ರಿಫಾ ಚೇಂಬರ್ ಆಫ್ ಕಾಮರ್ಸ್ ತುಮಕೂರು ಜಿಲ್ಲಾ ಶಾಖೆ ಉದ್ಘಾಟನೆ.

ರಿಫಾ ಚೇಂಬರ್ ಆಫ್ ಕಾಮರ್ಸ್ ತುಮಕೂರು ಜಿಲ್ಲಾ ಶಾಖೆ ಉದ್ಘಾಟನೆ.

 

 

ತುಮಕೂರು ನಗರದಲ್ಲಿ ರಿಫ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ತುಮಕೂರು ಜಿಲ್ಲಾ ಘಟಕ ಅಧಿಕೃತವಾಗಿ ಉದ್ಘಾಟನೆಯಾಗಿದೆ.

 

ತುಮಕೂರಿನ ಎಂಜಿ ರಸ್ತೆಯಲ್ಲಿ ಸರಳ ಕಾರ್ಯಕ್ರಮದೊಂದಿಗೆ ರಿಫಾ ಚೆಂಬರ್ ಆಫ್ ಕಾಮರ್ಸ್ ಉದ್ಘಾಟನೆಯಾಗಿದ್ದು . ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹನಿ ಹುಸೇನ್, ಜಿಲ್ಲಾ ಉಪಾಧ್ಯಕ್ಷರಾಗಿ ಡಾಕ್ಟರ್ ಇರ್ಫಾನ್ ಖಾನ್ ಅವರನ್ನು ರಿಫಾ ಚೆಂಬರ್ ಆಫ್ ಕಾಮರ್ಸ್ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.

 

ಇದೇ ಸಂದರ್ಭದಲ್ಲಿ ಮಾತನಾಡಿದ ವರ್ತಕರು ಹಾಗೂ ಮುಖಂಡರಾದ ತಾಜುದ್ದೀನ್ ಶರೀಫ್ ಮಾತನಾಡಿ ರಿಫ ಚೇಂಬರ್ ಆಫ್ ಕಾಮರ್ಸ್ ಜಿಲ್ಲೆಯಲ್ಲಿ ಉದ್ಘಾಟನೆಯಾಗಿದ್ದು ಈ ಮೂಲಕ ವರ್ತಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳು, ವರ್ತಕರಿಗೆ ಆಗುವ ಲಾಭ ನಷ್ಟಗಳು ಹಾಗೂ ಅವರಿಗೆ ಅಗತ್ಯವಿರುವ ಸೌಲಭ್ಯಗಳು ಹಾಗೂ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ರಿಫಾ ಚೇಂಬರ್ ಆಫ್ ಕಾಮರ್ಸ್ ಜಿಲ್ಲೆಯಲ್ಲಿ ಉದ್ಘಾಟನೆಯಾಗಿದ್ದು ಇದರ ಸದುಪಯೋಗವನ್ನು ಎಲ್ಲಾ ವರ್ತಕರು ಪಡೆದುಕೊಳ್ಳಬೇಕು ಈ ಮೂಲಕ ಸಂಘದ ಸದಸ್ಯತ್ವವನ್ನು ಪಡೆಯುವ ಮೂಲಕ ತಮ್ಮ ವ್ಯಾಪಾರಗಳನ್ನು ಅಭಿವೃದ್ಧಿ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಹೀಗಾಗಿ ಎಲ್ಲಾ ವರ್ತಕರಿಗೂ ಸಂಘದಲ್ಲಿ ಸೇರಲು ಮುಕ್ತ ಅವಕಾಶವಿದ್ದು ಎಲ್ಲರೂ ಇದರ ಸದುಪಯೋಗವನ್ನು ಪಡೆಯಲು ಸಲಹೆ ನೀಡಿದರು.

 

 

ಇದೇ ಸಂದರ್ಭದಲ್ಲಿ ರಿಫ ಚೇಂಬರ್ ಆಫ್ ಕಾಮರ್ಸ್ ನ ರಾಜ್ಯ ಅಧ್ಯಕ್ಷರಾದ ಸೈಯದ್ ಮುಮ್ತಾಜ್ ಮನ್ಸುರಿ, ಅಸಾದುಲ್ಲಾ ಖಾನ್, ಆಫ್ಝಲ್ ಶರೀಫ್ ಸಾಬ್, ಮೌಲಾನಾ ಉಮರ್ ಅನ್ಸಾರಿ, ಆಶ್ರಫ್ ಹುಸೇನ್ ಸಾಬ್ ಸೇರಿದಂತೆ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!