ಪಾಲೇನಹಳ್ಳಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಚಿತ್ರದೇವರ ದೇವಸ್ಥಾನ ನಿರ್ಮಾಣದ ಅಂಗವಾಗಿ ಶಿಲಾಸ್ತಂಭ ರಥಯಾತ್ರೆ

ಪಾಲೇನಹಳ್ಳಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಚಿತ್ರದೇವರ ದೇವಸ್ಥಾನ ನಿರ್ಮಾಣದ ಅಂಗವಾಗಿ ಶಿಲಾಸ್ತಂಭ ರಥಯಾತ್ರೆ.

 

ತುಮಕೂರು – ಗೊಲ್ಲ ಸಮುದಾಯದ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಳ್ಳುತ್ತಿರುವ ಪಾವಗಡ ತಾಲೂಕು ಪಾಲೇನಹಳ್ಳಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಚಿತ್ರದೇವರ ದೇವಸ್ಥಾನ ನಿರ್ಮಾಣದ ಅಂಗವಾಗಿ ಶಿಲಾಸ್ತಂಭ ರಥಯಾತ್ರೆ ಹಮ್ಮಿಕೊಂಡಿರುವುದಾಗಿ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹಳ್ಳಿ ಚಿಕ್ಕಣ್ಣ ತಿಳಿಸಿದರು.

 

 

ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ, ಇದಕ್ಕಾಗಿ ೧೦ ಎಕರೆ ಜಾಗ ಮೀಸಲಿಟ್ಟಿದ್ದು ೧ ಎಕರೆಯಲ್ಲಿ ಬೃಹದಾಕಾರದ ದೇವಸ್ಥಾನ ನಿರ್ಮಾಣವಾಗಲಿದ್ದು, ೫೦ ಕೋಟಿ ಅಂದಾಜು ವೆಚ್ಚದ ನಿಗಧಿಪಡಿಸಲಾಗಿದೆ ಎಂದರು.

 

೧೦೮ ಕಂಬಗಳ ಈ ದೇವಾಲಯಕ್ಕೆ ಅಗತ್ಯವಿರುವ ಕಲ್ಲುಗಳನ್ನು ೫ ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ್ದು, ಈ ಶಿಲಾಸ್ತಂಭಗಳ ಮೆರವಣಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿದ್ದು, ಮುಂದಿನ ೫ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

 

ಬರುವ ಮೇ ೫ರ ಬಸವ ಜಯಂತಿ ದಿನ ಶಿಲಾಸ್ತಂಭ ಪೂಜೆಯ ಮೂಲಕ ಸಂಕಲ್ಪ ಮಾಡಲಿದ್ದು, ಏ.೩೦ ರಂದು ಸಂಜೆ ಬೆಂಗಳೂರಿನ ನಾಗದೇವನಹಳ್ಳಿ ಭೂತಪ್ಪನ ದೇವಸ್ಥಾನದಿಂದ ರಥಯಾತ್ರೆ ಆರಂಭಗೊAಡು ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಮೇ ೩ ರಂದು ಬೆಳಿಗ್ಗೆ ೯ ಗಂಟೆಗೆ ಪಾಲೇನಹಳ್ಳಿ ಚಿತ್ರದೇವರ ಪೌಳಿಗೆ ಆಗಮಿಸಲಿದೆ ಎಂದರು.

 

ಮೇ ೧ ರಂದು ಜಿಲ್ಲೆಗೆ ಆಗಮಿಸಲಿರುವ ರಥಯಾತ್ರೆ ಟೌನ್‌ಹಾಲ್ ಮೂಲಕ ಕೊರಟಗೆರೆ, ಮಧುಗಿರಿ ಮಾರ್ಗವಾಗಿ ನೆರೆಯ ಆಂಧ್ರ ಪ್ರದೇಶದಲ್ಲೂ ಸಂಚರಿಸಲಿದೆ ಎಂದರು.

 

ಈ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಕಲ್ಯಾಣ ಮಂಟಪ ಸೇರಿದಂತೆ ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು ಇದೇ ಸಂದರ್ಭದಲ್ಲಿ ಮುಖಂಡರಾದ ಜಿ.ಎಂ. ಸಣ್ಣಮುದ್ದಯ್ಯ, ಜಿ.ಚಂದ್ರಶೇಖರಗೌಡ, ವೀರಣ್ಣಗೌಡ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!