ರಾಜೇಂದ್ರ ಗೆಲುವು ಖಚಿತ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್.

ರಾಜೇಂದ್ರ ಗೆಲುವು ಖಚಿತ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್.

 

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ನಡೆದ ಹಿನ್ನೆಲೆ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ತುಮಕೂರು ಮಹಾನಗರ ಪಾಲಿಕೆಯ ಮತಗಟ್ಟೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜಣ್ಣ ರಾಜೇಂದ್ರ ರವರಿಗೆ ಮತ ನೀಡುವಂತೆ ಮಹಾನಗರ ಪಾಲಿಕೆ ಸದಸ್ಯರಿಗೆ ಮನವಿ ಮಾಡಿ ಮಾತನಾಡಿದ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಣ್ಣ ರಾಜೇಂದ್ರ ಸತತವಾಗಿ ಜನರ ಸೇವೆಯಲ್ಲಿದ್ದು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ರಾಜೇಂದ್ರ ರವರ ಗೆಲುವು ಖಚಿತ ಎಂದು ತಿಳಿಸಿದರು.

 

ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಸೈಯದ್ ನಯಾಜ್, ಕುಮಾರ್.ಜೆ, ಮಹೇಶ್ ಕುಮಾರ್, ಶ್ರೀಮತಿ ರೂಪ ಶೆಟ್ಟಳಯ್ಯ, ಶ್ರೀಮತಿ ಮುಜೀದಾ ಖಾನಂ, ಶ್ರೀಮತಿ ಪ್ರಭಾವತಿ, ಶ್ರೀಮತಿ ನಾಸಿರಾ ಬಾನು, ಶ್ರೀಮತಿ ನೂರುನ್ನಿಸಾ ಬಾನು, ಷಕೀಲ್ ಅಹ್ಮದ್, ಇನಾಯತ್ ಉಲ್ಲಾ ಖಾನ್ ಮತ್ತು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!