ದಲಿತ ಅಲ್ಪಸಂಖ್ಯಾತ ಹಿಂದುಳಿ ಪ್ರಗತಿಪರ ಸಂಘಟನೆಗಳ ಓಕ್ಕೂಟದ ವತಿಯಿಂದ ನಾದ ಬ್ರಹ್ಮ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಪರ ಪ್ರತಿಭಟನೆ
ತುಮಕೂರಿನಲ್ಲಿ ದಲಿತ ಅಲ್ಪಸಂಖ್ಯಾತ ಹಿಂದುಳಿ ಪ್ರಗತಿಪರ ಸಂಘಟನೆಗಳ ಓಕ್ಕೂಟದ ವತಿಯಿಂದ ನಾದ ಬ್ರಹ್ಮ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಪರ ಪ್ರತಿಭಟನೆ ಮಾಡುವ ಮೂಲಕ ಬೆಂಬಲ ನಿಡಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅಲ್ಪಸಂಖ್ಯಾತ ಸಂಘಟನೆಯ ಜೀಲ್ಲಾಧ್ಯಕ್ಷರಾದ ಅತೀಖ್ ಅಹಮದ್ ಮಾತಾನಾಡಿ ಡಾ ಹಂಸಲೇಖ ರವರು ಮಾತನಾಡಿದ ಮಾತಿನಲ್ಲಿ ಯಾವುದೇ ತಪ್ಪಿಲ್ಲಾ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನು ಎಷ್ಟು ದಿನ ದಲಿತರು ಅಸ್ಪೃಶ್ಯತೆಯನ್ನು ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ ವಿನಹ ಅವರು ಯಾರ ತೇಜೋವಧೆಯನ್ನು ಮಾಡಿಲ್ಲ. ಜಾತಿ ಹೋಗಲಾಡಿಸುವ ಬೂಟಾಟಿಯ ನಾಟಕವಾಡುವ ಮುಖಂಡರ ಮನೆಗಳಿಗೆ ಬೇಟಿ ನೀಡಿ ಸಹಪಂಕ್ತಿ ಬೋಜನ ಮಾಡುವುದರಿಂದ ಜಾತಿಯತೆ ಹೋಗುವುದಿಲ್ಲ *ದಲಿತರ ಮನೆಗೆ ಬಲಿತರು ಹೋಗುವುದು ದೊಡ್ಡದ್ದಲ್ಲಾ ಬಲಿತರ ಮನೆಗೆ ದಲಿತರನ್ನು ಕರೆದುಕೊಂಡು ಹೋಗಿ ಅವರ ಸತ್ಕಾರ ಮಾಡುವುದು ಒಳ್ಳೆಯದು* ಎಂಬ ಅರ್ಥದಲ್ಲಿ ಮಾತನಾಡಿದ ಡಾ ಹಂಸಲೇಖ ರವರನ್ನು ತೇಜೋವಧೆ ಮಾಡುವುದು ಸರಿಯಲ್ಲ ಹಂಸಲೇಖ ಅವರ ಬೆಂಬಲವಾಗಿ ನಾವೆಲ್ಲ ಜ್ಯೋತೆಯಲ್ಲಿ ಇದ್ದೇವೆ ಎಂದು ಹೇಳಿದರು.
ಮತ್ತೋರ್ವ ದಲಿತ ಚಳುವಳಿ ಮುಖಂಡರಾದ ಕೂಟ್ಟ ಶಂಕರ್ ಮಾತನಾಡಿ ಡಾಕ್ಟರ್ ಹಂಸಲೇಖ ರವರು ದೇಶದ ಹಿರಿಮೆಯನ್ನು ಸಾರುವಂತ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ತಿಳಿಸುವಂತ ಹೇಳಿಕೆಯನ್ನು ಸಹಿಸದ ಕೆಲ ಮನುವಾದಿಗಳು ಅವರ ಮೇಲೆ ಬಾಹ್ಯ ಒತ್ತಡ ಹೇರುವ ಮೂಲಕ ಕ್ಷಮೆ ಕೇಳುವಂತೆ ಮಾಡಿದ್ದು ಅಲ್ಲದೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಸಿ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ವಾಗಿದೆ ಹಂಸಲೇಖ ಅವರ ವಿರುದ್ದ ದಾಖಲಾಗಿರುವ ಪ್ರಕರಣವನ್ನು ತುಮಕೂರು ಜಿಲ್ಲೆಯ ಸಂಘಟನೆಗಳು ಗೌರವಪೂರ್ವಕವಾಗಿ ಒತ್ತಾಯಿಸುತ್ತದೆ ಹಂಸಲೇಖ ರವರ ವಿರುದ್ಧದ ಎಪ್ ಐ ಆರ್ ಕೂಡಲೆ ರದ್ದುಗೊಳಿಸದೇ ಹೋದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದರು.
ಬಹುಸಂಖ್ಯಾತರ ಆಹಾರ ಪದ್ದತಿ ಕುರಿತು ಅವಹೇಳನಕಾರಿಯಾಗಿ ಮತ್ತು ಹಂಸಲೇಖ ವಿರುದ್ದ ಪ್ರತಿಭಟನೆ ಹಾಗೂ ದೂರು ದಾಖಲಿಸಿರುವವರ ವಿರುದ್ಧ ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಂಘಟನೆಗಳು ಪೋಲಿಸ್ ಠಾಣೆಯಲ್ಲಿ ಸಾಮೂಹಿಕವಾಗಿ ಪ್ರತೌ ದೂರು ದಾಖಲಿಸಬೇಕಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ .ರಂಗಯ್ಯ ಚ .ಅ ಜಾ ವ ಹಿ ರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು.ಹತಿಖ್ ಅಹಮದ್. ನಿಕೇತ್ ರಾಜ್ ಮೌರ್ಯ . ಭಾನುಪ್ರಕಾಶ್ .ಪಿ ಎನ್ ರಾಮಯ್ಯ ಜೆ ಸಿ ಬಿ ವೆಂಕಟೇಶ್ ಟಿ ಸಿ ರಾಮಯ್ಯ ಚ
ಛಲವಾದಿ ಶೇಖರ್. ಕೂಟ್ಟ ಶಂಕರ್ .ರಂಜನ್ ಎ .ಕೇಬಲ್ ರಘು ಕುಮಾರ್ . ನಟರಾಜ್ ಆರ್ ಪಿ ಐ . ತಾಜ್ ಹುದ್ದಿನ್ ಷರೀಫ್ .ಶ್ರೀನಿವಾಸ್ ಅಬ್ಬುತನಹಳ್ಳಿ .ಕೆಂಪರಾಜು . ವಿ ರಾಮಾಂಜಿ . ಗೋಪಾಲ್ . ರಾಮೂರ್ತಿ. ಟಿ ಪಿ ಮೂಹನ್ . ಕೃಷ್ಣಮೂರ್ತಿ ನರಸಯ್ಯ . ಗೋಪಿ ಮುಂತಾದವರು ಭಾಗವಹಿಸಿದ್ದರು.