ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡ ಹೊಸ ಫಂಗಸ್ ಆತಂಕದಲ್ಲಿ ಪೋಷಕರು.
ತುರುವೇಕೆರೆ – ಇತ್ತೀಚಿಗೆ ರಜ ಮುಗಿಸಿ ಖುಷಿಯಿಂದ ಶಾಲೆಗೆ ತೆರಳಿ ಪಾಠ ಕಲಿಯಲು ಮುಂದಾಗಿದ್ದ ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಫಂಗಸ್ ಕಾಣಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಆತಂಕದಲ್ಲಿ ಇರುವ ಘಟನೆ ವರದಿಯಾಗಿದೆ.
ಜಿಲ್ಲೆ ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಹೊಸ ಫಂಗಸ್ ಕಾಣಿಸಿಕೊಂಡಿದ್ದು ಇದರಿಂದ ಶಾಲೆಯಲ್ಲಿ ಇರುವ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಇಬ್ಬರು ಶಾಲಾ ಶಿಕ್ಷಕರನ್ನ ಒಳಗೊಂಡಂತೆ 24 ಮಂದಿಗೆ ಹೊಸ ಫಂಗಸ್ ತಗೊಂಡಿದ್ದು ಇದರಿಂದ ಅಂಗೈ ಹಾಗೂ ಅಂಗಲಿನಲ್ಲಿ ಫಂಗಸ್ ರೀತಿಯ ಚರ್ಮ ವ್ಯಾದಿ ಕಂಡುಬಂದಿದ್ದು ಇದರಿಂದ ಪೋಷಕರು ಸಹ ಆತಂಕಕ್ಕೆ ಎಡೆ ಮಾಡಿದೆ.
ಸದ್ಯಕ್ಕೆ ತುರುವೇಕೆರೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಂಗಸ್ ತೆಗುಲಿರುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.
ಫಂಗಸ್ ವರದಿ ತಿಳಿಯಲು ಸಂಘಸ್ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ಗೆ ಪರೀಕ್ಷೆಗಾಗಿ ರವಾನಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಮುಂದಾಗಿದ್ದಾರೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸರ್ಕಾರಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಘಟನೆ ಭಾನುವಾರ ಬೆಳಕಿಗೆ ಬಂದಿದ್ದು ಇದುವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದಿದ್ದಾರೆ.
ಫಂಗಸ್ ಬಗ್ಗೆ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ಮಂಜುನಾಥ್ ರವರನ್ನು ಸಂಪರ್ಕಿಸಿದ್ದು ಇದರ ಬಗ್ಗೆ ನಮಗೆ ಮಾಹಿತಿ ತಿಳಿದಿಲ್ಲ ಸದ್ಯಕ್ಕೆ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಗ್ರಾಮಕ್ಕೆ ಭೇಟಿ ನೀಡಲು ಸೂಚಿಸುವುದಾಗಿ ಮಾಹಿತಿ ನೀಡಿದ್ದಾರೆ.
ಅದೇನೇ ಇರಲಿ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಈ ರೀತಿಯ ಫಂಗಸ್ ಕಂಡುಬಂದಿರೋದು ಸಹಜವಾಗಿಯೇ ಎಲ್ಲರನ್ನು ಆತಂಕ ತಂದೊಡ್ಡಿದೆ.
ವರದಿ ಮಾರುತಿ ಪ್ರಸಾದ್ ತುಮಕೂರು