ನೋಡುಗರ ಗಮನ ಸೆಳೆದ ಹೊಗೆನಕಲ್ ಜಲಪಾತದಲ್ಲಿ ನಡೆದ ತೆಪ್ಪಗಳ ರೇಸ್

ನೋಡುಗರ ಗಮನ ಸೆಳೆದ ಹೊಗೆನಕಲ್ ಜಲಪಾತದಲ್ಲಿ ನಡೆದ ತೆಪ್ಪಗಳ ರೇಸ್

 

ಚಾಮರಾಜನಗರ: ಭಾರತದ ನಯಾಗರ ಎಂದೇ ಪ್ರಸಿದ್ಧವಾಗಿರುವ ಕರ್ನಾಟಕ ಹಾಗೂ ತಮಿಳು‌ನಾಡಿನ ಎರಡೂ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ತೆಪ್ಪಗಳ ರೇಸ್ ನಡೆದಿದೆ. ಊಟುಮಲೈ ಎಂಬ ಊರಿನ ಗ್ರಾಮಸ್ಥರು ಮಾರಿಯಮ್ಮನ ಹಬ್ಬದ ಪ್ರಯುಕ್ತ ಈ ರೇಸ್ ನಡೆಸಿದ್ದು ರೇಸ್ ನಲ್ಲಿ ಎಂಟರಿಂದ ಹತ್ತು ತೆಪ್ಪಗಳು ಭಾಗಿಯಾಗಿವೆ.

 

 

 

 

 

 

 

 

 

 

 

 

 

ಒಂದು ತೆಪ್ಪದಲ್ಲಿ ಇಬ್ಬರು ಕುಳಿತು ನೂರು ಮೀ ರೇಸ್ ನಡೆದಿದ್ದು ಗೆದ್ದವರಿಗೆ ಚಿನ್ನಾಭರಣವನ್ನು ಬಹುಮಾನವಾಗಿ ಕೊಡಲಾಗಿದೆ. ಮೊದಲ ಬಹುಮಾನವನ್ನು ಪೆರುಮಾಳ್- ಮಯಿಲ್, ಎರಡನೇ ಬಹುಮಾನವಾದ 2 ಗ್ರಾಂ ಚಿನ್ನವನ್ನು ಶ್ರೀನಿ- ಪೆರುಮಾಳ್ ಹಾಗೂ 3 ನೇ ಬಹುಮಾನವಾದ 8 ಸಾವಿರ ಹಣವನ್ನು ಸತೀಶ್- ಕರುಪ್ಪನ್ ಎಂಬವರು ಪಡೆದಿದ್ದಾರೆ‌‌. ಭೋರ್ಗರೆದು ಉಕ್ಕಿ ಹರಿಯುವ ಕಾವೇರಿಯಲ್ಲಿ ರೋಮಾಂಚಕವಾದ ರೇಸ್ ನಡೆದಿದೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!