ತುಮಕೂರು ನಗರದ ಅಭಿವೃದ್ಧಿ ಕುಂಠಿತ _ಶಾಸಕ ರಫೀಕ್ ಅಹಮದ್
ತುಮಕೂರು- ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ಮಾರ್ಟ್ಸಿಟಿಗೆ ತುಮಕೂರು ನಗರ ಆಯ್ಕೆಯಾಗಿದ್ದು, ನಗರದಲ್ಲಿ ಇದರಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ದುಂದುವೆಚ್ಚ ಮಾಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ಮಾಜಿ ಡಾ. ಎಸ್.ರಫೀಕ್ ಅಹಮದ್ ಆರೋಪಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, ೨೦೧೫ರಲ್ಲಿ ಕೇಂದ್ರ ಸರ್ಕಾರ ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆ ಮಾಡಿದ ೧೦೦ ನಗರಗಳಲ್ಲಿ ತುಮಕೂರು ಸೇರಿದ್ದು, ತುಮಕೂರನ್ನು ಸುಂದರ ನಗರವಾಗಿಸುವ ಕನಸು ನನಸಾಗಿಲ್ಲ ಎಂದು ದೂರಿದರು.
ನಗರದ ನಾಗರಿಕರು ಸ್ಮಾರ್ಟ್ಸಿಟಿ ಯೋಜನೆಗೆ ತುಮಕೂರು ಆಯ್ಕೆಗೊಂಡಿದ್ದಕ್ಕೆ ಸಂತೋಷಗೊoಡಿದ್ದು, ಕಾಮಗಾರಿಗಳ ಅದ್ವಾನದಿಂದ ಬೇಸರಗೊಂಡಿದ್ದಾರೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೇಂದ್ರ ಸರ್ಕಾರ ೨೯೪ ಕೋಟಿ, ರಾಜ್ಯ ಸರ್ಕಾರ ೨೯೭ ಕೋಟಿ ಸೇರಿ ಒಟ್ಟು ೫೯೧ ಕೋಟಿ ರೂ. ಅನುದಾನ ಬಂದಿದ್ದು, ಇದರಲ್ಲಿ ೪೭೧ ಕೋಟಿ ರೂ. ಖರ್ಚಾಗಿದೆ. ಉಳಿಕೆ ೧೨೦ ಕೋಟಿ ರೂ. ಹಾಗೆ ಇದೆ ಎಂದರು.
ಸ್ಮಾರ್ಟ್ಸಿಟಿ ಕಾಮಗಾರಿ ಅನುಷ್ಠಾನದಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಆಧ್ಯತೆ ನೀಡಬೇಕು. ಇದನ್ನು ಬಿಟ್ಟು ಬೇರೆ ಕಡೆ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ನಗರದ ಮೂಲಭೂತ ಸೌಕರ್ಯಕ್ಕೆ ಒತ್ತುಕೊಡುವುದನ್ನು ಬಿಟ್ಟು ಅನಾವಶ್ಯಕ ಕಾಮಗಾರಿಗಳಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ೧೮೮೫ ರಿಂದ ೧೯೪೭ರ ತನಕ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದ ಅವರು, ಬಿಜೆಪಿ ದೇಶಕ್ಕಾಗಿ ಕಾಂಗ್ರೆಸ್‌ನ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾoಧಿಯವರು ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ತಂದರೆ ಬಿಜೆಪಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಳ್ಳವನೆ ಭೂಮಿಯ ಒಡೆಯ ಎನ್ನುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಮಾಜಿ ಮೇಯರ್ ಫರೀದಾಬೇಗಂ, ಮುಖಂಡರಾದ ನಯಾಜ್ ಅಹಮದ್, ಆಟೋ ರಾಜು, ಜೆ.ಕುಮಾರ್, ಮೆಹಬೂಬ್‌ಪಾಷ, ಪುಟ್ಟರಾಜ್, ಮಹೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.