ಕರೋನ ಸಂಕಷ್ಟದಲ್ಲಿ ಕೆಲಸ ನಿರ್ವಹಿಸಿದ ಆರೋಗ್ಯ ಸಿಬ್ಬಂದಿಗಳನ್ನು ಮುಂದುವರಿಸಲು ಓತ್ತಾಯ.
ತುಮಕೂರು_ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಟ್ಟ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕರೋನ ಸಂಕಷ್ಟ ಕಾಲದಲ್ಲಿ ಪ್ರಾಣದ ಹಂಗು ತೊರೆದು ಕರೋನ ಸೋಂಕಿತರನ್ನು ಆರೈಕೆ ಮಾಡಿದ ಗುತ್ತಿಗೆ ನೌಕರರನ್ನು ಮುಂದುವರಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಘಟಕದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ರವರ ನೇತೃತ್ವದಲ್ಲಿ ಗುತ್ತಿಗೆ ನೌಕರರ ನೇತೃತ್ವದ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿರು ಕರೋನ ಸಂಕಷ್ಟದಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಿದ ಕೊರೋನ ವಾರಿಯರ್ಸ್ ಗಳ ಗುತ್ತಿಗೆ ಅವಧಿ ಈ ತಿಂಗಳು ಮುಗಿಯುತ್ತಿದ್ದು ಇರುವರೆಗೂ ಅಲ್ಪ ಅವಧಿಗೆ ಕೆಲಸ ನಿರ್ವಹಿಸಿದ ನಾವುಗಳು ಸಂಕಷ್ಟ ಕಾಲದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದೇವೆ ಆದರೆ ಈಗ ಗುತ್ತಿಗೆ ಅವದಿ ಮುಗಿದು ಈ ತಿಂಗಳು ಅವರ ಸೇವೆ ಕೊನೆಗೊಳ್ಳಲಿದೆ ಹಾಗಾಗಿ ಸರ್ಕಾರ ಸಂಕಷ್ಟದಲ್ಲಿ ರೋಗಿಗಳ ಆರೈಕೆಗೆ ಮುಂದಾದ ಗುತ್ತಿಗೆ ನೌಕರರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರೋನ ಸಂಕಷ್ಟ ಕಾಲದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 46 ಶುಶ್ರೂಷಕರು 8 ಲ್ಯಾಬ್ ಟೆಕ್ನಿಷಿಯನ್ ಗಳು,26 ಗ್ರೂಪ್ ಡಿ ಸೇರಿದಂತೆ ಒಟ್ಟಾರೆಯಾಗಿ 87 ಮಂದಿ ಕರೋನಾ ಬಂದಾಗಿನಿಂದ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದೇವೆ ಕರೋನಾ 1,2 ಹಾಗೂ 3 ಅಲೆಯ ಅವಧಿಯಲ್ಲಿ ನಾವುಗಳು ನಮ್ಮ ಮನೆ, ಸಂಸಾರ, ಮಕ್ಕಳನ್ನು ಬಿಟ್ಟು ಬಂದು ರಾಜ್ಯದ ಸಾರ್ವಜನಿಕರ ಸೇವೆಗಾಗಿ ನಮ್ಮ ಪ್ರಾಣ ಪಣವಾಗಿಟ್ಟು ಹಗಲು-ರಾತ್ರಿ ಶ್ರಮಿಸಿದ್ದೇವೆ.ಈಗ ನಮ್ಮ ಗುತ್ತಿಗೆ ಅವಧಿ ಮುಗಿಯುತ್ತಿದ್ದು ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬರುವಂತಾಗಿದೆ ಹಾಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಹಾಲಿ ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಮುಂದುವರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ತುಮಕೂರು ಜಿಲ್ಲಾ ಆಸ್ಪತ್ರೆಯ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು