ಜನರ ಆರೋಗ್ಯಕ್ಕೆ ವೈದ್ಯರ, ರಕ್ಷಣೆಗೆ ಪೊಲೀಸರ ಸೇವೆ ಶ್ಲಾಘನೀಯ ಪೊಲೀಸರಿಗೆ ಅಕ್ಕಿಮೂಟೆ ಕೊಡುಗೆ
ಜನರ ಆರೋಗ್ಯಕ್ಕೆ ವೈದ್ಯರು ಶ್ರಮಿಸಿದರೆ, ಜನರ ರಕ್ಷಣೆಗಾಗಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿರುವ ಕೋವಿಡ್ ವಾರಿಯರ್ಸ್ ಆದ ಪೊಲೀಸರಿಗೆ ಅಕ್ಕಿಮೂಟೆ ವಿತರಿಸಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯ ಆವರಣದಲ್ಲಿ ವಿಜಯಪುರ ವೃತ್ತ ನಿರೀಕ್ಷಕ ಕೆ.ಶ್ರೀನಿವಾಸ್ ಸಮ್ಮುಖದಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಅಕ್ಕಿಮೂಟೆ ವಿತರಿಸಿ ಮಾತನಾಡಿದರು. ಕೋವಿಡ್ ತಡೆಗಟ್ಟುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ. ಜಿಲ್ಲಾಡಳಿತ ಮುಂಭಾಗದಲ್ಲಿರುವ ಠಾಣೆಯ ಕರ್ತವ್ಯ ಹೆಚ್ಚು ಇರುತ್ತದೆ. ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿ ಎಷ್ಟೋ ಪೊಲೀಸರು ಹೇಳಿಕೊಳ್ಳದ ಪರಿಸ್ಥಿತಿಯಲ್ಲಿರುತ್ತಾರೆ. ಅದನ್ನು ಮನಗಂಡು ಪೊಲೀಸರಿಗೆ ಅಕ್ಕಿಮೂಟೆ ವಿತರಣೆ ಮಾಡಲಾಗಿದೆ ಎಂದರು.
ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಶ್ರೀನಿವಾಸ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕರ ಕರ್ತವ್ಯಕ್ಕೆ ಹಾಗೂ ಪೊಲೀಸರ ಮೇಲಿನ ಕಾಳಜಿಗೆ ನಮ್ಮ ಇಲಾಖೆಯ ವತಿಯಿಂದ ಅಭಿನಂದಿಸುತ್ತೇನೆ.
ಸಮಾಜದಲ್ಲಿ ಸಂಕಷ್ಟದಲ್ಲಿರುವವರನ್ನು ಗುರ್ತಿಸಿ ಅವರಿಗೆ ನೆರವು ನೀಡುವಂತಾಗಬೇಕು. ನಿಮ್ಮ ಈ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
ಈ ವೇಳೆಯಲ್ಲಿ ವಿಶ್ವನಾಥಪುರ ಪೊಲೀಸ್ ಠಾಣೆಯ ಪಿಎಸ್‌ಐ ವೆಂಕಟೇಶ್, ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್.ನಾಗೇಶ್, ಸದಸ್ಯ ಲಕ್ಷ್ಮೀಕಾಂತ್, ಮುಖಂಡ ಭೈರೇಗೌಡ, ಪೊಲೀಸ್ ಸಿಬ್ಬಂದಿ ಮತ್ತಿತರರು ಇದ್ದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯ ಆವರಣದಲ್ಲಿ ವಿಜಯಪುರ ವೃತ್ತನಿರೀಕ್ಷಕ ಕೆ.ಶ್ರೀನಿವಾಸ್ ಸಮ್ಮುಖದಲ್ಲಿ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತಕುಮಾರ್ ಅಕ್ಕಿಮೂಟೆಯನ್ನು ವಿತರಿಸಿದರು.
ಗುರುಮೂರ್ತಿ ಬೂದಿಗೆರೆ
8861100990