ಪತ್ರಕರ್ತನ ನೆರವಿಗೆ ಧಾವಿಸಿದ ಕೊರಟಗೆರೆ ಶಾಸಕ ಡಾ.ಜಿ ಪರಮೇಶ್ವರ್
ಕೊರಟಗೆರೆ _ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್‍ರವರು ಪ್ರಾಣಾಪಾಯದಲ್ಲಿದ್ದ ಪತ್ರಕರ್ತನಿಗೆ ತಕ್ಷಣ ಚಿಕಿತ್ಸೆ ಕೂಡಿಸಿ ಜೀವ ಉಳಿಸಿದ ಡಾಕ್ಟರ್ ಜಿ ಪರಮೇಶ್ವರ್
ಅನಾರೋಗ್ಯಕ್ಕೆ ತುತ್ತಾಗಿದ್ದ ಪತ್ರಕರ್ತನ ನೆರವಿಗೆ ಧಾವಿಸಿದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ. ಜಿ ಪರಮೇಶ್ವರ್ ಅವರಿಗೆ ಕೊರಟಗೆರೆ ತಾಲೂಕಿನ ಪತ್ರಕರ್ತರು ಶಾಸಕರಿಗೆ ಧನ್ಯ ವಾದಗಳನ್ನು ತಿಳಿಸಿದ್ದಾರೆ.
ಕಳೆದ ಸೆ.27 ರ ಸೋಮವಾರ ದಂದು ಬೆಳಿಗ್ಗೆ ತಾಲೂಕು ಪ್ರಜಾವಾಣಿ ವರದಿಗಾರ ಎ.ಆರ್.ಚಿದಂಬರ ಹೃದಯಾಪಘಾತಕ್ಕೆ ಒಳಗಾಗಿದ್ದರು, ತಕ್ಷಣ ಸ್ಥಳೀಯ ರೇಣುಕಾ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿ ಪರಿಸ್ಥಿತಿ ಗಂಭೀರವಾಗಿತ್ತು,
ಸ್ಥಳಕ್ಕೆ ಬಂದ ಪತ್ರಕರ್ತರು ಮೊದಲು ಶಾಸಕ ಡಾ.ಜಿ.ಪರಮೇಶ್ವರ್ ರವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಅವರನ್ನು ತುಮಕೂರು ಸಿದ್ದಾರ್ಥ ಹೃದಯರೋಗ ಚಿಕಿತ್ಸಾ ಆಸ್ಪತ್ರೆಗೆ ತುರ್ತುವಾಹನದಲ್ಲಿ ದಾಖಲಿಸಲಾಗಿತ್ತು, ವಿಷಯ ತಿಳಿದ ಶಾಸಕರು ತಕ್ಷಣ ಬೆಂಗಳೂರಿನಿಂದ ಸಿದ್ದಾರ್ಥ ಆಸ್ಪತ್ರೆಗೆ ಪ್ರಾಯಾಣ ಬೆಳೆಸಿ.
ತುರ್ತು ವಾಹನ ಆಸ್ಪತ್ರೆ ಸೇರುವ ಮುನ್ನವೇ ದೂರವಾಣಿ ಮೂಲಕ ವೈದ್ಯಕೀಯ ಸಿಬ್ಬಂದಿಯನ್ನು ಸಜ್ಜುಗೊಳಿಸಿದ್ದರು, ಆಸ್ಪತ್ರೆಗೆ ದಾಖಲಾದ ಮೇಲೆ ತೀರ್ವ ಹೃದಯಾಘಾತವಾಗಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ಮುನ್ನಾ ಕುಟುಂಬದವರ ಸಹಿ ಅತ್ಯಗತ್ಯವಿದ್ದು ಆದರೆ ಸ್ನೇಹಿತರೇ ಆಸ್ಪತ್ರೆಗೆ ದಾಖಲು ಮಾಡಿದ್ದ ಕಾರಣ ಕುಟುಂಬದವರ ಹಾಜರಿ ಮತ್ತು ಸಹಿ ಕಡ್ಡಾಯವಾಗಿತ್ತು,
ತಕ್ಷಣ ತುರ್ತುಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದ್ದುದರಿಂದ ಕುಟುಂಬದವರು ಆಸ್ಪತ್ರೆ ತಲುಪುವುದು ತಡವಾದ ಹಿನ್ನೆಲೆಯಲ್ಲಿ ಶಾಸಕ ರು ತಾವೇ ಅದರ ಜವಾಬ್ದಾರಿ ಹೊತ್ತು ಶಸ್ತ್ರ ಚಿಕಿತ್ಸೆಯನ್ನು ಪೂರೈಸಿಸಿದರು, ಚಿಕಿತ್ಸೆ ನೀಡಿಸಿ ಪತ್ರಕರ್ತನನ್ನು ಪ್ರಾಣಾಪಾಯದಿಂದ ಪಾರುಮಾಡಿದ ಘಟನೆ ಇಡೀ ರಾಜ್ಯದಲ್ಲೆ ಅಪರೂಪದ ಕಾರ್ಯವಾಗಿದೆ,
ಇದಕ್ಕಾಗಿ ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೇರಿದಂತೆ ಎಲ್ಲಾ ಪತ್ರಕರ್ತರು ಶಾಸಕರಾದ ಡಾ.ಜಿ.ಪರಮೇಶ್ವರ್ ರವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕೋವಿಡ್ ಸಂದರ್ಬದಲ್ಲೂ ಸಹ ಶಾಸಕರು ಕ್ಷೇತ್ರದ ಜನತೆಗೆ ತಮ್ಮ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಮನೆ ಮನೆಗಳಿಗೆ ಬೇಟಿ ನೀಡಿ ಇದೇ ರೀತಿಯ ಚಿಕಿತ್ಸೆ ನೀಡುವ ಮೂಲಕ ಕ್ಷೇತ್ರದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.