ಹಸಿದ ಹೊಟ್ಟೆಗೆ ಆಸರೆಯಾದ ಪಾಲಿಕೆ ಅಧಿಕಾರಿಗಳು ಪಾಲಿಕೆಯ ನಡೆಗೆ ಸಾರ್ವಜನಿಕರ ಮೆಚ್ಚುಗೆ
ತುಮಕೂರು_ ತುಮಕೂರಿನ ಕ್ಯಾತ್ಸಂದ್ರದ ಎಸ್ಎಲ್ಎನ್ ನಗರದಲ್ಲಿ ವಾಸವಾಗಿರುವ 70 ವರ್ಷದ ಜಯಮ್ಮ ಎನ್ನುವವರು ಹಲವು ವರ್ಷಗಳಿಂದ ತುಮಕೂರಿನ ಕ್ಯಾಸ್ಸಂದ್ರ ಲ್ಲಿ ವಾಸವಾಗಿದ್ದು ಇಳಿ ವಯಸ್ಸಿನಲ್ಲಿ ವೃದ್ಧೆ ಜಯಮ್ಮ ಗೆ ಕುಟುಂಬದವರು ಯಾರು ಇಲ್ಲದ ಕಾರಣ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.
ಇನ್ನು ಎಪ್ಪತ್ತು ವರ್ಷ ಇಳಿವಯಸ್ಸಿನ ಜಯಮ್ಮ ಎನ್ನುವವರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ಪ್ರತಿನಿತ್ಯದ ಆಹಾರಕ್ಕಾಗಿ ಹಪಹಪಿಸುತ್ತಿದ್ದನ್ನು ಗಮನಿಸಿದ ಲಂಚಮುಕ್ತ ಕರ್ನಾಟಕ ವೇದಿಕೆಯ ಸದಸ್ಯರು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ರೇಣುಕಾ ರವರ ಗಮನವನ್ನು ಸೆಳೆದಿದ್ದರು.
ಇದಕ್ಕೆ ಸಂಬಂಧಿಸಿದಂತೆ ವೃದ್ಧೆಯ ಸಮಸ್ಯೆಯನ್ನು ಆಲಿಸಿದ ಆಯುಕ್ತರು ಕ್ಯಾತ್ಸಂದ್ರದ ಇಂದಿರಾ ಕ್ಯಾಂಟೀನ್ ವತಿಯಿಂದ ಪ್ರತಿನಿತ್ಯ ವೃದ್ದೆ ಜಯಮ್ಮಗೆ ದಿನದ ಮೂರು ಹೊತ್ತಿನಲ್ಲೂ ಊಟದ ವ್ಯವಸ್ಥೆ ಮಾಡುವ ಮೂಲಕ ಹಸಿದ ಹೊಟ್ಟೆಗೆ ಆಸರೆಯಾಗಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿದ ವೃದ್ಧೆ ಜಯಮ್ಮ ಕಳೆದ ಹತ್ತು ವರ್ಷದ ಹಿಂದೆ ಇದ್ದ ಮಗನು ಸಹ ಮನೆಬಿಟ್ಟು ಹೊರಟುಹೋಗಿದ್ದು ಈಗ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದೇನೆ. ಪ್ರತಿ ತಿಂಗಳು ಸರ್ಕಾರದಿಂದ ಬರುವ 1200 ಮಾಶಾಸನದ ಮೂಲಕ ಜೀವನ ನಡೆಸುತ್ತಿದ್ದು ಅದರಲ್ಲಿ ತಾನು ವಾಸವಿರುವ ಮನೆಗೆ ₹500 ಬಾಡಿಗೆಯನ್ನು ಸಹ ನೀಡಿ ಉಳಿದ 700 ರೂಪಾಯಿಯಲ್ಲಿ ಜೀವನ ನಡೆಸುತ್ತಿದ್ದು. ಈಗ ತುಮಕೂರಿನ ಪಾಲಿಕೆ ವತಿಯಿಂದ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡಿದ್ದು ಪ್ರತಿದಿನ ಮನೆಗೆ ಊಟವನ್ನು ತಂದುಕೊಡುತ್ತಿದ್ದಾರೆ ಎಂದಿದ್ದಾರೆ.
70 ವರ್ಷದ ವೃದ್ದೇ ಜಯಮ್ಮಾಗೆ ಕಣ್ಣಿನ ಸಮಸ್ಯೆ ಇದ್ದು ಕೇವಲ ಒಂದು ಕಾಣುತ್ತಿದ್ದು ಮತ್ತೊಂದು ಕಣ್ಣಿನ ಆಪರೇಷನ್ ಅವಶ್ಯಕತೆ ಇದೆ ಮುಂದೆ ಯಾರಾದರೂ ದಾನಿಗಳು ಮುಂದಾದರೆ ಕಣ್ಣಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ಮುಖಂಡ ಮುನಿರಾಜು ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಹಸಿವಿನಿಂದ ಕಂಗೆಟ್ಟಿದ್ದ ವೃದ್ದೆಗೆ ಪಾಲಿಕೆಯ ವತಿಯಿಂದ ಊಟದ ವ್ಯವಸ್ಥೆ ಮಾಡಿದ್ದು ನಿಜಕ್ಕೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಮೂಲಕ ವೃದ್ಧೆಯ ಸಮಸ್ಯೆಯನ್ನು ಆಲಿಸಿ ಕೂಡಲೇ ತಮ್ಮ ಮನವಿಗೆ ಸ್ಪಂದಿಸುವ ಮೂಲಕ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಪಾಲಿಕೆಯ ಅಧಿಕಾರಿಗಳು ವೃದ್ಧೆಯ ನೆರವಿಗೆ ಬಂದಿರುವುದು ನಿಜಕ್ಕೂ ಶ್ಲಾಘನೀಯ ಈ ಮೂಲಕ ಪಾಲಿಕೆ ಅಧಿಕಾರಿಗಳಿಗೆ ಲಂಚಮುಕ್ತ ವೇದಿಕೆಯ ಪದಾಧಿಕಾರಿಗಳು ಪಾಲಿಕೆ ಅಧಿಕಾರಿಗಳ ನಡೆಯನ್ನು ಸ್ವಾಗತಿಸಿದ್ದಾರೆ.
ವರದಿ ಮಾರುತಿ ಪ್ರಸಾದ್ ತುಮಕೂರು