ಲಾಕ್ಡೌನ್ ಅಂತಿಮ ಅಸ್ತ್ರವಾಗಿ ಉಪಯೋಗಿಸಲು ರಾಜ್ಯಗಳಿಗೆ ಮೋದಿ ಕರೆ

 

ನವದೆಹಲಿ ಏ., 20- ಕೊರೊನಾ ವಿರುದ್ದ ಹೋರಾಡಲು ಲಾಕ್‍ಡೌನ್ ಅನ್ನು ಅಂತಿಮ ಅಸ್ತ್ರವಾಗಿ ಬಳಸಬೇಕೆಂದು ರಾಜ್ಯಗಳಿಗೆ ಪ್ರಧಾನಿ ಮೋದಿ ಕರೆ ನೀಡಿದರು.

 

ನಾವು ಲಾಕ್‍ಡೌನ ಅನ್ನು ತಪ್ಪಿಸಬೇಕಿದೆ. ರಾಜ್ಯಗಳು ಕಾರ್ಮಿಕರಿಗೆ ದೈರ್ಯ ತುಂಬಬೇಕು, ನಗರಗಳನ್ನು ಬಿಟ್ಟು ವಲಸೆ ಹೋಗದಂತೆ ಕ್ರಮಗಕೈಗೊಳ್ಳಿ ಎಂದು ಹೇಳಿದ ಅವರು ಕೋವಿಡ್ ಮಾರ್ಗಸೂಚಿ ತಮ್ಮ ತಮ್ಮ ನಗರ, ಗಲ್ಲಿ ಗಲ್ಲಿಗಳಲ್ಲಿ ಯುವಕರು ಜಾಗೃತಿ ವಹಿಸಬೇಕು. ಇದರಿಂದ ಸರಕಾರಕ್ಕೆ ಕೊರೋನಾ ವಿರುದ್ದ ಹೋರಾಡಲು ಬಹಳ ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದರು.

 

ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ದೇಶ ಮತ್ತೋಮ್ಮೆ ಕೊರೊನಾ ವಿರುದ್ದ ಹೋರಾಟ ನಡೆಸಬೇಕಿದೆ. ನಿಮ್ಮ ಸಮಸ್ಯ ಮತ್ತು ಸಂಕಷ್ಟವನ್ನು ಆರ್ಥ ಮಾಡಿಕೊಳ್ಳಬಲ್ಲೆ ಎಂದರು. ಸಮಸ್ಯ ದೊಡ್ಡದಿದೆ, ಆದರೆ ನಾವು ಎಲ್ಲರೂ ಕೂಡಿ ಇದರ ವಿರುದ್ದ ಹೋರಾಡಿ ಗೆಲ್ಲಬೇಕಾಗಿದೆ. ಕೊರೋನಾ ಒಂದನೇ ಅಲೆಯಲ್ಲಿಯೂ ಎಲ್ಲವನ್ನು ತ್ಯಾಗವನ್ನು ಮಾಡಿ ಕೊರೊನಾ ವಾರಿಯರ್ಸ ವಿರುದ್ದ ಹೋರಾಡಿದ್ದರು ಈಗ ಮತ್ತೊಮ್ಮೆ ಅವರು ಸೇವೆಗೆ ಅಣಿಯಾಗಬೇಕಾಗಿದೆ ಎಂದರು.

 

ಕಳೆದ ಬಾರಿಗಿಂತ ಈ ಬಾರಿ ಆಕ್ಸಿಜನ್ ಬೇಡಿಕೆ ಮತ್ತು ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ಆಕ್ಸಿಜನ್ ಪೂರೈಕೆಗೆ ಎಲ್ಲರೀತಿಯ ಪ್ರಯತ್ನ ಮಾಡಲಾಗುತ್ತಿದೆ. ನಾವು ಇನ್ನೂ ಹೆಚ್ಚು ಹೆಚ್ಚು ವೈದ್ಯಕೀಯ ಆಕ್ಸಿಜನ್ ಉತ್ಪಾದನೆ ಆಗ ಬೇಕಾಗಿದೆ. ಕೈಗಾರಿಕಾ ಆಕ್ಸಿಜನ್ ಉತ್ಪಾದನೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಆಸ್ಪತ್ರೆಗೆ ಪೂರೈಕೆ ಮಾಡಬೇಕು ಎಂದು ಹೇಳಿದರು.

 

ದೇಶದಲ್ಲಿ ಔಷದ ಉತ್ಪಾದನೆಗೆ ಬೇಕಾದ ಉತ್ತಮ ವ್ಯವಸ್ಥೆ ದೇಶದಲ್ಲಿದೆ. ಬೇಡಿಕೆಗೆ ತಕ್ಕಂತೆ ಔಷಧ ಉತ್ಪಾದನೆ ಹೆಚ್ಚಸಲಾಗಿದೆ. ವಿಜ್ಞಾನಿಗಳು ಕಡಿಮೆ ಅವಧಿಯಲ್ಲಿ ಲಸಿಕೆಯನ್ನು ತಯಾರಿಸಿದ್ದಾರೆ. ಇದೊಂದು ಸಂಘಟಿತ ಹೋರಾಟವಾಗಿದೆ ಎಂದು ಅವರು ಹೇಳಿದರು.

ಲಸಿಕೆ ವಿತರಣೆಯಲ್ಲಿ ಸರಕಾರ ಕೈಗೊಂಡ ಕ್ರಮಗಳು ಮತ್ತು ಈಗಾಗಲೇ ವಿತರಣೆಯಾದ ಅಂಕಿ ಸಂಖ್ಯೆಗಳ ಮೂಲಕ ಸಾಧನೆಯನ್ನು ವಿವರಿಸಿದ ಅವರು, ಈಗ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

 

ಹಿಂದಿನ ಪರಿಸ್ಥಿತಿ ಬಹಳ ಬಿನ್ನವಾಗಿತ್ತು. ಆಗ ನಮ್ಮಲ್ಲಿ ಕೊರೊನಾ ತಪಾಸಣೆಗೆ ಲ್ಯಾಬ್, ಪಿಪಿಇ ಕಿಟಗಳು ಇರಲಿಲ್ಲ. ಮತ್ತು ಏನು ಔಷಧ ನೀಡಬೇಕೆಂಬ ಮಾಹಿತಿ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಕೊರೊನಾ ತಪಾಸಣೆ ಲ್ಯಾಬ್‍ಗಳ ಸಂಖ್ಯೆ ಹೆಚ್ಚಿಸಲಾಗಿದೆ. ದೇಶದಲ್ಲಿಯೇ ಪಿಪಿಇ ಕಿಟ್ಟ ಉತ್ಪಾದಿಸಲಾಗುತ್ತಿದೆ. ದೇಶದ ಜನತೆಯ ಜೀವ ರಕ್ಷಣೆಯಲ್ಲಿ ವೈದ್ಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!