ಪಾವಗಡ:ಮತ್ತೆ ರಾಜಾ ರೋಶಾವಾಗಿ ತಲೆ ಎತ್ತಿದ ಮಟ್ಕಾ ದಂದೆ.
ಪಾವಗಡ : ತಾಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲ ವಾಗಿರುವುದಕ್ಕೆ ಸೋಮವಾರ ಪಟ್ಟಣದ ಹಳಸಂತೆ ಮೈದಾನದ ಹತ್ತಿರ ಹೇರ್ ಕಟಿಂಗ್ ಸಲೂನ್‌ನಲ್ಲಿ ಬರೆಯುತ್ತಿರುವ ಮಟ್ಟಾ ಬೀಟ ಗಳನ್ನು ಕಣ್ಣಾರೆ ನೋಡಿದ ಪ್ರಸಂಗ ನಡೆದಿದೆ.
ಪಾವಗಡ ತಾಲ್ಲೂಕಿನಲ್ಲಿ ಸುಮಾರು 20 ವರ್ಷಗಳಿಂದ ಸಮರ್ಪಕವಾಗಿ ಮಳೆ ಬೆಳೆ ಇಲ್ಲದ ಪರಿಸ್ಥಿತಿಯಲ್ಲಿ ಅಕ್ರಮವಾಗಿ ಮಟ್ಟಾ ಮತ್ತು ಇಸ್ಪೀಟ್ ದಂಧೆಗಳು ತಲೆಎತ್ತಿವೆ. ಇಲ್ಲಿನ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು ಹಾಗೂ ರೈತಾಪಿ ವರ್ಗದ ಜನತ ಮಟ್ಕಾ ಮತ್ತು ಇಶೀಟ್ ದಂಧೆಯಲ್ಲಿ ತೊಡಗಿದ್ದಾರೆ. ಇವರುಗಳ ಹೆಂಡತಿ-ಮಕ್ಕಳು ಉಪವಾಸ ಅನುಭವಿಸುವ ದುಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಾಗಾಗಿ ಸೋಮವಾರ ಮಟ್ಟಾ ಬರೆಯುತ್ತಿದ್ದ ಮಾತನಾಡಿ, ತಾನು ಕಿಟ್ಟ ವೈಫಲ್ಯದಿಂದ ನರಳುತ್ತಿದ್ದು, ತನಗೆ ದುಡಿಯಲು ಸಾಧ್ಯವಾಗುತ್ತಿಲ್ಲ. ಮಟ್ಕಾ ಬರೆದು ಜೀವನ ಮಾಡುತ್ತಿದ್ದೇನೆ. ದಿನ ಒಂದಕ್ಕೆ 3 ರಿಂದ 5 ಸಾವಿರ ಕಲೆಕ್ಷನ್ ಆಗುತ್ತದೆ. ಈ ಮೊತ್ತವನ್ನು ಮಟ್ಟಾ ಅಶ್ವತ್ಥವನಿಗೆ ನೀಡಿ, ತನ್ನ ಕಮಿಷನ್ (ದಲ್ಲಾಲ)ಹಣ ಪಡೆಯುತ್ತೇನೆ ಎಂದರು.
ತಾಲ್ಲೂಕಿನಲ್ಲಿ ಮಟ್ಟಾ ಭರ್ಜರಿಯಾಗಿ ನಡೆಯುತ್ತಿದ್ದು, ಪಟ್ಟಣದ ಕುಮಾರಸ್ವಾಮಿ ಬಾಲವನಹಳ್ಳಿ, ನಾಗರಕಟ್ಟೆ ನಗಾನಹಳ್ಳಿ,ತಿರುಮಣಿ, ವೆಂಕಟಮ್ಮನಹಳ್ಳಿ, ಪಿ.ರೊಪ್ಪ, ಹೊಸ ಬಸ್ಟ್ಯಾಂಡ್, ಹಳೆ ಬಸ್ಟ್ಯಾಂಡ್, ಹಳಸಂತೆ ಮಾರುಕಟ್ಟೆಯ ಹತ್ತಿರದ ಸ್ಟಾಲ್ ಮಧ್ಯೆ, ಮಂಗಳವಾಡದ ರೈನ್ ಗೇಜ್ ಬಡಾವಣೆ, ಪಳವಳ್ಳಿ ಈ ಎಲ್ಲಾ ಪ್ರದೇಶಗಳಿಂದ ಮಟ್ಟಾಬಿಟರ್‌ಗಳು ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರತಿದಿನ ರಾತ್ರಿ ಕರಾರುವಾಕ್ಕಾಗಿ ಮಟ್ಕಾ 07ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದೆ. ಪ್ರತಿ ದಿನ ಎರಡು ಆಟ ನಡೆಯುತ್ತಿದ್ದು, 7 ಮನೆಗಳ ಆಟ ಮಧ್ಯಾಹ್ನ 3 ಗಂಟೆಗೆ ಡ್ರಾ, 6 ಮನೆಗಳ ಆಟ ರಾತ್ರಿ 9 ಗಂಟೆಗೆ ಆಟದ ಫಲಿತಾಂಶ ಬರುತ್ತಿದೆ.
ಪ್ರತಿ ದಿನ ಬೆಳಗ್ಗೆಯಿಂದಲೇ ಬೀಟರ್‌ಗಳು ಹಣ ಕಟ್ಟಿಸಿಕೊಳ್ಳಲು ಬರೆಯುವ ಕೇಂದ್ರದ ಸ್ಥಳಗಳ ಹತ್ತಿರ ಕಾದು ಕುಳಿತು ಬಡವರ ರಕ್ತ ಹೀರುತ್ತಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ಮಟ್ಕಾ ಬರೆಯುವ ಬೀಟರ್‌ಗಳಲ್ಲಿ ಕೆಲವರು ಫೋನ್ ಪೇ ಮುಖಾಂತರ ಹಣ ಕಟ್ಟಿಸಿಕೊಂಡರೆ, ಕೆಲವರು ಚೀಟಿ ಮುಖಾಂತರ ಬರೆದು ಆಟವಾಡಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಕಾದು ಹಣ ಕಟ್ಟುವ ದುಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತ್ತೀಚೆಗೆ ಮಟ್ಟಾ ಬೀಟರ್‌ಗಳನ್ನು ಠಾಣೆಗೆ ಕರೆಸಿ, ಆಟ ನಡೆಸಲು ಮುಂದಾದರೆ ಗಡಿಪಾರು ಮಾಡುವುದಾಗಿ ಪೋಲೀಸ್ ಅಧಿಕಾರಿಗಳು ಒಂದು ಕಡೆ ಎಚ್ಚುಕೆ ನೀಡಿದರೆ, ಇನ್ನೊಂದು ಕಡೆ ಕೆಲ ಪೋಲೀಸ್ ಅಧಿಕಾರಿಗಳ ಶಾಮೀಲಾಗಿ ಆಟವಾಡಲು ಅನುಮತಿ ನೀಡಿದ್ದಾರೆ ಎಂಬ ಮಾಹಿತಿಯೂ ಇದೆ. ಸುಮಾರು ಸಲ ಸ್ಥಳೀಯ ಪೋಲೀಸ್ ಅಧಿಕಾರಿಗಳು ಮಟ್ಕಾ ಮತ್ತು ಇಸ್ಪೀಟ್ ದಂಧೆಯನ್ನು ಮಟ್ಟಹಾಕಲು ಮೀನಾ-ಮೇಷ ಎಣಿಸುತ್ತಿದ್ದಾಗ, ನೇರವಾಗಿ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ರಹಸ್ಯವಾಗಿ ಬಂದು ಮಟ್ಟಾ ದೊರೆಗಳನ್ನು ಬಂಧಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೆ ಆಗಿದೆ. ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಇಲ್ಲಿನ ಸಂಘ-ಸಂಸ್ಥೆಗಳು ಹಲವು ಸಲ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ಮಟ್ಕಾ ಮತ್ತು ಇಸ್ಪೀಟ್ ದಂಧೆಕೋರರ ಜೊತೆ ಕೈ ಜೋಡಿಸಿರುವ ಪೋಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಇನ್ನಾದರೂ ಜಿಲ್ಲಾ ವರಿಷ್ಠಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.