ತುಮಕೂರು ನಗರದಲ್ಲಿ ಸದ್ದು ಮಾಡಿದ ಪೇ.ಎಂಎಲ್ಎ ಪೋಸ್ಟರ್
ತುಮಕೂರು: ಕಳೆದ ಕೆಲ ತಿಂಗಳುಗಳ ಹಿಂದೆ ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಿದ್ದು ಬಾರೀ ಸುದ್ದಿಯಾಗಿತ್ತು. ಅದೇ ಮಾದರಿಯಲ್ಲಿ ಇದೀಗ ತುಮಕೂರು ನಗರದಲ್ಲಿ ಪೇ ಎಂಎಲ್‌ಎ ಅಭಿಯಾನ ಶುರುವಾಗಿದೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಆರಂಭವಾಗಿದ್ದು, ತುಮಕೂರು ನಗರದ ತುಂಬ ಕಾಂಗ್ರೆಸ್ ಪೇ ಎಂ.ಎಲ್. ಎ ಪೋಸ್ಟರ್ ಅಂಟಿಸಿದೆ.
ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೆಯಿಂದ ಹಾಗೂ ಕಾರ್ಯಕರ್ತರಿಂದ ಪೋಸ್ಟರ್ ಅಭಿಯಾನ ಶುರುವಾಗಿದ್ದು, ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಪೋಟೊ ಒಳಗೊಂಡಿರೋ ಪೇ ಎಂಎಲ್‌ಎ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು.
ನಿಮಗೆ ಕೆಲಸ ಆಗಬೇಕೆ, ನನಗೆ ಪೇ ಮಾಡಿ. ಭ್ರಷ್ಟಚಾರ ನನ್ನ ಮೊದಲ ಆದ್ಯತೆ. ಈ ರೀತಿ ಸ್ಲೋಗನ್ ಬರೆದಿರೋ ಪೋಸ್ಟರ್‌ಗಳನ್ನು ತುಮಕೂರು ನಗರದ ಟೌನ್ ಹಾಲ್ ಸರ್ಕಲ್, ಬಿ.ಎಚ್.ರಸ್ತೆ, ಹೊರಪೇಟೆಯಲ್ಲಿ ಸೇರಿದಂತೆ ಹಲವು ಭಾಗಗಳಲ್ಲಿ ಕಾಂಗ್ರೆಸ್ ಪೋಸ್ಟರ್ ಗಳನ್ನ ಅಂಟಿಸಿದೆ. ತುಮಕೂರು ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಯಲ್ಲಿ ಲಂಚದ ಡೀಲ್ ಹಾಗೂ ಕಾಮಗಾರಿಯಲ್ಲಿ ಶಾಸಕ ಜ್ಯೋತಿ ಗಣೇಶ್ ಪರ್ಸೆಂಟೇಜ್‌ನ್ನು ಪಡೆಯುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ. ಇನ್ನು ಪೋಸ್ಟರ್ ಅಂಟಿಸಿದ ಹುಡುಗರನ್ನು ತಿಲಕ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.
ಇನ್ನು ತುಮಕೂರು ನಗರದಲ್ಲಿ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಶುರು ಆಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಪೆ ಪೋಸ್ಟರ್ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿಹುಲಿಕುಂಟೆ ಸ್ಪಷ್ಟನೆ.
ಪಕ್ಷದ ವತಯಿಂದ ತುಮಕೂರು ನಗರದಲ್ಲಿ ಪೇ ಎಂ.ಎಲ್. ಎ ಪೋಸ್ಟರ್ ಅಭಿಯಾನ ಶುರುಮಾಡಿದ್ದು ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸಾಕಷ್ಟು ಕಳಪೆ ಕಾಮಗಾರಿಗಳು ನಡೆದಿರುವುದೇ ಭ್ರಷ್ಟಾಚಾರಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ ಹಾಗಾಗಿ ಸಾರ್ವಜನಿಕರಿಗೆ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಪೇ ಎಂ.ಎಲ್. ಎ ಪೋಸ್ಟರ್ ಅಭಿಯಾನ ಆರಂಭಿಸಿದ್ದು ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದಿದ್ದಾರೆ.
ವರದಿ – ಮಾರುತಿ ಪ್ರಸಾದ್ ತುಮಕೂರು