ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಗ್ರಾಮಾಂತರ -ಶಾಸಕ ಡಿ.ಸಿ ಗೌರಿಶಂಕರ್
ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ ಗೌರಿಶಂಕರ್ ಅವರು ಚಿಕ್ಕ ನಾರವಂಗಲ ಗ್ರಾಮದ ಕೆರೆ ಕೋಡಿಯಿಂದ ದೊಡ್ಡ ನಾರವಂಗಲ ಕೆರೆ ಕೋಡಿಯವರೆಗೂ ಸಿಸಿ ರಸ್ತೆ ಸಿಸಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ,ಚಿಕ್ಕನಾರವಂಗಲ ಗ್ರಾಮದ ರಸ್ತೆಯಿಂದ ಎಂ.ಎಂ ಕಾವಲ್ ಗುಬ್ಬಿ ತಾಲೂಕು ತುಮಕೂರು ಜಿಲ್ಲೆಯ ಮುಖ್ಯ ರಸ್ತೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ,ದೊಡ್ಡ ನಾರವಂಗಲ ಗ್ರಾಮದ ಸಿಸಿ ರಸ್ತೆ ಸಿಸಿ ಚರಂಡಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿ ಜೊತೆಗೆ.
ಮಲ್ಲಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಸಂದ್ರ ಸಿರಿವಾರ ಮುಖ್ಯರಸ್ತೆಯ ಹಬ್ಬತ್ತನಹಳ್ಳಿ ಮುಖ್ಯ ದ್ವಾರದಿಂದ ಹಬ್ಬತ್ತನಹಳ್ಳಿ ಹಾಗೂ ಜೋಗ ಹಟ್ಟಿ ಮಾರ್ಗ ರಾಜ್ಯ ಹೆದ್ದಾರಿ 206 ಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ,ಮಲ್ಲಸಂದ್ರ ಸಿರಿವಾರ ಮುಖ್ಯರಸ್ತೆಯ ಹಬ್ಬತ್ತನಹಳ್ಳಿ ಗ್ರಾಮದ ನವಗ್ರಾಮ ಎಸ್‌ಸಿ ಕಾಲೋನಿಯಿಂದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ,ಹಬ್ಬತ್ತನಹಳ್ಳಿ ಗ್ರಾಮದಲ್ಲಿ ಮನೆಮನೆಗೆ ನಲ್ಲಿ ಸಂಪರ್ಕ ಕಾಮಗಾರಿ,ಕೊಟ್ಟನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ,ನರಗನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಸೇರಿದಂತೆ ಸುಮಾರು ಎಂಟು ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಿ, ವಿದ್ಯಾಭ್ಯಾಸ, ಆರೋಗ್ಯ, ಮದುವೆ ಹಾಗೂ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಶೀಟ್ ಸಿಮೆಂಟ್ ಸೇರಿದಂತೆ ಇನ್ನಿತರ ಸಮಸ್ಯೆ ಉಳ್ಳವರಿಗೆ ಸುಮಾರು 3,00,000 ಮೂರು ಲಕ್ಷಕ್ಕೂ ಹೆಚ್ಚಿನ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಹೆಗ್ಗೆರೆ ಜಿಲ್ಲಾ ಪಂಚಾಯತ್ ಜೆಡಿಎಸ್ ಉಸ್ತುವಾರಿಗಳಾದ ಹಾಲನೂರು ಅನಂತ್ ಕುಮಾರ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರುಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.