ಮಳೆ ನೀರಿನಲ್ಲಿ ನಾಪತ್ತೆಯಾದ ವ್ಯಕ್ತಿ ಪತ್ತೆಗೆ ಎನ್ ಡಿ ಆರ್ ಎಫ್ ವತಿಯಿಂದ ಪತ್ತೆ ಕಾರ್ಯ_ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್.
ತುಮಕೂರು_ಶನಿವಾರ ತುಮಕೂರಿನಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ತುಮಕೂರಿನ ವ್ಯಕ್ತಿ ಯೋರ್ವ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾಧಿಕಾರಿಗಳು ಭಾನುವಾರ ಬೆಳಗ್ಗೆ 6ಗೆ ಎನ್ ಡಿ ಆರ್ ಎಫ್ ತಂಡದ ವತಿಯಿಂದ ಕೂಂಬಿಂಗ್ ಆಪರೇಷನ್ ನಡೆಸಲಾಗುವುದು ಎಂದಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿಯ ಪತ್ತೆಗೆ ಎನ್ ಡಿ ಆರ್ ಎಫ್ ತಂಡ, ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನಾಳೆ ಬೆಳಗ್ಗೆ ಕುಂಬಿಂಗ್ ಆಪರೇಷನ್ ನಡೆಸಲಾಗುವುದು ಎಂದರು.
ಇನ್ನು ಘಟನೆ ನಡೆದ ಕೂಡಲೇ ಸ್ಥಳೀಯರೊಂದಿಗೆ ಪತ್ತೆ ಕಾರ್ಯ ಆರಂಭಿಸಿದ್ದು ಇದುವರೆಗೂ ನಾಪತ್ತೆಯಾಗಿರುವ ವ್ಯಕ್ತಿ ಪತ್ತೆಯಾಗಿಲ್ಲ ಹಾಗಾಗಿ ರಾಜ ಕಾಲುವೆ ಸಂಪರ್ಕಿಸುವ ಕೆರೆ ಭಾಗ ವನ್ನು ಎನ್. ಡಿ.ಅರ್. ಎಫ್ ತಂಡ ಪರಿಶೀಲಿಸಲಿದ್ದು ಪುನಃ ವ್ಯಕ್ತಿ ನಾಪತ್ತೆಯಾಗಿರುವ ಸ್ಥಳದಿಂದ ಸ್ಥಳೀಯ ಅಗ್ನಿಶಾಮಕ ದಳ ಮಹಾನಗರ ಪಾಲಿಕೆ ವತಿಯಿಂದ ಮತ್ಹೊಂದು ಕಡೆ ಪತ್ತೆ ಕಾರ್ಯ ನಡೆಯಲಿದೆ .
ಇನ್ನು ಕೆರೆಯಲ್ಲಿ ಶೋಧಕಾರಿಯಕ್ಕೆ ಮಂಡ್ಯದ ಎನ್ ಡಿ ಆರ್ ಎಫ್ ತಂಡ ಆಗಮಿಸಲಿದೆ ಶನಿವಾರ ರಾತ್ರಿಯೆ ಎನ್ ಡಿ ಆರ್ ಎಫ್ ತಂಡ ತುಮಕೂರಿಗೆ ತಲುಪಲಿದ್ದು ಭಾನುವಾರ ಮುಂಜಾನೆ ವ್ಯಕ್ತಿಯ ಪತ್ತೆ ಕಾರ್ಯ ಆರಂಭಿಸಲಾಗುವುದು ಎಂದರು.
ಘಟನೆ ನಡೆದಿರುವುದು ದುರದೃಷ್ಟಕರ ಇನ್ನು ವ್ಯಕ್ತಿ ಜೀವಂತವಾಗಿ ಮರಣಲಿ ಎನ್ನುವುದು ನಮ್ಮೆಲ್ಲರ ಆಶಯ ಇನ್ನು ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕರ್ತವ್ಯ ಲೋಪ ಕಂಡು ಬಂದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು .
ಕತ್ತಲಾಗಿರುವ ಕಾರಣ ಪತ್ತೆ ಕಾರ್ಯವನ್ನು ನಿಲ್ಲಿಸಿ ಮುಂಜಾನೆ ಆರಂಭಿಸಲಾಗುವುದು ಘಟನೆಗೆ ಸಂಬಂಧಿಸಿದಂತೆ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಮೊತ್ತವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ.
ನಾಳೆ ನಡೆಯಲಿರುವ ಕೋಂಬಿಂಗ್ ಆಪರೇಷನ್ ಅಧ್ಯಕ್ಷತೆಯನ್ನು ತುಮಕೂರು ಮಹಾನಗರ ಪಾಲಿಕೆಯ ಕಮಿಷನರ್ ರೇಣುಕಾ ಹಾಗೂ ಅಸಿಸ್ಟೆಂಟ್ ಕಮಿಷನರ್ ಅಜಯ್ ರವರ ನೇತೃತ್ವದಲ್ಲಿ ನಾಳೆ ಪತ್ತೆ ಕಾರ್ಯ ಆರಂಭಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಉದೇಶ್, ಮಹಾನಗರ ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ಪಾಲಿಕೆ ವಿರೋಧ ಪಕ್ಷದ ನಾಯಕ ಕುಮಾರ ಮಂಜುನಾಥ್, ತಾಜುದ್ದೀನ್ ಶರೀಫ್, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು