ಶ್ರೀಗಳ ಪುಣ್ಯಸ್ಮರಣ ದಿನಾವನ್ನು ದಾಸೋಹ ದಿನವನ್ನಾಗಿ ಆಚರಿಸಲು ಆದೇಶ-ಬಿ.ಎಸ್.ಯಡಿಯೂರಪ್ಪ

ಶ್ರೀಗಳ ಪುಣ್ಯಸ್ಮರಣ ದಿನಾವನ್ನು ದಾಸೋಹ ದಿನವನ್ನಾಗಿ ಆಚರಿಸಲು ಆದೇಶ-ಬಿ.ಎಸ್.ಯಡಿಯೂರಪ್ಪ

 

ತುಮಕೂರು: ಶ್ರೀಗಳ ಪುಣ್ಯಸ್ಮರಣ ದಿನಾವನ್ನು ದಾಸೋಹ ದಿನವನ್ನಾಗಿ ಆಚರಿಸಲು ಆದೇಶ ಹೊರಡಿಸುತ್ತೇನೆ, ಸಿದ್ಧಗಂಗಾ ಮಠದ ಅಭಿವೃದ್ಧಿಗೆ ಬದ್ಧ ನಾಗಿರುತ್ತೇನೆ . ಪ್ರತಿ ಸಂದರ್ಭದಲ್ಲಿಯೂ ನನಗೆ ಮಾರ್ಗದರ್ಶನ ಮಾಡುತ್ತಿದ್ದ ಶ್ರೀಗಳು ಎಂದಿಗೂ ದಾಸೋಹ ಮಾಡದೇ ಹೋಗಲು ಬಿಡುತ್ತಿರಲಿಲ್ಲ ಎಂದ ಅವರು ಬಸವಣ್ಣ ಅವರ ತತ್ವಗಳನ್ನು ಅನುಸರಿಸಿ ಧಾರ್ಮಿಕ ಸಂಸ್ಥೆಗಳ ಮಾನವೀಯ ಮುಖವನ್ನು ಜಗತ್ತಿಗೆ ತೋರಿಸಿದರು ಎಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

 

ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರ ೨ನೇ ಸಂಸ್ಮರಣೋತ್ಸವ ಕಾರ್ಯದಲ್ಲಿ ಮಾತನಡುತ್ತ ವೀರಾಪುರದಲ್ಲಿ ಪುತ್ಥಳಿ ಸ್ಥಾಪನೆಗೆ ೨೫ ಕೋಟಿ ಬಿಡುಗಡೆ ಮಾಡಲಾಗಿದೆ, ಮ್ಯೂಸಿಯಂ ನಿರ್ಮಾಣಕ್ಕೆ ೧೦ ಕೋಟಿ ಅನುದಾನ ಶೀಘ್ರ ಬಿಡುಗಡೆ ಮಾಡಲಿದ್ದು, ವೀರಾಪುರ ತೀರ್ಥ ಕ್ಷೇತ್ರವಾಗಿ ಅಭಿವೃದ್ಧಿ ಸಿದ್ದ ಎಂದರು.

 

ವೀರಾಪುರದಲ್ಲಿ ವಿಶ್ವಮಟ್ಟದಲ್ಲಿ ಮ್ಯೂಸಿಯಂ ಹಾಗೂ ಪುತ್ಥಳಿ ನಿರ್ಮಾಣದಲ್ಲಿ ಸಹಕಾರ ನೀಡುವುದಾಗಿ ತಿಳಿಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶ್ರೀಗಳ ಆಶಯವನ್ನು ಈಡೇರಿಸುವಂತಹ ಪಠ್ಯವನ್ನು ಅಳವಡಿಸುವ ಮೂಲಕ ದೇಶದಲ್ಲಿಯೇ ಉತ್ತಮ ರಾಜ್ಯವನ್ನಾಗಿಸುವುದಾಗಿ ಹೇಳಿದರು.

 

ಪಂಚಮಸಾಲಿ ಮಠದ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ ಮಾತನಾಡಿ, ಶ್ರೀಗಳ ಲಿಂಗೈಕ್ಯವಾದ ದಿನವನ್ನು ದಾಸೋಹ ದಿನವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

 

ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಮಾತನಾಡಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹವನ್ನು ಮಾಡಿರುವ ಸ್ವಾಮೀಜಿಗಳ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಚಾರ ಎಂದ ಅವರು, ವಿದ್ಯಾರ್ಥಿಗಳಿಗೆ ದೇವವಾಣಿ ಸಂಸ್ಕೃತವನ್ನು ಕಲಿಸುವ ಮೂಲಕ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಎಂದರು.

 

ಜೀವನದಲ್ಲಿ ದೇವರು ಮತ್ತು ಭಕ್ತಿ ಮುಖ್ಯವಾಗಿದ್ದು, ಬಡತನ, ಅನರಕ್ಷತನದಿಂದ ವಿಮುಕ್ತರಾಗಲು ಹೋರಾಡುತ್ತೇವೆ, ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಇರುತ್ತಿತ್ತು ಅಂತಹ ಶಿಸ್ತು ಸಿದ್ಧಗಂಗಾ ಗುರುಕುಲದಲ್ಲಿ ಕಾಣ ಬಹುದಾಗಿದೆ ಎಂದರು.

 

ಪ್ರಾಚೀನ ಭಾರತದಲ್ಲಿ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ನಮ್ಮ ತಕ್ಷಶೀಲಾ, ಉಜ್ಜೈಯನಿ ವಿಶ್ವವಿದ್ಯಾಲಯದಲ್ಲಿ ಕಲಿಯಲು ಬರುತ್ತಿದ್ದರು, ಕಾಲ ಕ್ರಮೇಣ ಅದು ಕಡಿಮೆಯಾಯಿತು ಅದನ್ನು ಭಾರತದ ಸಾಧು ಸಂತರು ಪುನರ್ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅರವಿಂದರು ಹೇಳಿದ್ದಂತೆ ಭಾರತೀಯರು ಮತ್ತೆ ಒಂದಾಗಬೇಕಾಗಿದೆ ಎಂದರು.

 

 

ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಅವರು ಮಾತನಾಡಿ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಪಡೆದುಕೊಂಡಿದ್ದು ನಾಡಿನ ಪುಣ್ಯ ಎನ್ನುವ ಭಾವನೆ ಭಕ್ತರಲ್ಲಿದೆ, ಪರೋಪಕಾರಕ್ಕಾಗಿ ಭಗವಂತ ಸೃಷ್ಟಿಸಿದವರಲ್ಲಿ ಶ್ರೀಗಳು ಒಬ್ಬರು, ತನು, ಮನ, ಧನವನ್ನು ಸಮಾಜಕ್ಕೆ ಅರ್ಪಣೆ ಮಾಡಿಕೊಂಡು ನಾಡಿಗೆ ಬೆಳಕು ಕೊಟ್ಟವರು ಶಿವಕುಮಾರಸ್ವಾಮೀಜಿ ಎಂದರು.

ಕಾಯಕ ಮತ್ತು ದಾಸೋಹ ಬಸವಣ್ಣ ಅವರು ಭಾರತಕ್ಕೆ ನೀಡಿದ್ದರು, ಆತ್ಮನಿರ್ಬರ ಭಾರತವನ್ನು ೧೨ನೇ ಶತಮಾನದಲ್ಲಿಯೇ ನೀಡಿದ್ದರು, ಸಮಾಜ ಮತ್ತು ವ್ಯಕ್ತಿ ಉತ್ತಮವಾಗಲು ಕಾಯಕ ನಿಷ್ಠರಾಗಬೇಕೆಂದರು, ಅದರಂತೆ ಬದುಕಿದವರು ಶ್ರೀಗಳು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ದೇಶಕ್ಕೆ ಭವಿಷ್ಯ ಎಂದು ಅರಿತು ಕಾರ್ಯನಿರ್ವಹಿಸಿದರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡೆಯುರಪ್ಪ ,ಸಿದ್ದಗಾಂಗ ಮಠ ಅಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮಿಜಿ ,ಸಚಿವ ಅಶ್ವಥ್ ನಾರಾಯಣ್, ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ವಚನದ ಸ್ವಾಮಿ ,ಸಂಸದ ಬಸವರಾಜ್,ಶಾಸಕ ಮಸಲೇ ಜಯರಾಮ್,ರಾಜೇಶ್ ಗೌಡ,ಎಮ್.ಎಲ್.ಸಿ.ಚಿದನಾಂದ್ ಗೌಡ, ಜಿಲ್ಲಾದಿಕಾರಿ ಡಾ,ರಾಕೇಶ್ ಕುಮಾರ್,ಎಸ್.ಪಿ. ಸೇರಿದಂತೆ ಹಲವು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!