ವೇಶ್ಯಾವಾಟಿಕೆ ನಡೆಸುತ್ತಿದ್ದ ವಸತಿಗೃಹದ ಮೇಲೆ ಪೊಲೀಸರ ದಾಳಿ.
ತುಮಕೂರಿನ ಕ್ಯಾಸಂದ್ರ ಬಳಿಯ ಖಾಸಗಿ ಲಾಡ್ಜ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದ್ದ ಸಂಬಂಧ ಖಚಿತ ಮಾಹಿತಿ ತಿಳಿದ ತುಮಕೂರಿನ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಹಾಗೂ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿ ಕೋಲ್ಕತ್ತಾ ಹಾಗೂ ಮುಂಬೈ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಿದ್ದು ದಾಳಿ ವೇಳೆ ಒಬ್ಬ ಯುವತಿ ಸ್ಥಳದಿಂದ ಪರಾರಿಯಾಗಿದ್ದು ಐದು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ತುಮಕೂರಿನ ಹೈವೇ ರಸ್ತೆಗೆ ಹೊಂದಿಕೊಂಡಂತೆ ಕ್ಯಾತ್ಸಂದ್ರ ಬಳಿಯ ನಂದಿ ಲಾಡ್ಜ್ ನಲ್ಲಿ ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಸದ್ದಿಲ್ಲದೆ ನಡೆಯುತ್ತಿತ್ತು ಆದರೆ ಇದರ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲದಂತೆ ವ್ಯವಸ್ಥಿತವಾಗಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಆದರೆ ಇದ್ಯಾವುದರ ಅರಿವು ಕೂಡ ಸ್ಥಳೀಯ ನಿವಾಸಿಗಳಿಗೆ ಕಂಡು ಬರದಂತೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಿಬ್ಬಂದಿಗಳು ಗೋಪ್ಯತೆಯನ್ನು ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ಬೆನ್ನಲ್ಲೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಸ್ಥಳಕ್ಕೆ ಭೇಟಿ ನೀಡಿದರು.
ಲಾಡ್ಜ್ನಲ್ಲಿ ಅಡಗಿತ್ತು ಸುರಂಗ ಸುರಂಗದಲ್ಲಿ ವೇಶ್ಯಾವಾಟಿಕೆ.
ಇನ್ನು ದಾಳಿ ನಡೆದ ಸಂದರ್ಭದಲ್ಲಿ ಲಾಡ್ಜ್ನಲ್ಲಿ ಅಚ್ಚರಿಯೆಂಬಂತೆ ರಹಸ್ಯ ಸ್ಥಳವೊಂದನ್ನು ನಿರ್ಮಿಸಿಕೊಂಡು ಯಾರಿಗೂ ಅನುಮಾನ ಬಾರದಂತೆ ಹಾಗೂ ದಾಳಿ ನಡೆದರೆ ಅಥವಾ ಅನುಮಾನ ಬಂದು ದಾಳಿ ಮಾಡಿದರೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಲಾಡ್ಜ್ನಲ್ಲಿ ರಹಸ್ಯ ಸುರಂಗ ಒಂದನ್ನ ಮಾಡಿಕೊಂಡಿದ್ದ ವೇಶ್ಯಾವಾಟಿಕೆ ದಂಧೆ ಕೋರರು ವ್ಯವಸ್ತವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದು ಕಂಡುಬಂದಿದೆ.
ಕಿಲೋಮೀಟರ್ ಗಟ್ಟಲೆ ಬಿದ್ದಿದ್ದ ಕಾಂಡೋಮ್ ನೀಡಿತ ಸುಳಿವು.
ಸೆಪ್ಟಂಬರ್ 8 ರಂದು ವಿಜಯ ಭಾರತ ಡಿಜಿಟಲ್ ಮೀಡಿಯಾ ತುಮಕೂರಿನ ಕ್ಯಾತ್ಸಂದ್ರ ಬಳಿಯ ಫ್ಲೈಓವರ್ ಮೇಲೆ ಬಿದ್ದಿದ್ದ ಕಿಲೋಮೀಟರುಗಟ್ಟಲೆ ಕಾಂಡೋಮ್ ಬಗ್ಗೆ ವರದಿ ಮಾಡಿತ್ತು ಇದರ ಮಾಹಿತಿ ಅರಿತ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಅದರ ಬೆನ್ನುಹತ್ತಿ ತುಮಕೂರಿಗೆ ಆಗಮಿಸಿ ತಮ್ಮ ತಂಡದವರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಅಲ್ಲಿಗೆ ತುಮಕೂರಿನಲ್ಲಿ ಹತ್ತು ದಿನಗಳಿಂದ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದರು.
ಆನ್ಲೈನ್ ಮೂಲಕ ವೇಶ್ಯಾವಾಟಿಕೆ.
ಆನ್ಲೈನ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಬಂಧ ಒಡನಾಡಿ ಸಂಸ್ಥೆಗೆ ಖಚಿತ ಮಾಹಿತಿ ತಿಳಿದು ಗ್ರಾಹಕರ ಸೋಗಿನಲ್ಲಿ ವೇಶ್ಯಾವಾಟಿಕೆ ಅಡ್ಡೆಗೆ ಎಂಟ್ರಿಕೊಟ್ಟಿದ್ದು ವಿಶೇಷವಾಗಿದೆ.
ಕಲ್ಪತರು ನಾಡಿನಲ್ಲಿ ಹೈಟಕ್ ವೇಶ್ಯಾವಾಟಿಕೆ ಕಂಡು ಬೆಚ್ಚಿಬಿದ್ದ ನಾಗರಿಕರು.
ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ತುಮಕೂರು ನಗರದಲ್ಲಿ ಇಂತಹದೊಂದು ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ ಬಯಲಿಗೆ ಬಂದಿರುವುದು ಎಲ್ಲರಲ್ಲೂ ಅಚ್ಚರಿ ತಂದಿದೆ.
ವಿಜಯ್ ಭಾರತ ಪ್ರಕಟಿಸಿದ ಕಾಂಡೋಮ್ ವರದಿಯನ್ನು ಮೆಚ್ಚಿದ ಒಡನಾಡಿ ಮುಖ್ಯಸ್ಥರು.
ವಿಜಯ ಭಾರತ ಪತ್ರಿಕಾ ಬಳಗದೊಂದಿಗೆ ಮಾತನಾಡಿದ ಮೈಸೂರಿನ ಒಡನಾಡಿ ಮುಖ್ಯಸ್ಥರಾದ ಸ್ಟ್ಯಾನ್ಲಿ ರವರು ವಿಜಯ ಭಾರತದಲ್ಲಿ ಬಂದ ಸುದ್ದಿ ನಮಗೆ ಕಾರ್ಯಾಚರಣೆಗೆ ಈಳಿಯಲು ಮೂಲ ಪ್ರೇರಣೆಯಾಗಿದೆ ಎಂದರು. ಇಂತಹದೊಂದು ಹೈಟೆಕ್ ವೇಶ್ಯಾವಾಟಿಕೆ ಸಂಬಂಧ ಕಾರ್ಯಾಚರಣೆ ನಡೆಸಿ ಪ್ರಕರಣ ಬಯಲಿಗೆಳೆಯಲು ಸಾಕ್ಷಿಯಾಗಿದ್ದು ವಿಜಯ ಭಾರತ ವರದಿ ಅದೊಂದು ಉತ್ತಮ ಸುದ್ದಿ ಮಾಡಿ ಮಹಿಳೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ವಿಜಯ ಭಾರತ ಬಳಗಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ