ಹಲ್ಲೆಗೊಳಗಾದ ಬಜರಂಗದಳದ ಮಂಜು ಭಾರ್ಗವ ಭೇಟಿ ಮಾಡಿದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್.
ಕಳೆದ ನಾಲ್ಕು ದಿನಗಳ ಹಿಂದೆ ತುಮಕೂರಿನ ಗುಬ್ಬಿ ಗೇಟ್ ಬಳಿ ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಮೇಲೆ ನಡೆದ ಹಲ್ಲೆಯಿಂದ ಗಾಯಗೊಂಡಿದ್ದ ಮಂಜು ಬಾರ್ಗವ ಅವರನ್ನು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರವರು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಹಲ್ಲೆ ನಡೆದ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪಡೆದ ಪ್ರಮೋದ್ ಮುತಾಲಿಕ್ ರವರು ನಂತರ ಪತ್ರಕರ್ತರೊಂದಿಗೆ ಮಾತನಾಡಿ ಮಂಜು ಭಾರ್ಗವ್ ಅವರು ಹಿಂದುತ್ವದ ಬಗ್ಗೆ ನಿರಂತರ ಹೋರಾಟ ಮಾಡಿದ ಪ್ರಕಾರ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಮೇಲೆ ಹಲ್ಲೆಯಾಗಿದ್ದು ಖಂಡನೀಯ ಇನ್ನು ಹಲ್ಲೆಯ ಉದ್ದೇಶ ಸ್ಪಷ್ಟವಾಗಿದ್ದು ಗೋಮಾತೆ, ಹಿಂದೂ ಹೆಣ್ಣುಮಕ್ಕಳ ರಕ್ಷಣೆ ಹಾಗೂ ಅಕ್ರಮ ಕಸಾಯಿ ಖಾನೆ ವಿರುದ್ಧ ಹೋರಾಟ ಮಾಡುತ್ತಿದ್ದ ವ್ಯಕ್ತಿ ಮಂಜು ಭರ್ಗವ್.
ಗೋ ಹಂತಕರು ಹಾಗೂ ಹಿಂದೂ ವಿರೋಧಿಗಳು ವ್ಯವಸ್ಥಿತವಾಗಿ ಪೂರ್ವನಿಯೋಜಿತವಾಗಿ ಅವರ ಮೇಲೆ ಹಲ್ಲೆ ಆಗಿದ್ದು ದೇವರ ಕೃಪೆ ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನು ಮಂಜು ಬಾರ್ಗವ ಮೇಲೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ಆರೋಪ ಕೇಳಿಬಂದಿದ್ದು ಕೂಡಲೇ ಅವರನ್ನು ಬಂಧಿಸಬೇಕು, ಹಲ್ಲೆ ನಡೆಯುವ ಮುಂಚಿತವಾಗಿಯೇ ಕೆಲವರು ಬೆದರಿಕೆಯನ್ನು ಸಹ ಹಾಕಿದ್ದು ನಂತರ ಅದರ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಆದರೆ ಪೊಲೀಸರ ನಿರ್ಲಕ್ಷದಿಂದ ಮಂಜು ಬರ್ಗವ್ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದರು.
ಇದಕ್ಕೆ ಸಂಬಂಧಿಸಿದಂತೆ ಇದರ ಹಿಂದೆ ಯಾರೇ ಇದ್ದರೂ ಸಹ ಎಚ್ಚರಿಕೆಯಿಂದ ಇರಬೇಕು ಎಂದು ಸಂದೇಶ ರವಾನಿಸಿದ್ದಾರೆ . ಮಂಜು ಬರ್ಗ ಮೇಲೆ ಹಲ್ಲೆ ನಡೆದ ನಂತರ ತುಮಕೂರು ಬಂದ್ ನಡೆಸುವ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ ಇದು ಹೀಗೆ ಮುಂದುವರೆದರೆ ನಂತರ ರಾಜ್ಯಾದ್ಯಂತ ತುಮಕೂರು ಚಲೋ ಮಾಡಬೇಕಾಗುತ್ತದೆ ಎಂದು ತಿಳಿಸಿದರು.