ಬೆಲೆ ಏರಿಕೆ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಪ್ರತಿಭಟನೆಬೆಲೆ
ತುಮಕೂರು_ಪೆಟ್ರೋಲ್, ಡೀಸೆಲ್, ಆಟೋ, ಎಲ್.ಪಿ.ಜಿ, ಇತ್ಯಾದಿಗಳ ವಿಪರೀತ ಬೆಲೆ ಏರಿಕೆ ಖಂಡಿಸಿ ಹಾಗೂ ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ವತಿಯಿಂದ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರಕಾರದ ಅವೈಜ್ಞಾನಿಕ ನೀತಿಗಳಿಂದ ಬಡ ಮಧ್ಯಮ ವರ್ಗ ದಿನನಿತ್ಯ ಸಂಕಷ್ಟ ಎದುರಿಸುವಂತಾಗಿದೆ.
ಕೊರೋನಾ ಬಿಕ್ಕಟ್ಟು ಆರ್ಥಿಕ ಮುಗ್ಗಟ್ಟಿನಿಂದ ದುಸ್ತರವಾದ ಬಡ ಮಧ್ಯಮ ಶ್ರಮಿಕ ವರ್ಗದ ಜನಜೀವನ ಪೆಟ್ರೋಲ್, ಡೀಸೆಲ್, ಆಟೋ, ಎಲ್.ಜಿ.ಗಳ ವಿಪರೀತ ಬೆಲೆ ಏರಿಕೆಯ ಕಾರಣಗಳಿಂದ ಗಾಯದ ಮೇಲೆ ಬರೆ ಎಳೆದಂತಾಗಿ ಬಂಧನ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಸಾರ್ವಜನಿಕರ ಜೀವನ ದುಸ್ತರವಾಗಿದೆ
ಜಾಗತೀಕವಾಗಿ ಉತ್ಪತ್ತಿಯಾದ ಇಂಧನಕ್ಕೆ ಕೋವಿಡ್ ಕಾಲದಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಕಾರಣದಿಂದ ಬೇಡಿಕೆ ಕಡಿಮೆಯಾದ ಸಂದರ್ಭದಲ್ಲಿಯೂ ಕೇಂದ್ರ ಸರಕಾರ ನಮ್ಮ ದೇಶದಲ್ಲಿ ಇಂಧನದ ಬೆಲೆ ನಿಯಂರ್ತಣಕ್ಕೆ ತರಲಿಲ್ಲ ಆದ್ದರಿಂದ ಕೋವಿಡ್, ಮತ್ತು ಇನ್ನಿತರ ಕಾರಣಗಳಿಂದ ತತ್ತರಿಸಿದ ಬಡ ಮಧ್ಯಮ ಶ್ರಮಿಕ ವರ್ಗದ ಬದುಕಿಗೆ ಬೆಲೆ ಏರಿಕೆಯ ಕೊಳ್ಳಿ ಇಡದೆ ಬದುಕು ಕಟ್ಟಲು ಸರಕಾರ ನೇರವಾಗಿ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಬೇಕೆಂದು ಸೋಶಿಯಲ್ ಡೆಮಾಟೆಕ್ ಟ್ರೇಡ್ ಯೂನಿಯನ್ S.D,T.U, ಆಟೋ ಚಾಲಕರ ಯೂನಿಯನ್ ತುಮಕೂರು ಹೆಚ್ಚು ಸಂಪತ್ತಿಯಿಂದ ತುಮಕೂರು ಜಿಲ್ಲಾ ರಿಗಳ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ – ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಮುಬಾರಕ್ ಪಾಷ, ಜಿಲ್ಲಾ ಕಾರ್ಯದರ್ಶಿ ಜಬಿ ಉಲ್ಲಾ, ಖಜಾಂಚಿ ನಯಾಝ್ ಪಾಷಾ, ಉಪ ಕಾರ್ಯದರ್ಶಿ ನೇಮತ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು