ತುಮಕೂರು : ಮಣ್ಣು ಮಾಡಲು ಹೋಗಿದ್ದ 04 ತಿಂಗಳ ದಲಿತ ಕುಟುಂಬದ ಮಗುವಿನ ಶವವನ್ನು ಗುಂಡಿಯಿಂದ ಮೇಲೆತ್ತಿಸಿ ದಬ್ಬಾಳಿಕೆ ಮಾಡಿರುವ ಘಟನೆ, ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಜೆಟ್ಟಿಅಗ್ರಹಾರ ಪಂಚಾಯಿತಿ ವ್ಯಾಪ್ತಿಯ ಕೈಮರ ಗ್ರಾಮದಲ್ಲಿ ನಡೆದಿದೆ. ಕಳೆದ ಶುಕ್ರವಾರದಂದು ಕೊರಟಗೆರೆಯಿಂದ ಮಧುಗಿರಿಗೆ ಹಾದು ಹೋಗುತ್ತಿರುವ ಎತ್ತಿನಹೊಳೆ ಪೈಪ್ ಲೈನ್ ಬ್ಲಾಸ್ಟಿಂಗ್‌ನಿಂದ ಉಸಿರಾಟ ತೊಂದರೆಗೆ ಒಳಗಾಗಿದ್ದ ಮಗುವು ಸಾವನ್ನಪ್ಪಿದ್ದು ಆ ಸಂದರ್ಭದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಹಸುನಿಗಿದ್ದ ಕೈಮರದ ರಂಗನಾಥ್ ನೇತ್ರಾ ದಂಪತಿಯ 04 ತಿಂಗಳ ಹಸುಗೂಸು, ಈ ದುರಂತಕ್ಕೆ ಸಾಕ್ಷಿಯಾಗಿದೆ.
ಭಾನುವಾರ ಸಂಜೆ ಸರ್ಕಾರಿ ಹಳ್ಳದಲ್ಲಿ ಮಗುವನ್ನು ಮಣ್ಣ
ು ಮಾಡುತ್ತಿರುವ ಸಂದರ್ಭದಲ್ಲಿ ಶಾಹಿ ಗಾರ್ಮೆಂಟ್ಸ್‌ನ ಸಿಬ್ಬಂದಿಗಳು ತಡೆ ಮಾಡಿದರು, ಆ ಸಂದರ್ಭದಲ್ಲಿ ಮಗುವಿನ ಪೋಷಕರು ಮತ್ತು ಸಿಬ್ಬಂದಿಗಳು ಈ ಹಿಂದೆ ಮಣ್ಣು ಮಾಡ್ತಾ ಇದ್ವಿ ಎಂದು ಹೇಳಿದರು, ಆಗ ಶಾಹಿ ಗಾರ್ಮೆಂಟ್ಸ್‌ನ ಸಿಬ್ಬಂದಿಗಳು ಅದು ಆಗ, ಈಗಲ್ಲ ಎಂದು ಮಗುವನ್ನು ಹೊರ ತೆಗೆಸಿದ್ದಾರೆ. ಸಮಾಧಿ ಗುಂಡಿಯಿಂದ ಮಗುವನ್ನ ಹೊರ ತೆಗೆಸಿದ ಕೆಲಸಗಾರರು. ಈ ಎಲ್ಲಾ ಘಟನೆಯು ಕೊರಟಗೆರೆ ತಹಶೀಲ್ದಾರ್‌ರವರ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಿ, ಮಗುವನ್ನು ಅವರ ಮುಂದಾಳತ್ವದಲ್ಲಿ ಭಾನುವಾರದಂದು ಅಂತ್ಯ ಸಂಸ್ಕಾರ ನಡೆದಿರುವುದಾಗಿ ತಿಳಿದು ಬಂದಿರುತ್ತದೆ.
ಇನ್ನು ಎತ್ತಿನಹೊಳೆ ಪೈಪ್ ಲೈನ್ ಯೋಜನೆಗೆ ಸಂಬಂಧಿಸಿದಂತೆ ಈ ಭಾಗದಲ್ಲಿ ಕಾಮಗಾರಿ ಬಿರುಸಿನಿಂದ ಸಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಮನೆಗಳು ಬಿರುಕು ಬಿಟ್ಟಿರುವುದರ ಪ್ರಯುಕ್ತ, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲೆಟಿನ್ ಕಡ್ಡಿ ಸ್ಫೋಟ ಘಟನೆ ಮರೆ ಮಾಚುವ ಮುನ್ನವೇ ಇಂತಹದ್ದೊಂದು ಘಟನೆ ಮುಗಿಲು ಮುಟ್ಟಿದೆ. ಕೊರಟಗೆರೆ ತಾಲ್ಲೂಕಿನಾದ್ಯಂತ ಎಚ್ಚೆತ್ತಿರುವ ಬ್ಲಾಸ್ಟಿಂಗ್ ಹಾವಳಿಗೆ ತಡೆ ಬೀಳುವುದಾದರೂ ಯಾವಾಗ? ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ಕ್ರಮವನ್ನು ಜರುಗಿಸಬೇಕೆಂದು ಇಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.