ನಾಲ್ ರೋಡಿನ ಚೆಕ್ ಪೋಸ್ಟ್ ಬಳಿ ಪುಂಡಾನೆ ದಾಳಿ : ದ್ವಿಚಕ್ರ ವಾಹನ ಜಖಂ
ಹನೂರು :- ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಹೊಂದಿರುವ ನಾಲ್ ರೋಡ್ ಹಾಗೂ ಗರಿಕೆ ಕಂಡಿ ಮಾರ್ಗ ಮಧ್ಯ ಚೆಕ್ ಪೋಸ್ಟ್ ಸಮೀಪದಲ್ಲಿ ಪುಂಡನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ಶುಕ್ರವಾರ ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ದಾಳಿ ಮಾಡಿ ಬೈಕ್ ಜಕಂ ಗೊಂಡಿದೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುತಿದ್ದಂತಹ ಬೈಕ್ ಸವಾರರ ಮೇಲೆ ಆನೆಯೊಂದು ದಾಳಿ ಮಾಡಲು ಬಂದಿದೆ ಭಯಬಿತರಾದ ಬೈಕ್ ಸವಾರರು ತಮ್ಮ ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಂತರ ಅಕ್ಕ ಪಕ್ಕದಲ್ಲಿ ಇದ್ದಂತ ಇತರೆ ವಾಹನ ಸವಾರರು ಕೂಗಾಡಿ ಆನೆಯನ್ನು ಚದುರಿಸಿದ್ದಾರೆ. ಇನ್ನು ಸ್ಥಳೀಯ ಅರಣ್ಯ ಸಿಬ್ಬಂದಿಗಳು ಆನೆಯನ್ನು ಚದುರಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್