ಪತ್ರಕರ್ತರು ವಿಷಯದ ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡಬೇಕು_ಡಾ ಜಿ ಪರಮೇಶ್ವರ್

 

ತುಮಕೂರು- ಸದಾಕಾಲ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರು ವಿಷಯದ ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡಬೇಕು. ಈ ವಿಚಾರವಾಗಿ ಪ್ರತಿಯೊಬ್ಬ ಪತ್ರಕರ್ತರಲ್ಲೂ ಆತ್ಮಾವ ಲೋಕನ ಅಗತ್ಯವಾಗಿದೆ ಎಂದು ಮಾಜಿ ಉಪಮುಖ್ಯ ಮಂತ್ರಿ ಡಾ. ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು. ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಇಂದು ಬೆಳಿಗ್ಗೆ ಹಮ್ಮಿಕೊಳ್ಳ ಲಾಗಿದ್ದ ಪತ್ರಿಕಾ ದಿನಾಚರಣೆ, ಆರೋಗ್ಯ ಕಾರ್ಡ್ ಮತ್ತು ದಿನಸಿ ಕಿಟ್ ವಿತರಣಾ ಸಮಾ ರಂಭವನ್ನು ಉದ್ಘಾಟಿಸಿ, ಮಾತನಾಡಿದರು. ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಪತ್ರಿಕಾ ರಂಗಾ ತನ್ನ ಜವಾಬ್ದಾರಿಯನ್ನು ಅರಿಯ ಬೇಕು ಎಂದ ಅವರು, ಆದಷ್ಟು ಶೀಘ್ರವಾಗಿ ಸುದ್ದಿ ನೀಡುವ ಬರದಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದು ಮತ್ತು ಪ್ರಕಟಿಸು ವುದು ಸಮಂಜಸವಲ್ಲ ಎಂದು ಸಲಹೆ ನೀಡಿದರು. ಸ್ವಾತಂತ್ರö್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆ ಇದ್ದಾಗ ಪತ್ರಿಕೆ ನಡೆಸುವುದು ಕಷ್ಟವಾಗಿದ್ದು, ಸ್ವಾತಂತ್ರö್ಯ ಹೋರಾಟದ ಮುಂಚೂಣಿ ನಾಯಕರ ಭಾಷಣದ ಸುದ್ದಿಗಳನ್ನು ಕದ್ದು ಮುಚ್ಚಿ ಪ್ರಕಟಿಸಿ, ಅವುಗಳನ್ನು ಸೈಕಲ್‌ಗಳಲ್ಲಿ ಅಡ್ಡದಾರಿ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು ಎಂದರು. ಇAದು ಕಾಲಘಟ್ಟ ಬದ ಲಾಗಿದ್ದು, ಪತ್ರಿಕಾ ರಂಗದಲ್ಲಿ ಕ್ರಾಂತಿ ಉಂಟಾಗಿದ್ದು, ಸುದ್ದಿಯ ಬಿತ್ತರಣೆ ಮತ್ತು ಪ್ರಕಟಣೆಯ ವೇಗ ಹೆಚ್ಚಾಗಿದ್ದು, ಕೆಲವೇ ಕ್ಷಣಗಳಲ್ಲಿ ದೇಶದ ನಾನಾ ಭಾಗಗಳಿಗೆ ಸುದ್ದಿಗಳು ಮುಟ್ಟುತ್ತವೆ ಎಂದರು. ಕೆಲವೊಮ್ಮೆ ಅಷ್ಟೇನೂ ಮಹತ್ವವಲ್ಲದ ವಿಷಯಗಳು ತುಂಬಾ ಸೂಕ್ಷö್ಮ ಸುದ್ದಿಗಳಾಗಿ ಬಿಂಬಿತವಾಗುತ್ತವೆ ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದರು.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ಡಿಜಿಟಲ್, ಎಲೆ ಕ್ಟಾçನಿಕ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಆರಂಭವಾಗಿ ಸುದ್ದಿಯ ಪ್ರಸಾರದ ವೇಗ ಹೆಚ್ಚಳವಾಗಿದೆ ಎಂದರು. ಮಾಧ್ಯಮ ಕ್ಷೇತ್ರದಲ್ಲಿ ಫೇಕ್‌ನ್ಯೂಸ್‌ಗಳ ತಡೆಗೆ ಗಮನಹರಿಸಬೇಕಾಗಿದ್ದು, ಈ ಕ್ಷೇತ್ರದ ಕ್ರಾಂತಿಕಾರಕ ಬದಲಾ ವಣೆ ದುರುಪಯೋಗವಾಗ ದಿರಲಿ ಎಂದು ಸಲಹೆ ನೀಡಿದರು.

ಜಿ.ಪಂ. ಸಿಇಒ ವಿದ್ಯಾ ಕುಮಾರಿ ಮಾತನಾಡಿ, ಪತ್ರಿಕೆ ಗಳು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುವಂತಾ ಗಬೇಕು ಎಂದು ತಿಳಿಸಿದರು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಮಾತನಾಡಿ, ಇಡಿ ರಾಜ್ಯದಲ್ಲಿ ೩೨ ಮಂದಿ ಪತ್ರಕರ್ತರು ಕೊರೊನಾಗೆ ಬಲಿಯಾಗಿದ್ದು, ಇವರ ಕುಟುಂ ಬಗಳಿಗೆ ಸರ್ಕಾರ, ರಾಜ್ಯ ಸಂಘ ಮತ್ತು ಜಿಲ್ಲಾ ಸಂಘದ ವತಿಯಿಂದ ಅಗತ್ಯ ಪರಿಹಾರ ನೀಡಲಾಗಿದೆ ಎಂದರು. ಜಿಲ್ಲಾ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್.ಡಿ. ರಂಗನರಾಜು, ರಾಜ್ಯ ಸಮಿತಿ ಸದಸ್ಯ ನಾಗರಾಜು, ಬೆಂಗ ಳೂರು ನಗರ ಕಾರ್ಯದರ್ಶಿ ದೇವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!