ಮೂರನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯ NDRF ನಿಂದ ಬೋಟ್ ಮೂಲಕ ಭೀಮಸಂದ್ರ ಕೆರೆಯಲ್ಲಿ ಕಾರ್ಯಾಚರಣೆ ಆರಂಭ.
ತುಮಕೂರು_ಕಳೆದ ಮೂರು ದಿನಗಳ ಹಿಂದೆ ತುಮಕೂರಿನ ರಿಂಗ್ ರಸ್ತೆಯ ರಾಜ ಕಾಲುವೆಯಲ್ಲಿ ಆಟೋ ಚಾಲಕ ಅಮ್ಜದ್ ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಡಿ ಆರ್ ಎಫ್ ತಂಡದಿಂದ ಎರಡನೆಯ ದಿನದ ಶೋಧ ಕಾರ್ಯ ಆರಂಭವಾಗಿದೆ.
ನಾಪತ್ತೆಯಾಗಿರುವ ಆಟೋ ಚಾಲಕ ಆಮ್ಜಾದ್ ನಾಪತ್ತೆಯಾಗಿ 44 ಗಂಟೆ ಕಳೆದರೂ ಇದುವರೆಗೂ ಆತನ ದೇಹ ಪತ್ತೆಯಾಗಿಲ್ಲ ಆದರೆ ನಾಪತ್ತೆಯಾಗಿರುವ ವ್ಯಕ್ತಿಯ ಎರಡು ಚಪ್ಪಲಿಗಳು ರಾಜ ಕಾಲುವೆಯಲ್ಲಿ ದೊರಕಿದ್ದು ಗಮನಾರ್ಹ ಸಂಗತಿ.
ಇನ್ನು ಭಾನುವಾರ ಸಂಜೆ ಗೃಹ ಸಚಿವ ಅರಗ ಜ್ಞಾನೇಂದ್ರ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸೇರಿದಂತೆ ಹಲವು ಅಧಿಕಾರಿಗಳು ಬಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.
ಈ ವೇಳೆ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ರವರು ನಾಪತ್ತೆಯಾಗಿರುವ ವ್ಯಕ್ತಿಯ ದೇಹ ಸಿಗುವವರೆಗೂ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಮೂರು ದಿನದಿಂದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಂ.
ನಾಪತ್ತೆಯಾಗಿರುವ ವ್ಯಕ್ತಿಯ ಶೋಧ ಕಾರ್ಯ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಅದರ ನೇತೃತ್ವ ವಹಿಸಿರುವ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ , ಪಾಲಿಕೆಯ ಆರೋಗ್ಯ ಅಧಿಕಾರಿ, ಇಂಜಿನಿಯರ್ ಗಳು ಹಿರಿಯ ಪೊಲೀಸ್ ಅಧಿಕಾರಿಗಳು, ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಂ ಹೊಡಿದ್ದು ವ್ಯಕ್ತಿಯ ದೇಹಕ್ಕಾಗಿ ಶೋಧ ಕಾರ್ಯವನ್ನ ತೀವ್ರಗೊಳಿಸಿದ್ದಾರೆ.
ಮಳೆಯ ಕಾರಣ ಕಾರ್ಯಾಚರಣೆಗೆ ಅಡ್ಡಿ.
ಇನ್ನು ಭಾನುವಾರ ಸಂಜೆ ಮತ್ತೊಂದು ಬಾರಿ ಮಳೆಯಾದ ಕಾರಣ ರಾಜ ಕಾಲುವೆಯಲ್ಲಿ ನೀರಿನ ಸೆಳೆತ ಹೆಚ್ಚಾದ ಕಾರಣ ಭಾನುವಾರ ಸಂಜೆ ಕಾರ್ಯಾಚರಣೆಯನ್ನು ನಿಲ್ಲಿಸಿತು ಅದರ ಮುಂದುವರಿದ ಭಾಗವಾಗಿ ಸೋಮವಾರ ಮುಂಜಾನೆ ಕಾರ್ಯಾಚರಣೆ ಪುನರಾರಂಭಗೊಂಡಿದೆ.
ಭೀಮಸಂದ್ರ ಕೆರೆಯಲ್ಲಿ 2 ಬೋಟ್ ಗಳ ಮೂಲಕ ಕಾರ್ಯಾಚರಣೆ.
ಎನ್ ಡಿ ಆರ್ ಎಸ್ ತಂಡದಿಂದ ವ್ಯಕ್ತಿಯ ದೇಹಕ್ಕಾಗಿ ಭೀಮಸಂದ್ರ ಕೆರೆಯಲ್ಲಿ 2 ಬೋಟ್ ಗಳ ಮೂಲಕ ನಾಪತ್ತೆಯಾಗಿರುವ ವ್ಯಕ್ತಿಗಾಗಿ ಕೆರೆಯಲ್ಲಿ ತೀವ್ರ ಶೋಧ ನೆಡೆಸುತ್ತಿದ್ದು 15 ಹೆಚ್ಚು ಎನ್ ಡಿ ಆರ್ ಎಫ್ ಸಿಬ್ಬಂದಿಗಳು ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ.
ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿರುವ ತುಮಕೂರು ಮಹಾನಗರ ಪಾಲಿಕೆ ಆಯುಕ್ತರದ ರೇಣುಕಾ ರವರು ಜಿಲ್ಲಾಧಿಕಾರಿಗಳ ಆದೇಶ ಹಾಗೂ ಮಾರ್ಗದರ್ಶನದಂತೆ ಮೂರನೇ ದಿನವೂ ಶೋಧ ಕಾರ್ಯ ನಡೆಯುತ್ತಿದ್ದು ಎರಡು ಬದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು ರಾಜ ಕಾಲುವೆಯಿಂದ ಪಾಲಿಕೆ ಸಿಬ್ಬಂದಿಗಳು ಹಾಗೂ NDRF ತಂಡದಿಂದ ಭೀಮಸಂದ್ರ ಕೆರೆಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು ಸುಮಾರು 50 ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ
ವರದಿ _ಮಾರುತಿ ಪ್ರಸಾದ್ ತುಮಕೂರು