ಗಂಡು ಮೆಟ್ಟಿನ ನಾಡಿಗೆ ಡಿ ಬಾಸ್ ಎಂಟ್ರಿ! ಫುಲ್ ಜೋಶ್ ಆದ ಅಭಿಮಾನಿಗಳು

 

ಹುಬ್ಬಳ್ಳಿ- ಗಂಡು ಮೆಟ್ಟಿನ ನಾಡು, ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ರಾಬರ್ಟ್’ ಆರ್ಭಟ ಜೋರಾಗಿಯೇ ಇತ್ತು.. ಡಿ ಬಾಸ್ ದರ್ಶನ ಅಭಿಮಾನಿಗಳ ಸಿಳ್ಳೆ, ಚಪ್ಪಾಳೆ ಸದ್ದು ಮುಗಿಲುಮುಟ್ಟಿತ್ತು. ಬಹಳ ವರ್ಷಗಳ ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಜಮಾನನಿಗೆ ಹುಬ್ಬಳ್ಳಿ ಮಂದಿ ಸಿಳ್ಳೆ ಚಪ್ಪಾಳೆಗಳ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದ್ರು..

 

ನಗರದ ರೈಲ್ವೆ ಮೈದಾನದಲ್ಲಿ ರಾಬರ್ಟ್ ಆರ್ಭಟ ಭಾನುವಾರ ಜೋರಾಗಿಯೇ ಇತ್ತು. ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ, ಹಾಡುಗಳು, ನೃತ್ಯ, ಡೈಲಾಗ್ ಹಾಗೂ ಚಿತ್ರದ ಟೀಸರ್‌ಗಳು ಜನ್ರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ವು. ಇನ್ನು ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ರನ್ನ ಪ್ರೇಕ್ಷಕರು ಡಿ ಬಾಸ್….ಡಿ ಬಾಸ್…ಎನ್ನುವ ಜೈಕಾರದ ಮಧ್ಯೆ ವೇದಿಕೆಗೆ ಸ್ವಾಗತಿಸಿದ್ರು. ಅಲ್ದೆ, ಬಾ..ಬಾ ನಾ ರೆಡಿ, ಜೈ ಶ್ರೀರಾಮ್, ನಿನ್ನ ನೋಡಿ ಸುಮ್ಮನ್ಹೆಂಗಿರಲಿ ಸೇರಿ ಇತರ ಹಾಡುಗಳು ಜನರನ್ನ ಮತ್ತಷ್ಟು ಮನರಂಜಿಸಿದ್ವು. ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನಾನು ಒಬ್ಬ ದರ್ಶನ ಅವರ ಅಭಿಮಾನಿ. ಇದೇರೀತಿ ಇನ್ನಷ್ಟು ಹೊಸ ಹೊಸ ಚಿತ್ರಗಳನ್ನು ಮಾಡಲಿ ಎಂಬುದು ನಮ್ಮೆಲ್ಲರ ಆಶಯ.

ಸಂಜೆ 7:30ರ ಹೊತ್ತಿಗೆ ಆರಂಭವಾದ ಅದ್ದೂರಿ ಕಾರ್ಯಕ್ರಮ, ದರ್ಶನ ವೇದಿಕೆಗೆ ಆಗಮಿಸ್ತಿದ್ದಂತೆ ಜನರಲ್ಲಿನ ಉತ್ಸಾಹ ಹೆಚ್ಚಾಯ್ತು. ಇದೇ ವೇಳೆ ಹುಬ್ಬಳ್ಳಿ ಭಾಷೆಯಲ್ಲೇ ಮಾತು ಆರಂಭಿಸಿದ ದರ್ಶನ, ಸೆಲ್ಫಿ, ಲೈಕ್ ಕಮೆಂಟ್ಸ್ ಗೋಸ್ಕರ ತಮ್ಮ ವಾಹನವನ್ನ ಫಾಲೋ ಮಾಡದಂತೆ ತಮ್ಮ ಸೆಲೆಬ್ರಿಟಿಗಳಗೆ ಕಿವಿಮಾತು ಹೇಳಿದ್ರು. ಇದಲ್ದೆ, ದರ್ಶನ್ ಹೊಡೆದ ಕೆಲ ಡೈಲಾಗ್ ಗೆ ಫ್ಯಾನ್ಸ್ ಫುಲ್ ಫಿದಾ ಆದ್ರು. ಕೆಲವರು ಸೆಲ್ಫಿ ತೆಗೆದುಕೊಳ್ಲಿಕ್ಕೆ ವೇದಿಕೆ ಬಳಿ ಬಂದು ಗಲಾಟೆ ಮಾಡ್ದಾಗ, ವೇದಿಕೆಯ ಮೇಲಿಂದ ಸ್ವತಃ ದರ್ಶನ ಜನರ ಜತೆ ಮಾಸ್ ಆಗಿ ಸೆಲ್ಫಿಗೆ ಪೋಸ್ ಕೊಟ್ರು. ಇನ್ನು ತಮಗಿರುವ ಉತ್ತರ ಕರ್ನಾಟಕದ ಪ್ರೀತಿಯನ್ನ ತೋರಿಸುವ ಮೂಲಕ ಜನರ ಮನವನ್ನ ಡಿ ಬಾಸ್ ಕದ್ದರು..

 

ದರ್ಶನ್, ನಾಯಕ ಮಾತನಾಡಿ ಹುಬ್ಬಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಖಳನಾಯಕ ರವಿಶಂಕರ, ವಿನೋದ ಪ್ರಭಾಕರ, ಚಿಕ್ಕಣ್ಣ, ಶರಣ್, ಅಭಿಷೇಕ ಅಂಬರೀಶ ಆಗಮಿಸಿ ವಿವಿಧ ಡೈಲಾಗ್ ಹೇಳುವ ಮೂಲಕ ಜನರನ್ನು ರಂಜಿಸಿದರು. ಅರ್ಜುನ ಜನ್ಯ, ಹೇಮಂತ ಇತರರ ಹಾಡುಗಳ ಜನರ ಮನಸೂರೆಗೊಂಡವು. ಮಾಸ್ಟರ್ ಆನಂದ ಅವರ ನಿರೂಪಣೆ ಪ್ರೇಕ್ಷಕರನ್ನು ಹುರಿದುಂಬಿಸಿತು. ಸಚಿವರಾದ ಬಿ.ಸಿ. ಪಾಟೀಲ, ಜಗದೀಶ ಶೆಟ್ಟರ, ಪ್ರದೀಪ ಶೆಟ್ಟರ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ರಾಜುಗೌಡ, ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ನಿರ್ದೇಶಕ ತರುಣ ಸುಧೀರ, ನಾಯಕ ನಟಿ ಆಶಾ ಭಟ್ ಹಾಗೂ ಪೋಷಕ ನಟ ದೇವರಾಜ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ರು….!

Leave a Reply

Your email address will not be published. Required fields are marked *

You cannot copy content of this page

error: Content is protected !!