ಕೋಟಿ ಒಡೆಯನಾದರೂ ಭಕ್ತಾದಿಗಳಿಗಿಲ್ಲ ಮೂಲಸೌಕರ್ಯ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರ ಆಕ್ರೋಶ.
ಹನೂರು :- ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ಅವ್ಯವಸ್ಥೆ ಎದ್ದು ಕಾಣುತ್ತಿದೆ. ತಿಂಗಳಿಗೆ ಕೋಟಿ ಕೋಟಿ ಆದಾಯ ಬರುತ್ತಿದ್ದರು ಭಕ್ತಾದಿಗಳಿಗೆ ಮೂಲ ಸೌಕರ್ಯ ಒದಗಿಸದೆ ಇರುವ ದೇವಸ್ಥಾನ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಶುಕ್ರವಾರ ಅಮಾವಾಸ್ಯ ಹಿನ್ನಲೆಯಲ್ಲಿ ರಾಜ್ಯದ ನಾನಾ ಕಡೆಯಿಂದ ಭಕ್ತರು ಆಗಮಿಸುತ್ತಿದ್ದಾರೆ.
1.ಸರಿ ಸುಮಾರು ಸತತವಾಗಿ 4 ಗಂಟೆ ಗಳು ಸರತಿ ಸಾಲಿನಲ್ಲಿ ನಿಂತರು ಭಕ್ತರಿಗೆ ಇನ್ನು ದೇವರ ದರ್ಶನ ವಾಗಿಲ್ಲ
2. ವಯಸ್ಸಾದ ಹಿರಿಯರು ಸರತಿ ಸಾಲಿನಲ್ಲಿ ನಿಂತು ಪ್ರಾಧಿಕಾರ ದ ಈ ಅವ್ಯವಸ್ಥೆ ಗೆ ಹಿಡಿ ಶಾಪ ಹಾಕುವುದು ಕಂಡು ಬಂತು.
3. ಚಿಕ್ಕ ಚಿಕ್ಕ ಮಕ್ಕಳನ್ನು ಹೊತ್ತು ತಂದ ಭಕ್ತರ ಕೊಗು ಹೇಳ ತೀರದು.
4. ಸರಿಯಾದ ನೀರಿನ ವ್ಯವಸ್ಥೆ ಇಲ್ಲ ನೀರಿನ ವ್ಯವಸ್ಥೆ ಇದ್ದ ಕಡೆ ಲೋಟ ಗಳ ವ್ಯವಸ್ಥೆ ಇಲ್ಲ. ಸಮರ್ಪಕ ಸೌಚಾಲಯ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಅನೈರ್ಮಲ್ಯ ತುಂಬಿದೆ
5. ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ಸರಿಯಾದ ಗಾಳಿ ವ್ಯವಸ್ಥೆ ಇಲ್ಲ.
6.ಮತ್ತೆ ಸರಿಯಾದ ಮಾಹಿತಿ ನೀಡುವ ಪ್ರಾಧಿಕಾರದ ಯಾವುದೇ ಸಿಬ್ಬಂದಿ ಗಳಿಲ್ಲ.
7. ಕೊಠಡಿ ತೆಗೆದು ಕೊಳ್ಳುವಗ ಆನ್ಲೈನ್ ಕಾಯ್ದಿರಿಸುವಿಕೆ ವ್ಯವಸ್ಥೆ ಇಲ್ಲದಿದ್ದರೂ ಕೊಠಡಿಗಳು ಮೊದಲೇ ಬುಕ್ಕಿಗ್ ಹಾಗಿವೆ ಎಂದು ಉತ್ತರ ಕೊಡುತ್ತಾರೆ ಅಲ್ಲಿನ ಸಿಬ್ಬಂದಿಗಳು.
8. ಕೋಟಿ ಕೋಟಿ ಆದಾಯ ಗಳಿಸುವ ಮಾದಪ್ಪ ನನ್ನು ನೋಡಲು ಬಹಳ ಗಂಟೆ ಗಳ ಕಾಲ ದಣಿದು ದರ್ಶನ ಮಾಡುವ ವ್ಯವಸ್ಥೆ ಭಕ್ತರಿಗೆ ಉಚಿತ ಕೊಡುಗೆ ನೀಡಬೇಕಿರುವುದು ಪ್ರಾಧಿಕಾರದ್ದು.
9. ಇಂತ ಅವ್ಯವಸ್ಥೆ ಯನ್ನು ಬೇಗ ತೊಲಗಿಸಬೇಕಾಗಿ ನಿಮ್ಮಲ್ಲಿ ಬೇಡುವ ಭಕ್ತರು.
10. ಮಹದೇಶ್ವರ ಬೆಟ್ಟದ ಪ್ರಾಧಿಕಾರ ಇದರ ಬಗ್ಗೆ ಗಮನ ಹರಿಸಿ ಭಕ್ತರಿಗೆ ಯಾವುದೇ ತೊಂದರೆ ಇಲ್ಲದ ಹಾಗೆ ದರ್ಶನದ ವ್ಯವಸ್ಥೆ ಮಾಡಬೇಕು ಭಕ್ತಾದಿಗಳು ನೀಡುವ ಹಣವನ್ನು ಬರುವಂತಹ ಭಕ್ತಾದಿಗಳಿಗೆ ಮೂಲ ಸೌಕರ್ಯ ಒದಗಿಸದ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್