65ನೇ ನಾಗರೀಕ ಬಂದೂಕು ತರಬೇತಿ ಶಿಬಿರದ ಮುಕ್ತಯ ಸಮಾರಂಭ
ಇಂದು ತಿಪಟೂರಿನ ಕಲ್ಪತರು ಆಡಿಟೋರಿಯಂ ನಲ್ಲಿ ಪೊಲೀಸ್ ಇಲಾಖಾವತಿಯಿಂದ 65ನೇ ನಾಗರೀಕ ಬಂದೂಕು ತರಬೇತಿ ಶಿಬಿರದ ಮುಕ್ತಯ ಸಮಾರಂಭ ಏರ್ಪಡಿಸಿದ್ದು ಈ ಶಿಬಿರದಲ್ಲಿ ತಾಲ್ಲೂಕಿನ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಿರಿಯ ನಾಗರೀಕರು ಹಾಗೂ ಸಾರ್ವಜನಿಕರಿಗೆ ಹಾಗೂ ಇತರೆ ಇಲಾಖೆಯ ಅದಿಕಾರಿಗಳಿಗೆ ಒಂದು ವಾರಗಳ ಕಾಲ ಬಂದೂಕು ಗುರಿ, ಹಾಗೂ ಬಂದೂಕು ಉಪಯೋಗಿಸುವ ವಿಧಿವಿಧಾನಗಳನ್ನು ತಿಳಿಸಿ ಕೂಡ ಲಾಯಿತು ಇಂದು ಮುಕ್ತಾಯದ ದಿನವಾದ ಇಂದು ಭಾಗವಹಿಸಿ ಎಲ್ಲರಿಗೂ ಪ್ರಮಾಣಪತ್ರಗಳನ್ನು ಮಾನ್ಯ ಪೊಲೀಸ್ ಅದೀಕ್ಷಕರಾದ ಡಾ, ಕೆ.ವಂಸಿ ಕೃಷ್ಣ IPS ರವರು ಪ್ರದಾನಮಾಡಿದರು,ಮತ್ತು ತಿಪಟೂರಿನ ಯುವರಾಜ ಎಂಬುವರು ಪ್ರಥಮ ಗುರಿಕಾರರಾಗಿ ಮೊದಲನೇ ಪ್ರಶಸ್ತಿ ಪಡೆದರು, ಈ ಸಂದರ್ಭದಲ್ಲಿ ತಿಪಟೂರಿನ ನಾಲ್ಕನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶಿವಕುಮಾರ್ ರವರು ಹಾಗೂ ಶಾಸಕರಾದ ಶ್ರೀ ನಾಗೇಶ್ ರವರು ಉಪಸ್ಥಿತಿರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು, ಹಾಗೂ ನೇತ್ರತ್ವವವನ್ನು ತಿಪಟೂರಿನ ಡಿಎಸ್ಪಿ ಶ್ರೀ ಚಂದನ್ ಕುಮಾರ್ ರವರು ನೆರವೇರಿಸಿದರು.