ಇತ್ತೀಚೆಗೆ ತುಮಕೂರು ಜಿಲ್ಲಾ ಎಸ್.ಪಿ. ಆಗಿ ವರ್ಗಾವಣೆಗೊಂಡು ಬಂದಿರುವ ರಾಹುಲ್ ಕುಮಾರ್ ಐಪಿಎಸ್ ರವರು ಜಿಲ್ಲಾ ಜನತೆಗೆ ಸುರಕ್ಷತೆಯಿಂದ ಜೀವನ ನಡೆಸುವಂತೆ ಸಂದೇಶವನ್ನು ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಜನತೆಯು ಕ್ಲಿಷ್ಟಕರವಾದ ಬದುಕನ್ನು ನಡೆಸುತ್ತಿದ್ದು, ಇಂತಹ ಸಂದರ್ಭದಲ್ಲಿ ಯಾರೂ ಸಹ ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಿ ಮಹಾಮಾರಿಯನ್ನು ಬರಿಸಿಕೊಳ್ಳುವುದಲ್ಲದೇ, ಕೋವಿಡ್ ನಿಯಮ ಪಾಲನೆ ಮಾಡದೇ ವಿನಾಃಕಾರಣ ದಂಡವನ್ನು ಪಾವತಿಸುವುದರಿಂದ ನಷ್ಟವೇ ಹೊರತು ಯಾವುದೇ ತರಹದ ಲಾಭವಿಲ್ಲ, ಅದಕ್ಕಾಗಿ ಜನರು ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ ಇಲ್ಲವಾದಲ್ಲಿ ಮನೆಯಲ್ಲಿಯೇ ಸುರಕ್ಷಿತವಾಗಿರೆಂದು ಸಂದೇಶವನ್ನು ಸಾರಿದ್ದಾರೆ.
ಅಲ್ಲದೇ ಲಾಕ್ಡೌನ್ ಮತ್ತು ಜನತಾ ಕರ್ಫ್ಯೂ ಸಂದರ್ಭದಲ್ಲಿ ಪೊಲೀಸರು ವಶಪಡಿಸಿಕೊಂಡಿರುವವರ ವಾಹನಗಳನ್ನು, ವಾಹನಗಳ ಮಾಲೀಕರು ಕುದ್ದು ಪೊಲೀಸ್ ಠಾಣೆಗಳಿಗೆ ಭೇಟಿಯಾಗಿ ತಮ್ಮ ವಾಹನಗಳನ್ನು ಸೂಕ್ತ ದಾಖಲೆಗಳೊಂದಿಗೆ ದಂಡ ಪಾವತಿಸಿ ಹಿಂಪಡೆಯಬಹುದಾಗಿದೆಂದು ತಿಳಿಸಿದರು, ಈ ರೀತಿಯಾಗಿ ವಾಹನಗಳನ್ನು ಪಡೆಯಲು ಯಾವುದೇ ರೀತಿಯ ಮಧ್ಯವರ್ತಿಗಳ ಅವಶ್ಯಕತೆ ಇರುವುದಿಲ್ಲ ಅಲ್ಲದೇ, ಸುಲಭ ರೀತಿಯಾದ ಅರ್ಜಿಯನ್ನು ಭರ್ತಿ ಮಾಡಿ ವಾಹನಗಳನ್ನು ಹಿಂಪಡೆಯಬಹುದು ಎಂದು ತಿಳಿಸಿದರು.
ತುಮಕೂರಿಗೆ ವರ್ಗಾವಣೆಯಾಗಿ ಬರುವ ಮೊದಲು ಬೆಂಗಳೂರು ಉತ್ತರ ವಿಭಾಗದ ಸಿ.ಐ.ಡಿ. ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರಲ್ಲದೇ, ಹಾಸನದಲ್ಲಿ ಜನಸ್ನೇಹಿ ಎಸ್.ಪಿ. ಎಂಬ ಖ್ಯಾತಿಯನ್ನು ಪಡೆದಿರುವ ಇವರು, ತುಮಕೂರು ಜಿಲ್ಲೆಯಲ್ಲಿ ಜನರ ಸಹಕಾರದಿಂದ ಉತ್ತಮ ಕೆಲಸವನ್ನು ಮಾಡುವುದಲ್ಲದೇ, ತಮ್ಮ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದಾಗಿ ತಿಳಿಸಿದರು.
ನಗರ ಪತ್ರಕರ್ತರೊಂದಿಗೆ ಸೌಹಾರ್ದಯುತ ಭೇಟಿಯಾಗಿ ತಾವು ಇತ್ತೀಚೆಗೆ ಕೆಲಸ ನಿರ್ವಹಿಸಿದ ಮತ್ತು ಮುಂದೆ ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸುವ ಬಗ್ಗೆ ಸುದೀರ್ಘವಾಗಿ ಮಾತನಾಡಿ, ತಾವು ತಮ್ಮ ಎಲ್ಲಾ ಸಿಬ್ಬಂದಿ ವರ್ಗದವರೊಂದಿಗೆ ಉತ್ತಮ ಬಾಂಧವ್ಯದಿಂದ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.