ತುಮಕೂರು : ಕೃಷಿ ಇಲಾಖೆಯು ಜಿಲ್ಲೆಯಲ್ಲಿ 2021ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮನವಿ ಮಾಡಿದೆ.
ತಾಲ್ಲೂಕಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸ್ಧಳ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲೀಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ(ಇನಂಡೇಷನ್)ಯಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ರೈತರಿಗೆ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ವಿಮೆ ಮಾಡಿಸಿರುವ ರೈತರು ತಮ್ಮ ಬೆಳೆ ನಷ್ಟದ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಛೇರಿಗಳಿಗೆ 48 ಗಂಟೆಯೊಳಗೆ ತಿಳಿಸಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಯೊಳಗೆ ತಿಳಿಸಬೇಕು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇಕಡಾ 25ರಷ್ಟು ಬೆಳೆ ವಿಮಾ ನಷ್ಟ ಪರಿಹಾರವನ್ನು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು.
ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂಧರ್ಭದಲ್ಲಿ ಎರಡು ವಾರ(ಹದಿನಾಲ್ಕು ದಿನಗಳು)ದೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಬೆಳೆಗಳನ್ನು ಈ ಯೋಜನೆಯಡಿ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲು ಫ್ಯೂಚರ್ ಜನರಲಿ ಜನರಲ್ ಇನ್ಸೂರೆನ್ಸ್ ಕಂಪನಿ ಸಂಸ್ಥೆಯನ್ನು ನಿಗಧಿಪಡಿಸಲಾಗಿದೆ.
ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಾಯಿಸಲು ವಿಮಾ ಕಂತಿನ ಮೊತ್ತ ಹಾಗೂ ಕಡೆಯ ದಿನಾಂಕವನ್ನು ನಿಗಧಿಪಡಿಸಲಾಗಿದ್ದು ಅರ್ಹ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿರದ ಬ್ಯಾಂಕ್ ಗಳಲ್ಲಿ ನಿಗಧಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕೆಂದು
ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನ ಮನವಿ ಮಾಡಿದ್ದಾರೆ.
*ನಿಗಧಿಪಡಿಸಿದ ವಿಮಾ ಕಂತು(ಪ್ರತಿ ಎಕರೆಗೆ) ಹಾಗು ಪಾವತಿಸಲು ಕಡೆಯ ದಿನಾಂಕದ ವಿವರ :*
ಹೋಬಳಿ ಮಟ್ಟದಲ್ಲಿ ಅಧಿಸೂಚಿಸಲಾಗಿರುವಎಳ್ಳು(ಮಳೆಯಾಶ್ರಿತ (ವಿಮಾ ಕಂತಿನ ಮೊತ್ತ- 202.35)ಬೆಳೆಗೆ ವಿಮಾ ಕಂತು ಪಾವತಿಗೆ ಜೂನ್ 30; ಉದ್ದು(ಮಳೆಯಾಶ್ರಿತ-ವಿಮಾ ಕಂತಿನ ಮೊತ್ತ 226.63), ಅಲಸಂದೆ (ಮಳೆಯಾಶ್ರಿತ-210.44), ಹೆಸರು(ಮಳೆಯಾಶ್ರಿತ- 234.73), ಕೆಂಪು ಮೆಣಸಿನಕಾಯಿ(ನೀರಾವರಿ- 1942.56), ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ-1456.92)ಬೆಳೆಗೆ ವಿಮಾ ಕಂತು ಪಾವತಿಸಲು ಜುಲೈ 15;
ಹತ್ತಿ(ನೀರಾವರಿ- 1355.75), ಹತ್ತಿ ಮಳೆಯಾಶ್ರಿತ-870.11), ಶೇಂಗಾ(ನೀರಾವರಿ-461.36), ಮುಸುಕಿನ ಜೋಳ(ನೀರಾವರಿ- 477.55), ಮುಸುಕಿನ ಜೋಳ (ಮಳೆಯಾಶ್ರಿತ- 404.70), ನವಣೆ (ಮಳೆಯಾಶ್ರಿತ-218.54), ಈರುಳ್ಳಿ(ನೀರಾವರಿ- 1517.63), ಈರುಳ್ಳಿ (ಮಳೆಯಾಶ್ರಿತ-1416.45), ತೊಗರಿ(ಮಳೆಯಾಶ್ರಿತ- 323.76),ರಾಗಿ (ಮಳೆಯಾಶ್ರಿತ-307.57), ಸೂರ್ಯಕಾಂತಿ (ನೀರಾವರಿ-339.95), ಸೂರ್ಯಕಾಂತಿ(ಮಳೆ ಆಶ್ರಿತ-283.29), ಟೊಮೋಟೋ (2387.73) ಬೆಳೆಗೆ ವಿಮಾ ಕಂತು ಪಾವತಿಗೆ ಜುಲೈ 31; ದಿನವಾಗಿದೆ. ಉಳಿದಂತೆ ಹುರುಳಿ(ಮಳೆಯಾಶ್ರಿತ-145.69), ರಾಗಿ(ನೀರಾವರಿ- 372.32), ಸಾಮೆ(ಮಳೆ ಆಶ್ರಿತ- 218.54) ಬೆಳೆಗೆ ವಿಮಾ ಕಂತು ಪಾವತಿಗೆ ಆಗಸ್ಟ್ 16 ಕಡೆಯ ದಿನವಾಗಿದೆ.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಸೂಚಿಸಲಾಗಿರುವ ಭತ್ತ(ನೀರಾವರಿ ವಿಮಾ ಕಂತಿನ ಮೊತ್ತ 696.08), ಶೇಂಗಾ(ನೀರಾವರಿ- 461.36), ಶೇಂಗಾ(ಮಳೆಯಾಶ್ರಿತ- 372.32), ತೊಗರಿ(ಮಳೆ ಆಶ್ರಿತ- 323.76), ಮುಸುಕಿನ ಜೋಳ(ನೀರಾವರಿ- 477), ರಾಗಿ(ಮಳೆಯಾಶ್ರಿತ) (ವಿಮಾ ಮೊತ್ತ 307.57), ಮುಸುಕಿನ ಜೋಳ(ಮಳೆಯಾಶ್ರಿತ -404.70) ಬೆಳೆಗೆ ವಿಮಾ ಕಂತು ಪಾವತಿಸಲು ಆಗಸ್ಟ್ 15 ಕಡೆಯ ದಿನವಾಗಿದೆ.
ರೈತರನ್ನು ಪ್ರತಿಯೊಂದು ಬಾರಿ ಸರ್ಕಾರದ ಕಚೇರಿ ಮುಂದೆ ಕೈಕಟ್ಟಿ ನಿಲ್ಲುವಂತೆ ಮಾಡಬೇಡಿ, ರೈತರನ್ನು ಸ್ವಾವಲಂಬಿಯಾಗಿ ಸ್ವಂತ ಕಾಲಮೇಲೆ ನಿಲ್ಲುವಂತೆ ಮಾಡಲು ಸಂಬಂದಿಸಿದ ಖಾಯಂ ಸೂಕ್ತ ಕ್ರಮಕೈಗೊಳ್ಳಲು ಮನವಿ ಮಾಡುತ್ತೇನೆ. ವಿಶ್ವೇಶ್ವರಯ್ಯ.