ಸಾಹಿತ್ಯ ಪರಿಷತ್ ಚುನಾವಣೆಗೆ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಸ್ಪರ್ಧೆ.

 

 

ಭ್ರಷ್ಟಾಚಾರ ಮುಕ್ತ ಸಾಹಿತ್ಯಪರಿಷತ್ತು ನಮ್ಮ ಗುರಿ -ರಾಜಶೇಖರ್ ಮುಲಾಲಿ

ಕನ್ನಡನಾಡಿನ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅಸ್ಮಿತೆಯಾಗಿದೆ ಮೈಸೂರು ರಾಜ್ಯದ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸಾವಿರ 1915 ರಲ್ಲಿ ಚಾಲನೆ ಪಡೆದುಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಕಂಡಿದೆ ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಹೆಚ್ ವಿ ನಂಜುಂಡಯ್ಯ ರಿಂದ ಮೊದಲ್ಗೊಂಡು ಮಾಸ್ತಿ ವೆಂಕಟೇಶ್ ಅಯ್ಯಂಗಾರ ಹಂಪನಾಗರಾಜಯ್ಯ ಸೇರಿದಂತೆ ಬಳ್ಳಾರಿ ಜಿಲ್ಲೆಯವರೇ ಆದ ಶ್ರೀ ರವರ ರೆವರೆಂಡ್ಉತ್ತಂಗಿ ಚನ್ನಪ್ಪನವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುದ್ದೆ ಅಲಂಕರಿಸಿ ಪರಿಷತ್ತಿನ ಘನತೆ ಹಾಗೂ ಗಾಂಭೀರ್ಯ ತಂದುಕೊಟ್ಟಿದ್ದರು ಕಾಲನಂತರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜಕಾರಣದ ಸಂಕೋಲೆಗೆ ಸಿಲುಕಿ ಭ್ರಷ್ಟಾಚಾರ ಹಾಗೂ ಸೃಜನ ಪಕ್ಷಪಾತ ದಲ್ಲಿ ಮುಳುಗೇಳುತ್ತಿದೆ ಎಂದು ರಾಜಶೇಖರ್ ಮುಲಾಲಿ ತಿಳಿಸಿದರು.

 

 

ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜಶೇಖರ್ ಮುಲಾಲಿ ತಾವು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.ಏತನ್ಮಧ್ಯೆಕನ್ನಡ ನಾಡು ಕೂಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಗಡಿ ಗಲಾಟೆ, ಅಂತರಾಜ್ಯ ನೆಲ-ಜಲ ವಿವಾದಗಳು ,ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆ, ಗಡಿಭಾಗದ ಕನ್ನಡ ಶಾಲೆಗಳ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ನಮ್ಮ ಕಣ್ಣು ಮುಂದೆ ಇದ್ದರೂ ಸಹ ಅವುಗಳ ರಕ್ಷಣೆಗೆ ಮುಂದಾಗದಿರುವುದು ಶೋಚನೀಯ ಸಂಗತಿ

 

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾದರೆ ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಿ ನಿಲ್ಲುವ ಹಿತದೃಷ್ಟಿಯಿಂದ ತಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದೇನೆ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಸಂಸ್ಥೆಯಾಗಿ ನೋಡದೆ ಇಡೀ ಕನ್ನಡಿಗರ ಅಸ್ಮಿತೆಗಾಗಿ ರೂಪಿಸುವ ಪ್ರಾಮಾಣಿಕ ಆಶಯಗಳಿಗೆ ಪೂರಕವಾಗಿ ದುಡಿಯಲು ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವೆ ಪರಿಷತ್ತನ್ನು ಡಿಜಿಟಲೀಕರಣ ಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ ಗಡಿನಾಡ ಕನ್ನಡಿಗರ ರಕ್ಷಣೆ, ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೆ ಬೃಹತ್ ಹೋರಾಟ ರೂಪಿಸುವ ಯೋಚನೆಗಳೊಂದಿಗೆ ಬಹುಮುಖ್ಯವಾಗಿ ಭ್ರಷ್ಟಾಚಾರ-ಮುಕ್ತ ಸಾಹಿತ್ಯ ಪರಿಷತ್ತು ನಮ್ಮ ಗುರಿಯಾಗಿದೆ ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಾಜಮುಖಿಯಾಗಿ ಜಾತ್ಯಾತೀತವಾಗಿ ಭ್ರಷ್ಟಾಚಾರ ಮುಕ್ತವಾಗಿ ಬೆಳೆಸಲು ತಮ್ಮ ಸಹಕಾರ ಬೇಕಾಗಿದ್ದು ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಬೆಂಬಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!