ರಾಜಕಾರಣಿಗಳ ವಿರುದ್ಧ ಮುತಾಲಿಕ್ ವಾಗ್ದಾಳಿ

ರಾಜಕಾರಣಿಗಳ ವಿರುದ್ಧ ಮುತಾಲಿಕ್ ವಾಗ್ದಾಳಿ.

 

ಶಿವಮೊಗ್ಗ: ಬಿಜೆಪಿಯಲ್ಲಿ ನಿರಂತರವಾಗಿ ಟಿಕೆಟ್ ವಂಚಿತರಾಗುತ್ತಿರುವ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್  ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ ಎನ್ನಲಾಗುತ್ತಿದ್ದು, ರಾಜಕಾರಣಿಗಳಷ್ಟು ನಿರ್ಲಜ್ಜ ನೀಚರು ಯಾರೂ ಇಲ್ಲ. ಹಾಗಾಗಿ ರಾಜಕಾರಣಿಗಳ ಬದಲಾಗಿ, ಹಿಂದೂ ಸಂಘಟನೆಗಳಿಗೆ ಬಲತುಂಬಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

 

ನಮಗೆ ಬಲತುಂಬಿ, ನಿಮ್ಮ ದೇವಸ್ಥಾನ ಉಳಿಸುತ್ತೇವೆ. ನಿಮ್ಮ ಅಕ್ಕ—ತಂಗಿಯರನ್ನು ಉಳಿಸುತ್ತೇವೆ. ನಿಮ್ಮ ಹಸುವಿನ ಒಂದೇ ಒಂದು ಹನಿ ರಕ್ತ ನೆಲಕ್ಕೆ ಬೀಳಲು ಬಿಡುವುದಿಲ್ಲ. ರಾಜಕಾರಣಿಗಳಿಗೆ ಬಲತುಂಬಬೇಡಿ ಅವರಷ್ಟು ನಿರ್ಲಜ್ಜ ನೀಚರು ಯಾರೂ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾಡಿದ್ದಾರೆ.

 

 

ರಾಜಕಾರಣಿಗಳು ಯಾವುದೇ ಪಕ್ಷದವರಾಗಲಿ ಅವರಿಗೆ ಧಿಕ್ಕಾರವಿರಲಿ. ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಹಿಂದುತ್ವದ ಮುಖವಾಡ ಹಾಕಿಕೊಂಡು ದೇಶದಲ್ಲಿ ಆಗುತ್ತಿರುವ ಅನಾಹುತಕ್ಕೆ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.

 

ರಾಜ್ಯದಲ್ಲಿ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಕೆಡವಿತ್ತು ಈ ವಿಚಾರಕ್ಕೂ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮುತಾಲಿಕ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶ್ರೀರಾಮನ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಬಿಜೆಪಿ ಪರವಾಗಿ ನಿರಂತರ ಕೆಲಸಗಳನ್ನು ಮಾಡಿದರೂ ಬಿಜೆಪಿ ಪಕ್ಷವು ಸಂಘಟನೆಯ ಹೊರಗಿನವರಿಗೆ ಅವಕಾಶಗಳನ್ನು ನೀಡುತ್ತಿರುವುದು ಮುತಾಲಿಕ್ ಅವರ ಕೆಂಗಣ್ಣಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

 

ಇತ್ತೀಚೆಗಷ್ಟೆ ಬಿಜೆಪಿ ಟಿಕೆಟ್ ವಂಚಿತರಾಗಿದ್ದಕ್ಕೆ ಮುತಾಲಿಕ್ ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೇವಸ್ಥಾನ ಉರುಳಿಸಿದ ವಿಚಾರ ಮೊದಲಾದವುಗಳನ್ನು ಎತ್ತಿಕೊಂಡು ಪಕ್ಷದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರೆ ಎನ್ನುವ ಅನುಮಾನಗಳು ಕೇಳಿ ಬಂದಿವೆ.

Leave a Reply

Your email address will not be published. Required fields are marked *

You cannot copy content of this page

error: Content is protected !!