ತಾತ್ಕಾಲಿಕ ಪರಿಹಾರದ ಮೂಲಕ ಮನೆಗೆ ಮರಳಿದ ನಿವಾಸಿಗಳು

ತಾತ್ಕಾಲಿಕ ಪರಿಹಾರದ ಮೂಲಕ ಮನೆಗೆ ಮರಳಿದ ನಿವಾಸಿಗಳು.

 

ಕಳೆದ ಮೂರು ದಿನಗಳ ಹಿಂದೆ ತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ಮಾಲೀಕರೊಬ್ಬರು ಬ್ಯಾಂಕ್ನಿಂದ ಪಡೆದಿದ್ದ ಸಾಲ ತೀರಿಸಲಾಗದೆ ಮಂಜಣ್ಣ ಎನ್ನುವ ಮಾಲೀಕರಿಂದ ಅವರಿಗೆ ಸಂಬಂಧಪಟ್ಟ ಮೂರು ಕಟ್ಟಡಗಳಿಗೆ ಕೆನರಾ ಬ್ಯಾಂಕ್ ಹಾಗೂ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಮೂರು ಕಟ್ಟಡಗಳನ್ನು ಜಪ್ತಿ ಮಾಡಲಾಗಿತ್ತು.

 

ಇದರ ಮೂಲಕ ಮೂರು ಕಟ್ಟಡಗಳಲ್ಲಿ ವಾಸವಿದ್ದ 32 ಕುಟುಂಬಗಳು ಬೀದಿಗೆ ಬಿದ್ದವು ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು, ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್, ಕಟ್ಟಡದ ಮಾಲೀಕ ಮಂಜಣ್ಣ ಸೇರಿದಂತೆ ಹಲವರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು.

 

 

ಸ್ಥಳೀಯ ಮುಖಂಡರ ಮಧ್ಯಸ್ಥಿಕೆ ಮೂಲಕ ಬ್ಯಾಂಕಿಗೆ ಸಂದಾಯವಾದ ಬೇಕಿದ್ದ ಹಣಕ್ಕೆ ತಾತ್ಕಾಲಿಕ ಸಮಯ ದೊರೆತಿದ್ದು ಬ್ಯಾಂಕಿಗೆ ಸ್ವಲ್ಪ ಹಣವನ್ನು ಕಟ್ಟುವ ಮೂಲಕ ಬ್ಯಾಂಕ್ನಿಂದ ಸಿಸ್ ಮಾಡಲಾದ ಮನೆಗಳ ಬಾಗಿಲು ತೆರೆಯಲಾಗಿದ್ದು ಮೂರುದಿನಗಳಿಂದ ಸಾಕಷ್ಟು ತೊಂದರೆಗೀಡಾಗಿದ್ದಬಾಡಿಗೆದಾರರಿಗೆ ಸಂತೋಷದಿಂದ ಮನೆಗೆ ಮರಳಿದ್ದಾರೆ. ಈ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಕಟ್ಟಡದ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದ್ದು ಮುಂದಿನ ಕೆಲ ದಿನದಲ್ಲಿ ಬ್ಯಾಂಕಿಗೆ ಸಂದಾಯವಾಗ ಬೇಕಾಗಿರುವ ಹಣವನ್ನು ಕಟ್ಟಲು ಮನೆಯ ಮಾಲೀಕರಿಗೆ ಅವಕಾಶ ನೀಡಲಾಗಿದೆ.

 

ಈ ಮೂಲಕ ಕಟ್ಟಡದಲ್ಲಿ ವಾಸವಿದ್ದ ಕುಟುಂಬಗಳು ಮತ್ತೆ ಮನೆಗೆ ಮರಳುವಂತಾಗಿದೆ , ಬ್ಯಾಂಕ್ನಿಂದ ಸಿಸ್ ಆದಾಗಿನಿಂದ ಕಟ್ಟಡದಲ್ಲಿ ವಾಸವಿದ್ದ ಕುಟುಂಬಗಳು ಪರಿಚಿತರ ಮನೆಗಳಲ್ಲಿ ಆಶ್ರಯ ಪಡೆದು ಸಾಕಷ್ಟು ತೊಂದರೆಗೀಡಾಗಿದ್ದಾರು, ಶಾಲೆಗೆ ಮರಳುತ್ತಿದ್ದ ಮಕ್ಕಳಿಗೆ ಶಾಲೆಗೆ ತೆರಳಲಾಗದೆ ಕಾಲಕಳೆಯುತ್ತಿದ್ದರು, ವಯೋವೃದ್ಧರು ಮಾತ್ರೆ ಬಟ್ಟೆ ಸಾಮಾನುಗಳು ಇಲ್ಲದೆ ಮೂರು ದಿನಗಳಿಂದ ಸಾಕಷ್ಟು ತೊಂದರೆ ಅನುಭವಿಸಿದರು ಆದರೆ ಅಂತೂಇಂತೂ ತಾತ್ಕಾಲಿಕ ಶಮನ ದೊರೆತಿದ್ದು ಮನೆಯ ಮಾಲೀಕ ಈಗಲಾದರೂ ಎಚ್ಚೆತ್ತುಕೊಂಡರೆ ಒಳಿತು ಎಂದು ಅಕ್ಕಪಕ್ಕದ ನಿವಾಸಿಗಳು ಮಾತನಾಡುತ್ತಿದ್ದರು.

 

 

ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್ ಮಾತನಾಡಿ ಸ್ಥಳೀಯ ನಿವಾಸಿಗಳು ಹಾಗೂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವು ಇದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಸಹಕರಿದ್ದಾರೆ ಹಾಗಾಗಿ ತೊಂದರೆಗೀಡಾಗಿದ್ದಕುಟುಂಬಗಳು ಮತ್ತೆಮನೆಗೆ ಮರಳು ವಂತಾಗಿದೆ ಇನ್ನು ಬ್ಯಾಂಕ್ನವರು ನೀಡಿರುವ ಸಮಯದಲ್ಲಿ ಬಿಲ್ಡಿಂಗ್ ಮಾಲಿಕ ಮಂಜಣ್ಣ ರವರು ಸಹ ಬ್ಯಾಂಕಿಗೆ ಸಂದಾಯವಾಗಬೇಕಿರುವ ಹಣವನ್ನು ಕಟ್ಟಲು ಒಪ್ಪಿಕೊಂಡಿದ್ದಾರೆ ಅದರಂತೆ ನಡೆದುಕೊಳ್ಳುವ ವಿಶ್ವಾಸ ತಮಗಿದೆ ಎಂದರು.

 

 

ಇದೇ ಸಂದರ್ಭದಲ್ಲಿ ಕಟ್ಟಡದಲ್ಲಿ ವಾಸವಿದ್ದ ಕುಟುಂಬಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ ಮನೆಗೆ ಮರಳಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!