ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಜೆಡಿಎಸ್ ಹಿರಿಯ ಮುಖಂಡ ಬೆಳ್ಳಿ ಲೋಕೇಶ್
ತುಮಕೂರು – ಇಂದು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ನ ಹಿರಿಯ ನಾಯಕ ಬೆಳ್ಳಿ ಲೋಕೇಶ್ ಹಾಗೂ ಹಿರಿಯ ಮುಖಂಡ ದೇವರಾಜು ಇವರುಗಳು ಮನ ನೊಂದು ರಾಜೀನಾಮೆ ನೀಡಿರುವಿದಾಗಿ ಹೇಳಿದರು
ನಾನು ಒಬ್ಬ ರೈತ ಕುಟುಂಬ ದಿಂದ ಬಂದಂತಹ ವ್ಯಕ್ತಿ ಅಂಬೇಡ್ಕರ್ ಅವರ ತತ್ವ ಸಿದ್ದಂತಾಗಳನ್ನು ನಂಬಿ ಅನುಸರಿಸುವ ವ್ಯಕ್ತಿ ನಾನು ಎಂದು ಹೇಳಿಕೊಂದಾರಲ್ಲದೆ ಈ ಪತ್ರಿಕಾಗೋಷ್ಠಿ ತುಂಬಾ ನೋವಿನಲ್ಲಿ ಮಾಡುತ್ತಿದ್ದೇನೆ
ನಾನು ಕುಣಿಗಲ್ ನಲ್ಲಿ ವಿದ್ಯಾರ್ಥಿ ಜನತಾದಾಳ ಕಾರ್ಯಕರ್ತನಾಗಿ ರಾಜಕೀಯಕ್ಕೆ ಬಂದ ನಾನು ತುಮಕೂರಿನಲ್ಲಿ ಬೆಳ್ಳಿ ಬ್ಲಡ್ ಬಂಕ್ ತೆರೆದು ಸೇವೆ ಸಲ್ಲಿಸುತ್ತ ಬಂದೆ ನನ್ನ ಪರಿಶ್ರಮದಿಂದಲೇ ತುಮಕೂರಿನಲ್ಲಿ ಡಯಾಲಿಸಿಸ್ ಸೆಂಟರ್ ತೆರೆದು ಹಲವಾರು ರೋಗಿಗಳಿಗೆ ಉಚಿತ ರಕ್ತವನ್ನು ನೀಡಿದ್ದೇವೆ
ನನಗೆ ಜೆಡಿಎಸ್ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನೀಡಿದೆ ನನ್ನನು ರಾಜ್ಯ ಮಟ್ಟದಲ್ಲಿ ಗುರುತಿಸಿ ಸದಸ್ಯತ್ವ ಅಭಿಯಾನಾದ ಜವಾಬ್ದಾರಿ ನನಗೆ ಕೊಟ್ಟಿದ್ದರು ಅದನ್ನು ನಾನು ನಿಷ್ಠಾವಂತನಾಗಿ ಕೆಲಸ ಮಾಡಿ ಅತ್ಯಂತ ಅಧಿಕ ಸದಸ್ಯತ್ವ ಮಾಡಿ ಶಬಸಗಿರಿ ಕೊಟ್ಟು ನನಗೆ ಹುರಿದುಂಬಿಸಿತು
ನಂತರ ನನಗೆ ಕೋಲಾರ ಚಿಕ್ಕಬಳ್ಳಾಪುರ ಚುನಾವಣೆ ಉಸ್ತುವಾರಿ ನೀಡಿದ್ದರು ಅದನ್ನು ಯಶಶ್ವಿಪೂರ್ಣವಾಗಿ ನಿರ್ವಹಣೆ ಮಾಡಿದ್ದ ಪ್ರಯುಕ್ತ ನನಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ಕೊಟ್ಟು ಸಹಕಾರ ಮಾಡಿತ್ತು
ನನಗೆ ತುಮಕೂರು ಜಿಲ್ಲಾ ಜೆಡಿಎಸ್ ಕಡೆಗಣಿಸಿದ ಕಾರಣ ನಾನು ರಾಜೀನಾಮೆ ನೀಡಲು ಪ್ರಮುಖ ಕಾರಣವೆಂದು ಹೇಳಿದರು ಅಲ್ಲದೆ ನಾನು ನಿಯತ್ತಾಗಿ ಕೆಲಸ ಮಾಡಿದ್ದರಿಂದ ನನಗೆ ಈ ರೀತಿಯಾದ ನಿರ್ಧಾರಕ್ಕೆ ಬಂದೆ ನಾನು ಹಲವಾರು ಹಿರಿಯ ಮುಖಂಡರನ್ನು ವಿಚಾರಿಸಲಾಗಿ ಅವರು ಯಾರು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಖಾತಾರಿ ಆದಮೇಲೆ ನಾನು ನಿಲ್ಲಲು ಹೊರಟೆ ಆದರೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಗೋವಿಂದರಾಜು ಅವರನ್ನು ನಮ್ಮ ಪಕ್ಷಕ್ಕೆ ಕರೆ ತಂದು ಅವರಿಗೆ ಟಿಕೆಟ್ ಕೊಟ್ಟರು ಆದರೂ ದೇವೇಗೌಡ ಅವರ ಆದೇಶದಂತೆ ನಾನು ಸಹಕಾರ ಮಾಡಿದೆ
ಇತ್ತೀಚೆಗೆ ನಿಖಿಲ್ ಅವರು ತುಮಕೂರಿಗೆ ಬಂದಾಗ ನನ್ನನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ನನಗೆ ತಿಳಿಯಿತು ನಾನು ಹಲವಾರು ಸಲಹೆ ಸೂಚನೆ ನೀಡಿದ್ದೆ ಆದರೂ ಅವರು ಯಾವದಕ್ಕೂ ಸಹಕಾರ ಮಾಡದೇ ನನ್ನನು ನಿರ್ಲಕ್ಷಿಸುವ ದೋರಣೆ ಮಾಡಿದರು ಎಂದು ಹೇಳಿದರು