ರಾಜ್ಯದ ಇತಿಹಾಸದಲ್ಲೇ ವಿಶೇಷವಾಗಿ ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತಕ್ಕೆ ಸಿದ್ದತೆ_ ಶಾಸಕ ಡಿ.ಸಿ ಗೌರಿಶಂಕರ್
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪಂಚರತ್ನ ಯಾತ್ರೆಯು ಡಿಸೆಂಬರ್ 29ರಂದು ಆಗಮಿಸಲಿದ್ದು ಅದ್ದೂರಿ ಸಿದ್ದತೆ ಕೈಗೊಳ್ಳಲಾಗಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದ್ದಾರೆ.
ಪಂಚರತ್ನ ರಥಾಯತ್ರೆ ಬಗ್ಗೆ ತುಮಕೂರು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬುರಿಗೆ ಪಂಚರತ್ನ ಯಾತ್ರೆ ಆಗಮಿಸಲಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ ಆ ಮೂಲಕ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನೆಚ್ಚಿನ ನಾಯಕ ಕುಮಾರಸ್ವಾಮಿರವರಿಗಾಗಿ ವಿಶೇಷವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನು ನಾಳೆ ನಡೆಯುವ ಪಂಚರತ್ನ ಯಾತ್ರೆಯು ಹೆಬ್ಬೂರು, ನಾಗವಲ್ಲಿ, ಹೊನ್ನುಡಿಕೆ ,ಹೊನ್ನಡಿಕೆ ಹ್ಯಾಂಡ್ ಪೋಸ್ಟ್ ಗೂಳೂರು, ಪಂಡಿತನಹಳ್ಳಿ , ಉರ್ಡಿಗೆರೆ ಬೆಳಗುಂಬ ಮಾರ್ಗವಾಗಿ ಯಲ್ಲಾಪುರದವರೆಗೂ ಪಂಚರತ್ನ ರಥಯಾತ್ರೆ ಸಾಗಲಿದ್ದು ಯಾತ್ರೆ ಯುದ್ಧಕ್ಕು ವಿವಿಧ ಕಲಾತಂಡಗಳು ಸೇರಿದಂತೆ 50,000ಕ್ಕೂ ಹೆಚ್ಚು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಇನ್ನು ಪಂಚರತ್ನ ರಥ ಯಾತ್ರೆಗೆ ಗ್ರಾಮoತರ ಕ್ಷೇತ್ರದ ಕಾರ್ಯಕರ್ತರು ಸ್ನೇಹಿತರು ರೈತ ಸಮುದಾಯ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಸಾರ್ವಜನಿಕರಿಂದ ಅದ್ದೂರಿ ಸ್ವಾಗತಕ್ಕೆ ವೇದಿಕೆ ಸಿದ್ಧಗೊಂಡಿದ್ದು.
ಹೆಬ್ಬುರಿನಲ್ಲಿ ಯಾತ್ರೆ ಆಗಮಿಸಿದ ವೇಳೆ 25000 ಹೆಚ್ಚು ಜನರಿಂದ ಸ್ವಾಗತ ಕೋರಲು ನಿರ್ಧರಿಸಲಾಗಿದೆ ಎಂದರು.ಬೇರೆ ತಾಲೂಕಿಗೆ ನಿರೀಕ್ಷೆ ಮೀರಿ ಮಾಜಿ ಮುಖ್ಯಮಂತ್ರಿಗಳಿಗೆ ವಿಶೇಷ ಸ್ವಾಗತ ಕೊಡಲು ನಮ್ಮ ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಅವರು ಹೆಬುರಿಗೆ ಯಾತ್ರೆ ಆಗಮಿಸುವ ವೇಳೆ ಪ್ಯಾರಾ ಗ್ಲೈಡಿಂಗ್ ಮೂಲಕ ಹೂ ಮಳೆ ಸುರಿಸುವ ಮೂಲಕ ಸ್ವಾಗತ ಕೋಡಲು ನಿರ್ಧರಿಸಲಾಗಿದೆ ಎಂದರು.
ಇನ್ನು ದೇಶದ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿಯವರಿಗೆ ಇಂತಹ ಅದ್ದೂರಿ ಸ್ವಾಗತ ಸಿಗಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಬ್ಬದ ವಾತಾವರಣವನ್ನ ನಿರ್ಮಾಣ ಮಾಡಲಾಗುವುದು ಈ ಮೂಲಕ ಹೊಸ ವರ್ಷಾಚರಣೆಯನ್ನ ಪಂಚರತ್ನ ಯಾತ್ರೆಯ ಮೂಲಕ ಆಚರಿಸಲು ಗ್ರಾಮಾಂತರ ಕ್ಷೇತ್ರದ ಜನರು ಕಾಯುತ್ತಿದ್ದಾರೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಬಲೂನ್ ಶೋ ,ಅಂಬ್ರೆಲಾ ಶೋ, ವಿವಿಧ ಕಲಾತಂಡಗಳೊಂದಿಗೆ ವಿಶೇಷ ಕಾರ್ಯಕ್ರಮ ಹಾಗೂ ಯಲ್ಲಾಪುರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯ ಮಾಹಿತಿ ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ರವರ ನಡೆದು ಬಂದ ಹಾದಿ ಹಾಗೂ ಪಂಚರತ್ನ ಯಾತ್ರೆಯ ಮಾಹಿತಿಯನ್ನ ಎಲ್ಇಡಿ ಲೈಟ್ ಶೋ ಮೂಲಕ ಸಾರ್ವಜನಿಕರಿಗೆ ತಿಳಿಸುವ ವಿನುತನ ಕಾರ್ಯಕ್ರಮದ ಜೊತೆ ಸಂಗೀತ ಸಂಜೆ ಸಹ ನಡೆಯಲಿದೆ ಎಂದರು.
ಪಂಚರತ್ನ ರಥಯಾತ್ರೆಯ ಉದ್ದಕ್ಕೂ ವಿವಿಧ ರೀತಿಯಲ್ಲಿ ಸ್ವಾಗತ ಕೋರಲು ಪಕ್ಷದ ಕಾರ್ಯಕರ್ತರು ಮುಖಂಡರು ಅಣಿಯಾಗಿದ್ದು 200ಕ್ಕು ಹೆಚ್ಚು ಜೆಸಿಬಿ ಮೂಲಕ ಹೂ ಮಳೆ ಸುರಿಸಲಾಗುವುದು ಹಾಗೂ ಒಂದು ಲಕ್ಷ ದೀಪೋತ್ಸವ ಕಾರ್ಯಕ್ರಮ , 500 ಆಟೋ ಹಾಗೂ 500 ಕಾರ್ ಗಳ ಮೂಲಕ ಅದ್ದೂರಿಯಾಗಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನ ನಡೆಸಲು ಸಕಲ ಸಿದ್ಧತೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಲ್ಲಾಪುರದಲ್ಲಿ ಗ್ರಾಮ ವಾಸ್ತವ್ಯ.
ತುಮಕೂರಿನ ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಹಾಲನೂರು ಅನಂತ್ ಕುಮಾರ್, ಟಿ ಆರ್ ನಾಗರಾಜು, ಚೆಲುವರಾಜು ಹಾಜರಿದ್ದರು.
ವರದಿ ಮಾರುತಿ ಪ್ರಸಾದ್ ತುಮಕೂರು