ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಶಾಸಕರ ನೇತೃತ್ವದಲ್ಲಿ ಆಕ್ಸಿಜನ್ ಕಾನ್ಸೆನ್ಟ್ರೇಟರ್ ಯಂತ್ರ ಹಸ್ತಾಂತರ

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಶಾಸಕರ ನೇತೃತ್ವದಲ್ಲಿ ಆಕ್ಸಿಜನ್ ಕಾನ್ಸೆನ್ಟ್ರೇಟರ್ ಯಂತ್ರ ಹಸ್ತಾಂತರ

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಶಾಸಕರ ನೇತೃತ್ವದಲ್ಲಿ ಆಕ್ಸಿಜನ್ ಕಾನ್ಸೆನ್ಟ್ರೇಟರ್ ಯಂತ್ರ ಹಸ್ತಾಂತರ

 

ದೇವನಹಳ್ಳಿ: ಕೊರೊನಾ ಸೋಂಕು ತಡೆಗಟ್ಟಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಆಕ್ಸಿಜನ್ ಕಾನ್ಸೆನ್ಟ್ರೇಟರ್ ಯಂತ್ರದಿಂದ ಸಾಕಷ್ಟು ಅನುಕೂಲವಾಗುತ್ತದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.

 

ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆಕ್ಸಿಜನ್ ಕಾನ್ಸೆನ್ ಟ್ರೇಟರ್ ಗಳನ್ನು ಕೊರೊನಾ ಸೋಂಕಿತರಿಗೆ ಚಾಲನೆ ನೀಡಿ ಮಾತನಾಡಿದರು. ಆಕ್ಸಿಜನ್ ಕಾನ್ಸೆನ್ ಟ್ರೇಟರ್ ಗಳಿಂದ ಅನೇಕ ಉಪಯೋಗವಿದೆ. ಅದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಕೋವಿಡ್ ೨ನೇ ಅಲೆಯಲ್ಲಿ ಪೂಜ್ಯ ವಿರೇಂದ್ರ ಹೆಗ್ಗಡೆಯವರ ಮಾರ್‍ಗದರ್ಶನದಲ್ಲಿ ೨೦ ಅಕ್ಸಿಜನ್ ಕಾನ್ಸೆನ್ ಟ್ರೇಟರ್ ಗಳನ್ನು ಕೊಟ್ಟಿರುವುದರಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಸರ್ಕಾರ ಕೇವಲ ತಮ್ಮ ಸ್ವಾರ್ಥಕ್ಕಾಗಿ ತಮ್ಮ ಕುರ್ಚಿಗಳಿಗಾಗಿ ಅವರ ಮೇಲೆ ಇವರ ಮೇಲೆ ಆರೋಪ ಮಾಡಿಕೊಂಡು ಕಾಲಹರಣ ಮಾಡುತ್ತಿದೆ. ಮೊದಲು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಜನರಹಿತ ಕಾಪಾಡಬೇಕು. ಸರ್ಕಾರಗಳು ಜನರ ಹಿತ ಮರೆತಿದ್ದಾರೆ. ಇಂದು ಬ್ಲಾಕ್ ಫ಼ಂಗಸ್, ವೈಟ್‌ಫ಼ಂಗಸ್ ಮತ್ತು ಕೊರೊನಾ ಅಂಥ ಕಾಯಿಲೆಗಳು ಯಥೇಚ್ಛವಾಗಿ ಬರುತ್ತಿದೆ. ಅವಕ್ಕೆ ಕಡಿವಾಣ ಹಾಕುವುದರಲ್ಲಿ ಸರ್ಕಾರ ವಿಫಲವಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಣ ಮಾಡಲು ಮೊದಲು ಆಧ್ಯತೆ ನೀಡಬೇಕು. ಮುಂದಿನ ದಿನಗಲಲ್ಲಿ ತಾಲೂಕಿನ ಕಡುಬಡವರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಲಾಗುವುದು. ಎಂದು ಹೇಳಿದರು.

 

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ವತಿಯಿಂದ ಆನೇಕಲ್ ಮತ್ತು ದೇವನಹಳ್ಳಿಯಲ್ಲಿ ಆಕ್ಸಿಜನ್ ಕನ್ವರ್ಟರ್‌ಗಳನ್ನು ಇರಿಸಲಾಗಿದೆ. ಆಕ್ಸಿಜನ್ ಕಾನ್ಸೆನ್ ಟ್ರೇಟರ್ ಗಳ ಅಗತ್ಯ ಇರುವವರು ೯೮೪೪೯೩೦೪೯೬ ನಂಬರಿಗೆ ಸಂಪರ್ಕಿಸಿ ನಮಗೆ ಮಾಹಿತಿ ರೋಗಿಗಳ ವಿವರ ನೀಡಿದಲ್ಲಿ ಆಕ್ಸಿಜನ್ ಕಾನ್ಸೆನ್ ಟ್ರೇಟರ್ ಯಂತ್ರಗಳನ್ನು ಉಚಿತವಾಗಿ ರೋಗಿಯ ಮನೆಗೆ ಕಳಿಸಿಕೊಡಲಾಗುವುದು. ಒಂದು ವಾರದ ನಂತರ ಅವುಗಳನ್ನು ಹಿಂಪಡೆಯಲಾಗುವುದು. ಎಂದು ಹೇಳಿದರು.

 

ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಗ್ರಾಮಗಳಲ್ಲಿ ಪಾಸಿಟಿವ್ ಪ್ರಕರಣಗಳು ಬಂದ ಕೂಡಲೇ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಪ್ರತಿ ಹಳ್ಳಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ಕೊರೊನಾ ಅಂತಹ ಕಾಯಿಲೆಗಳಿಗೆ ಕಡಿವಾಣ ಹಾಕಬಹುದು. ಗ್ರಾಮದ ಪ್ರತಿ ಜನರಲ್ಲೂ ಅರಿವು ಮೂಡಿಸುವ ಕಾರ್ಯ ಆಗಬೇಕು. ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಕ್ಸಿಜನ್ ಕಾನ್ಸೆನ್ಟ್ರೇಟರ್ ಅವಶ್ಯಕತೆ ಇದ್ದಲ್ಲಿ ನಮ್ಮ ಸಂಸ್ಥೆಯ ಮೂಲಕವೇ ಮನೆ ಬಾಗಿಲಿಗೆ ಸೋಂಕಿತರನ್ನು ಗುಣಪಡಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಲಾಗುತ್ತದೆ. ಸರಕಾರ ಎಷ್ಟೇ ಎನೇ ಖರ್ಚು ಮಾಡಿದರೂ ಆರೋಗ್ಯದ ಹಿತದೃಷ್ಠಿಯಿಂದ ಇಂತಹ ಸೇವಾ ಮನೋಭಾವವನ್ನು ಹೊಂದಿರಬೇಕು. ಜನರ ಸೇವೆಯನ್ನು ಇಂತಹ ಸಂದಿಗ್ಧ ಸಂದರ್ಭದಲ್ಲಿ ಮಾಡುವ ಕಾರ್ಯವಾಗಬೇಕು. ನಮ್ಮ ಸಂಸ್ಥೆ ಹಲವಾರು ಜನಪರ ಸೇವೆ ಮಾಡುತ್ತಾ ಬರುತ್ತಿದೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೊರೊನಾ ಸೋಂಕು ಹರಡದಂತೆ ಪ್ರಾಥಮಿಕ ಹಂತದಲ್ಲಿ ಸೂಕ್ತ ಮಾರ್ಗಸೂಚಿಯನ್ನು ಕಡ್ಡಾಯಗೊಳಿಸಬೇಕು. ದಿನಕ್ಕೊಂದು ಮಾರ್ಗಸೂಚಿ ಬಿಡುಗಡೆ ಮಾಡಿ, ಜನರಿಗೆ ಗೊಂದಲ ಸೃಷ್ಠಿ ಮಾಡಬಾರದು. ಬ್ಲಾಕ್ ಫಂಗಸ್‌ಗೆ ಜಿಲ್ಲೆಯಲ್ಲಿಯೇ ಸೂಕ್ತ ಚಿಕಿತ್ಸೆ ದೊರೆಯುವಂತೆ ಆಗಬೇಕು. ಬ್ಲಾಕ್ ಫಂಗಸ್ ನಿವಾರಣೆಗೆ ಅವಶ್ಯಕ ಔಷಧಿಗಳನ್ನು ಒದಗಿಸಿಕೊಡುವ ಕೆಲಸವಾಗಬೇಕು ಎಂದು ಹೇಳಿದರು.

 

ಈ ವೇಳೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ಸತೀಶ್ ನಾಯಕ್, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿ ಕುಮಾರ್ ಬಾಬು, ಪುರಸಭಾ ಸದಸ್ಯರಾದ ಜಿ.ಎ. ರವೀಂದ್ರ, ವೈ.ಆರ್.ರುದ್ರೇಶ್, ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದ ಅಧ್ಯಕ್ಷ ಲಕ್ಷ್ಮೀನಾರಾಯಣ್, ಮಾಜಿ ಪುರಸಭಾ ಸದಸ್ಯ ಕುಮಾರ್, ಮತ್ತಿತರರು ಇದ್ದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!