ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ಗಂಗಾಧರ್ ಸಸ್ಪೆಂಡ್.
ತುಮಕೂರು: ನಗರದ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ವಿದ್ಯೋದಯ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗಂಗಾಧ ರವರನ್ನು ಕಾಲೇಜು ಶಿಕ್ಷಣ ಇಲಾಖೆ ಸಂಖ್ಯೆ:ಕಾಶಿಇ/19/ಅಮಾನತು/ 2022-23/35 ದಿನಾಂಕ:20-09 2022ರಂದು ಆದೇಶ ಮಾಡಿದೆ.
ಗಂಗಾಧ ಮೇಲೆ ವಿದ್ಯೋದಯ ಕಾನೂನು ಕಾಲೇಜಿನ ಆಡಳಿತ ಮಂಡಳಿಯು ಸದರಿ ಕಾಲೇಜಿನ ಪ್ರಾಂಶುಪಾಲರು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಯನ್ನು ನಡೆಸಿದರ ಬಗ್ಗೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಅಮಾನತ್ತುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ಕಾಲೇಜು ಶಿಕ್ಷಣ ಇಲಾಖೆಯು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಆಡಳಿತ ಮಂಡಳಿಯೇ ಶಿಸ್ತು ಪ್ರಾಧಿಕಾರವಾಗಿರುವುದರಿಂದ ಆಡಳಿತ ಮಂಡಳಿಯ ಕೋರಿಕೆಯಂತೆ ಗಂಗಾಧರ್.ಎಸ್.ಕಾನೂನು ಸಹಾಯಕ ಪ್ರಾಧ್ಯಾಪಕರನ್ನು ಸೇವೆಯಿಂದ ಅಮಾನತ್ತುಗೊಳಿಸಲು ಅನುಮತಿ ನೀಡಿ ಸದರಿ ಕಡತವನ್ನು ಆಯುಕ್ತರು ಅನುಮೋದಿಸಿದ ನಂತರ ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಗಂಗಾಧರ್ ಈ ಹಿಂದೆ ಕಾಲೇಜಿನ ಪ್ರಾಂಶುಪಾಲರ ಮೇಲೆ, ಸಹದ್ಯೋಗಿಗಳ ಮೇಲೆ,ಬೋಧಕೇತರರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರುಗಳು ಸಹ ದಾಖಲಾಗಿವೆ.ವಿದ್ಯಾರ್ಥಿಗಳಿಗೆ ನೀಡಿದ್ದ ಆರೋಪವೂ ಇವರ ಮೇಲೆ ಇದೆ.ಕಳೆದ ಕೆಲ ತಿಂಗಳ ಹಿಂದೆ ಒಬ್ಬ ವಿದ್ಯಾರ್ಥಿನಿ ಅಸ್ತವ್ಯಸ್ತ ಆಗಿದ್ದಳು,ಆಡಳಿತ ಮಂಡಳಿ ಇದ್ದರೂ ಸಹ ಅದನ್ನು ಬದಿಗಿರಿಸಿ ಈತನೇ ವಿಶ್ವವಿದ್ಯಾನಿಲಯಕ್ಕೆ ಆಡಳಿತ ಮಂಡಳಿಯ ವಿರುದ್ಧವೇ ಪತ್ರ ಬರೆಯುತ್ತಿದ್ದ ಇಂತಹ ಹತ್ತು ಹಲವಾರು ಈತನ ಮೇಲೆ ಹಲವಾರು ಆರೋಪಗಳಿವೆ. ಇಂತಹ ಶಿಕ್ಷಕರು ಅದರಲ್ಲೂ ಕಾನೂನು ಹೇಳಬೇಕಾದ, ಕಾನೂನು ಕಲಿಸಬೇಕಾದ ಶಿಕ್ಷಕನೇ ಈ ರೀತಿ ಆದರೆ ಬೇರೆಯವರ ಕತೆ ಏನು ಎಂದು ತುಮಕೂರಿನ ಸಾರ್ವಜನಿಕರು ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮಾತನಾಡುತ್ತಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಈತನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಬೇಕು ಹೆಣ್ಣು ಮಕ್ಕಳಿಗೆ ಈತ ನಿರಂತರವಾಗಿ ಕಿರುಕುಳ ನೀಡುತ್ತಿರುವುದು ಅಸಹ್ಯ ಹುಟ್ಟಿಸುತ್ತದೆ. ಕಾಲೇಜಿನ ಆಡಳಿತ ಮಂಡಲಿ ಈತನ ಮೇಲೆ ಕಾನೂನು ಕ್ರಮ ಜರುಗಿಸಿ ನೊಂದ ವಿದ್ಯಾರ್ಥಿಗಳಿಗೆ ನ್ಯಾಯದೊರಕಿಸಬೇಕೆಂದು