ತುಮಕೂರು: ಹಸಿರುದಳದ ಬುಗುರಿ ಸಮುದಾಯ ಗ್ರಂಥಾಲಯ ವತಿಯಿಂದ ಜಿಲ್ಲೆಯ ಚಿಂದಿ ಆಯುವವರ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ಸಲುವಾಗಿ ಹಾಗೂ ಶಾಲೆಗಳಿಂದ ಡ್ರಾಪ್ ಔಟ್ ಪ್ರಮಾಣವನ್ನು ಕಡಿಮೆ ಮಾಡಲು ಮೊಬೈಲ್ ಗ್ರಂಥಾಲಯದ ಮೂಲಕ ಮಕ್ಕಳಿಗೆ ಓದುವಲ್ಲಿ ಆಸಕ್ತಿ ಮೂಡಿಸಲು, ಪುಸ್ತಕವನ್ನು ಮಕ್ಕಳಿಗೆ ನೀಡುವ ಮೂಲಕ ಪುಸ್ತಕಗಳ ಜೊತೆ ಒಂದು ಆತ್ಮೀಯ ಒಡನಾಟವನ್ನು ಸೃಷ್ಟಿಸುವಲ್ಲಿ ಕೆಲವು ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಮಕ್ಕಳಿಗಾಗಿ ಮೋಹನ್ ಕುಮಾರ್ ರವರಿಂದ ರೀಡ್ ಅಲೌಡ್ ಸೆಶನ್
ಇದರ ಜೊತೆಗೆ ಈ ಸಂಸ್ಥೆ ವತಿಯಿಂದ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಗಟ್ಟಿ ಓದುವ ಕಾರ್ಯಕ್ರಮ (ರೀಡ್ ಅಲೌಡ್ ಸೆಶನ್) ನಡೆಸುಕೊಳ್ಳುತ್ತಾ ಬಂದಿದ್ದಾರೆ. ಇದರಂತೆ ಈ ವರ್ಷವು ಸಹ ಫೆಬ್ರವರಿ ತಿಂಗಳಿನ ಮೊದಲವಾರದಿಂದ ನಗರದ ವಿವಿಧ ಪ್ರದೇಶಗಳಲ್ಲಿ ಪೋಷಕರಿಗೆ, ಮಕ್ಕಳಿಗೆ ಮತ್ತು ಅನೇಕ ಶಾಲೆಗಳಲ್ಲಿ ಗಟ್ಟಿ ಓದುವ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ದಿವ್ಯಶ್ರೀ ರವರಿಂದ ರೀಡ್ ಅಲೌಡ್ ಸೆಶನ್
ಮಕ್ಕಳಲ್ಲಿ ಕೇಳಿಸಿಕೊಳ್ಳುವ ಮಟ್ಟ ಹಿರಿಯರಿಗಿಂತಾ ಹೆಚ್ಚಾಗಿರುತ್ತದೆ ಹಾಗಾಗಿ ಮಕ್ಕಳಿಗೆ ಜೋರಾಗಿ ಓದುವ ಮೂಲಕ ವಿಷಯವನ್ನು ತಿಳಿಸಿದಾಗ ಅವರಿಗೆ ಅದು ಮನದಲ್ಲಿ ದೀರ್ಘಕಾಲದವರೆಗೆ ಉಳಿಯುತ್ತದೆ ಆದ್ದರಿಂದ ಈ ಕಾರ್ಯಕ್ರಮವು ಮಕ್ಕಳಿಗೆ ಅತ್ಯಂತ ಉಪಕಾರಿಯಾಗಿದೆ.
ಪೋಷಕರಿಗೆ ನರಸಿಂಹರಾಜು ಸಿ ಎಲ್ ರವರಿಂದ ರೀಡ್ ಅಲೌಡ್ ಸೆಶನ್
ಕತೆಗಳನ್ನು ಓದುವ ಮೂಲಕ ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸುವ ಮೂಲಕ ಪುಸ್ತಕಗಲೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಳ್ಳುತ್ತಾರೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಅಭಿನಯ ಮತ್ತು ಭಾವ ಪೂರ್ವಕವಾಗಿ ಕಥೆ ಹೇಳುವುದು ಸಹ ಅತ್ಯಂತ ಪರಿಣಾಮಕಾರಿಯಾಗಿದ್ದು ತಕ್ಷಣ ಮನದಲ್ಲಿ ಉಳಿಯುತ್ತದೆ.
ಈ ಕಾರ್ಯಕ್ರಮವನ್ನು ಹಸಿರುದಳದ ಸಮುದಾಯ ಸಂಘಟಕರಾದ ಮೋಹನ್ ಕುಮಾರ್ ಕೆ, ಮಕ್ಕಳ ಕಾರ್ಯಕ್ರಮ ಸಂಘಟಕರಾದ ನರಸಿಂಹರಾಜು ಸಿ ಎಲ್ ಮತ್ತು ಬುಗುರಿ ಗ್ರಂಥಾಲಯದ ಶಿಕ್ಷಕರಾದ ದಿವ್ಯಶ್ರೀ ಯವರು ಈ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದಾರೆ.