ಸ್ಟಾರ್ಟರ್ ಬಾಕ್ಸ್ನಲ್ಲಿ ನಲ್ಲಿದ್ದ ಹಾವು ರಕ್ಷಣೆ
ತುಮಕೂರಿನ ಜಯನಗರದ ಶಿವಕುಮಾರ್ ಅವರ ಮನೆಯ ಮೋಟರ್ ಸ್ಟಾರ್ಟರ್ ನ ಒಳಗೆ ಸೇರಿಕೊಂಡಿದ್ದ ಕೇರೆ ಹಾವನ್ನು (ರ‍್ಯಾಟ್ ಸ್ನೇಕ್) ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.
ಸುಮಾರು 2.5 ಅಡಿ ಉದ್ದದ ಕೇರೆ ಹಾವು ಸ್ಟಾರ್ಟರ್ ನ ಒಳಗೆ ಹೋಗುವುದನ್ನ ಗಮನಿಸಿದ ಮನೆಯವರು ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಚಳಿಗಾಲವಾದ್ದರಿಂದ ಹಾವುಗಳು ಬೆಚ್ಚಗಿನ ಸ್ಥಳದಲ್ಲಿ ಸೇರಿಕೊಳ್ಳುವುದು ಸಹಜವೆಂದು ಉರಗ ತಜ್ಞ ಮನು ತಿಳಿಸಿದರು.