ಖಾಸಗಿ ಶಿಕ್ಷಕರು, ಸಿಬ್ಬಂದಿಗೆ ಬೇಕು ಪ್ಯಾಕೇಜ್…!
2 ವರ್ಷದ ಉದ್ಯೋಗ ಇಲ್ಲ..ವಿದ್ಯೆಗೆ ಬೆಲೆ ಇಲ್ಲ!
ಸರಕಾರದ ತಪ್ಪಿಗೆ ಜನರ ಜೇಬಿನ ಹಣ ಏಕೆ..?
ಶಾಲೆಗಳು ಶುರುವಾಗೋದು ಡೌಟು..
ಬೆಂಗಳೂರು: ಕರೋನಾ ಹಿನ್ನೆಲೆ ಎರಡು ಲಾಕ್ ಡೌನ್ ಇದೀಗ ಖಾಸಗಿ ಶಿಕ್ಷಕರ ಬದುಕನ್ನು ಬೀದಿಗೆ ತಳ್ಳಿದೆ.
ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಖಾಸಗಿ ಶಿಕ್ಷಕರಿದ್ದಾರೆ. ಈ ಶಾಲೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಬಡ, ಮಧ್ಯಮ ವರ್ಗದ ಈ ಖಾಸಗಿ ಶಿಕ್ಷಕರ ಬದುಕು ಈಗ ಗೊಂದಲದಲ್ಲಿದೆ. ಸರಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.
ಖಾಸಗಿ ಶಿಕ್ಷಕರು ಅತ್ತ ಬೇರೆ ಕಡೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಇತ್ತ ಇಲ್ಲಿ ಕೆಲಸವೂ ಇಲ್ಲ. ಲಕ್ಷ ಲಕ್ಷ ಖಾಲಿ ಮಾಡಿ ಓದಿದರೂ ಈಗ ಭವಿಷ್ಯ ಕತ್ತಲೆಯತ್ತ ಸಾಗಿದೆ. ಸರಕಾರ ಇವರಿಗೆ ಸಹಾಯ ಮಾಡಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
ಜನರ ಜೇಬಿಗೆ ಕತ್ತರಿ!: ಕಳೆದ ಒಂದು ತಿಂಗಳ ಹಿಂದೆ ನಡೆದ ಚುನಾವಣೆ ರಾಜ್ಯದಲ್ಲಿ ಕರೋನಾ ಹರಡಲು ಪ್ರಮುಖ ಕಾರಣ. ಈ ಚುನಾವಣೆಗೆ ಕೆಲಸಕ್ಕೆ ಹೋಗಿದ್ದ 40ಕ್ಕೂ ಹೆಚ್ಚು ಶಿಕ್ಷಕರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ಸರಕಾರದಿಂದ ನೀಡಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ಈ ಹಣ ಏನೂ ಸಾಲದು. ಆದ್ರೆ ಚುನಾವಣೆ ಬೇಡದ ಸಮಯದಲ್ಲಿ ಮಾಡಿದ್ದರಿಂದ ರಾಜಕಾರಣಿಗಳೇ ಅದರ ಹಣ ಭರಿಸಲಿ. ಜನರ ಹಣ ವಿನಿಯೋಗ ಏಕೆ ಎಂಬ ಪ್ರಶ್ನೆ ಎದ್ದಿದೆ.
ಶಾಲೆಗಳು ಡೌಟು: ಈಗಿನ ಕರೋನಾ ಪರಿಸ್ಥಿತಿ ಮತ್ತು ಮಕ್ಕಳಿಗೆ 3 ಹಂತದಲ್ಲಿ ಕರೋನಾ ಬರುವ ಬಗ್ಗೆ ತಜ್ಞರು ಎಚ್ಚರ ಕೊಟ್ಟ ಹಿನ್ನೆಲೆ 3 ತಿಂಗಳು ಶಾಲೆ ಶುರುವಾಗುವುದು ಡೌಟು. ಹೀಗಾಗಿ ಖಾಸಗಿ ಶಾಲೆ ಶಿಕ್ಷಕರು, ಸಿಬ್ಬಂದಿ ಬದುಕು ಅತಂತ್ರವಾಗಿದೆ.