಳ ಫೇಸ್ಬುಕ್ ವಾಟ್ಸ್ಅಪ್ ಇನ್ಸ್ಟಾಗ್ರಾಮ್ ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಸಂದೇಶ ರವಾನೆಯಾಗಿದೆ ವಿಶ್ವದಾದ್ಯಂತ ಗ್ರಾಹಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಗೊಂದಲಕ್ಕೀಡುಮಾಡಿತ್ತು ಇದಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ ಮಾಲೀಕರಾದ ಮಾರ್ಕ್ ಜುಕರ್ಬರ್ಗ್ ಅವರು ತಾಂತ್ರಿಕ ತೊಂದರೆಯಿಂದಾಗಿ ವಿಶ್ವದಾದ್ಯಂತ ಗ್ರಾಹಕರಿಗೆ ತೊಂದರೆ ಉಂಟಾಗಿದ್ದು ಅದಕ್ಕಾಗಿ ಮಾರ್ಕ್ ಜುಕರ್ಬರ್ಗ್ ಅವರು ಗ್ರಾಹಕರಲ್ಲಿ ಕ್ಷಮೆ ಕೋರಿದ್ದಾರೆ
ಸಹಜಸ್ಥಿತಿಗೆ ಮರಳಿದ ಸಾಮಾಜಿಕ ಜಾಲತಾಣಗಳು
ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ (WhatsApp), ಫೇಸ್‍ಬುಕ್ (Facebook) ಮತ್ತು ಇನ್‍ಸ್ಟಾಗ್ರಾಂ (Instagram) ಜಗತ್ತಿನಾದ್ಯಂತ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದ್ದವು. ಮಧ್ಯರಾತ್ರಿ 3.30ರ ವೇಳೆಗೆ ವಾಟ್ಸಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತೆ ಸಹಜ ಸ್ಥಿತಿಗೆ ಮರಳಿದೆ.