ರಾಜ್ಯದಾದ್ಯಂತ ಪೊಲೀಸರು ಹಾಗೂ ಚಾಲಕರಿಗೆ ತರಬೇತಿ
ರಾಜ್ಯದ ೫೦೦೦ ಮಂದಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಲಾಗಿದೆ
ದೇವನಹಳ್ಳಿ: ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ಮಾಡುವ ಉದ್ದೇಶ ಅಪಘಾತಗಳಿಗೆ ಕಡಿವಾಣ, ಅಪಘಾತಗಳು ಕಡಿಮೆಯಾಗಲು ಕೆಲವು ಕಾರಣಗಳಿವೆ. ಚಾಲಕರು ಜಾಗೃತಿಯಿಂದ ವಾಹನವನ್ನು ಚಾಲನೆ ಮಾಡಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ವೃತ್ತ ನಿರೀಕ್ಷಕ ಮುತ್ತುರಾಜ್ ತಿಳಿಸಿದರು.
ತಾಲೂಕಿನ ಸಾದಹಳ್ಳಿಗೇಟ್ ಬಳಿ ಇರುವ ಅತಾಂಗ್ ಟೋಲ್ ಸಮೀಪದಲ್ಲಿ ನ್ಯಾಷನಲ್ ರೋಡ್ ಸೇಫ್ಟಿ ವೀಕ್-ಎನ್‌ಹೆಚ್ ೭ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಮ್ಮ ಕುಟುಂಬದ ಆಧಾರಸ್ತಂಭವಾಗಿರುವ ನೀವು ವಾಹನವನ್ನು ಚಾಲನೆ ಮಾಡುವಾಗ ರಸ್ತೆ ಸುರಕ್ಷತೆಯ ಬಗ್ಗೆ ಅರಿವಿರಬೇಕು ಅಪಘಾತಕ್ಕೆ ಮಂಜುಕವಿದ ವಾತಾವರಣ, ಮಿಸ್ಟ್, ಚಿಕ್ಕಚಿಕ್ಕ ರಸ್ತೆ, ಮತ್ತು ರಸ್ತೆ ನಿರ್ಮಾಣದಲ್ಲಿ ಇಂಜನೀಯರಿಂಗ್ ಸಮಸ್ಯೆ ಇದ್ದಾಗಲೂ ಸಹ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಮನುಷ್ಯ ಅತೀವೇಗವಾಗಿ ವಾಹನ ಚಾಲಾಯಿಸಿದರೆ ಅಪಘಾತಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ಅಪಘಾತದಿಂದ ಪಾರಾಗಲು ವಾಹನ ಚಾಲಕರು ಆರ್‌ಆರ್ ನಿಯಮ ಪಾಲನೆಗಳ ಮೂಲಕ ವಾಹನ ಚಲಾಯಿಸಬೇಕು. ರಸ್ತೆ, ಮನೆ ಅಥವಾ ಕಾರ್ಖಾನೆಯಲ್ಲಿ ಎಲ್ಲಿಯಾದರೂ ನಾವು ಅನುಸರಿಸಬೇಕಾದ ಸಂಚಾರ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಜೀವನ ಪ್ರತಿಯೊಬ್ಬರಿಗೂ ಅಮೂಲ್ಯವಾದದ್ದು, ಅತೀ ವೇಗ, ಕುಡಿದು ವಾಹನ ಚಾಲನೆ ಹೀಗೆ ಹತ್ತು ಹಲವಾರು ಕಾರಣಗಳಿಂದ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಕಣ್ಣಾರೆ ನೋಡಿದ್ದೇವೆ. ಸಾರ್ವಜನಿಕರು ರಸ್ತೆ ಸುರಕ್ಷತೆ ಪಾಲಿಸುವುದು ಕರ್ತವ್ಯವೆಂದು ಭಾವಿಸಬೇಕು ಎಂದು ಹೇಳಿದರು.
ಸಾರ್ವಜನಿಕರು ಅನುಸರಿಸಬೇಕಾದ ನಿಯಮಗಳು: ಹೆಲ್ಮೆಟ್ ಇಲ್ಲದೆ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸಬೇಡಿ, ಚಾಲಕರು, ಚಾಲನೆ ಮಾಡುವಾಗ ದಯವಿಟ್ಟು ನಿಮ್ಮ ಬಲ ಮತ್ತು ಎಡಕ್ಕೆ ಗಮನಿಸಬೇಕು. ರಸ್ತೆಯ ಎರಡೂ ಬದಿಯಲ್ಲಿರುವ ವ್ಯಾಕುಲತೆ ನಿಮ್ಮನ್ನು ಸಮಸ್ಯೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕು. ಚಾಲನೆ ಮಾಡುವಾಗ ಮೊಬೈಲ್ ಬಳಸುವುದು ತಪ್ಪಿಸಿ, ಹೆದ್ದಾರಿಯಲ್ಲಿ ಲೇನ್ ಶಿಸ್ತು ಅತೀ ಮುಖ್ಯ, ಪಾದಚಾರಿಗಳು ರಸ್ತೆ ದಾಟಲು ಅಂಡರ್ ಪಾಸ್ ಮತ್ತು ಸಬ್ ವೇಗಳನ್ನು ಬಳಸಬೇಕು. ರಾತ್ರಿ ಸಮಯವನ್ನು ಚಲಾನೆ ಮಾಡಿ, ಹೆಡ್ ಲೈಟ್ ಇಲ್ಲದೆ ವಾಹನ ಚಲಾಯಿಸಬೇಡಿ. ಚಾಲನೆ ಮಾಡುವಾಗ ಅಂಕುಡೊಂಕಾದ ಚಾಲನೆ ಮಾಡಬೇಡಿ, ರಸ್ತೆಯ ಮೇಲೆ ನಿಗಾ ಇರಬೇಕು. ಅತಿಯಾದ ವೇಗವು ನಿಮ್ಮ ಸಾವನ್ನು ಆಹ್ವಾನಿಸುತ್ತದೆ. ಇದರಿಂದ ಎಚ್ಚರದಿಂದರಬೇಕು. ಶಾಲಾ ವಲಯಗಳು/ಆಸ್ಪತ್ರೆಗಳ ಬಳಿ ಹೆಚ್ಚು ಶಬ್ದ ಮಾಡಬೇಡಿ ಎಂದು ನಿಯಮಗಳನ್ನು ತಿಳಿಸಿಕೊಟ್ಟರು.
ಬಾಕ್ಸ್
ಟೋಲ್ ಪ್ಲಾಸ ಅವರು ಸಾದಹಳ್ಳಿ ಮತ್ತು ಕನ್ನಮಂಗಲ ಬಳಿ ಹೈರೈಸರ್ ಡ್ರಿಲಿಂಗ್ ಮಾಡಿಸಿಕೊಟ್ಟ ನಂತರ ಅಪಘಾತ ಕಡಿಮೆಯಾಗಿವೆ. ಜನ ಓಡಾಟ ಇರುವ ಜಾಗವು ೧೦೦ಮೀಟರ್ ಮುಂದೆ ಇದೆ. ಎಲ್ಲಿ ಅವಶ್ಯಕತೆ ಇದೆ ಅಲ್ಲಿ ಎನ್‌ಎಚ್೭ ಮತ್ತು ನೀವು ಇದನ್ನು ಸರಿಪಡಿಸಬೇಕು.
ಇದೇ ಸಂದರ್ಭದಲ್ಲಿ ಪ್ರಾಜೆಕ್ಟ್ ಮುಖ್ಯಸ್ಥ ಸುಭಾಷ್ ಕುಂಡು, ಆಪರೇಷನ್ ಮ್ಯಾನೇಜರ್ ರಂಜನ್‌ಪಾಟೀಲ್, ಜನರಲ್ ಮ್ಯಾನೇಜರ್ ಸುವಿಶೇಷ್ ಈಜೀಸ್, ಪಿಆರ್‌ಒ ವೆಂಕಟೇಶ್, ಮತ್ತಿತರರು ಇದ್ದರು.
ದೇವನಹಳ್ಳಿ ತಾಲೂಕಿನ ಅತಾಂಗ್ ಟೋಲ್ ಸಮೀಪದಲ್ಲಿ ನ್ಯಾಷನಲ್ ರೋಡ್ ಸೇಫ್ಟಿ ವೀಕ್-ಎನ್‌ಹೆಚ್ ೭ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ವೃತ್ತ ನಿರೀಕ್ಷಕ ಮುತ್ತುರಾಜ್ ಎನ್‌ಎನ್‌ಪೆಟ್ರೋಲ್ ಹಾಗೂ ಆಂಬ್ಯೂಲೆನ್ಸ್‌ಗೆ ಚಾಲನೆ ನೀಡಿದರು.
ಗುರುಮೂರ್ತಿ ಬೂದಿಗೆರೆ