ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಪ್ರಜಾಪ್ರಭುತ್ವ ಕತ್ತಲೆಯಾಗಿದೆ _ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ತುಮಕೂರು_ ದೇಶ ಹಾಗೂ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಪ್ರಜಾಪ್ರಭುತ್ವದ ಕತ್ತಲೆಯಾಗಿದೆ ಸಂವಿಧಾನದ ಎಲ್ಲಾ ವಿಧಿ ವಿಧಾನಗಳನ್ನು ಗಾಳಿಗೆ ತೂರಿದ್ದಾರೆ ಇಂತಹ ಕೆಟ್ಟ ಪರಿಸ್ಥಿತಿ ಯಾವ ಕಾಲದಲ್ಲಿಯೂ ಸಹ ಬಂದಿರಲಿಲ್ಲ ತುರ್ತುಪರಿಸ್ಥಿತಿಯನ್ನು ಮಾಡದೇ ಇರಬಹುದು ಆದರೆ ದೇಶದಲ್ಲಿ ಅನ್ ಡಿಕ್ಲೇರ್ ಎಮರ್ಜೆನ್ಸಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾನುವಾರ ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಇವತ್ತು ಜನಸಾಮಾನ್ಯರ ಬದುಕು ಬಹಳ ಕಷ್ಟಕರವಾಗಿದೆ ನರೇಂದ್ರಮೋದಿಯವರು ಪ್ರಧಾನಿಯಾದ ಮೇಲೆ ಕಾರ್ಪೊರೇಟ್ ಕಂಪನಿಗಳು ಮಾತ್ರ ಬದುಕಲು ಸಾಧ್ಯವಾಗಿದೆ
ಖಾಸಗಿ ಕಂಪನಿಗಳಿಗೆ ದುಡ್ಡು ಜಾಸ್ತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಆದರೆ ರೈತರು ಮಹಿಳೆಯರು ಸಾಮಾನ್ಯ ಜನರು ನೆಮ್ಮದಿಯಿಂದ ಬದುಕುವುದಕ್ಕೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇನ್ನು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರೆ ಅವರನ್ನು ಉಗ್ರಗಾಮಿಗಳು ದೇಶದ್ರೋಹಿಗಳು ಎಂದು ಹೇಳಿ ಹಣೆಪಟ್ಟಿಯನ್ನು ಕಟ್ಟುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ .
ರೈತರು ಸುಮಾರು ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ 700 ಜನ ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಬಹುಶಹ ಇಷ್ಟೊಂದು ದೀರ್ಘಕಾಲ ಸ್ವಾತಂತ್ರ್ಯ ಹೋರಾಟವನ್ನು ಬಿಟ್ಟರೆ .ರೈತರಾಗಲಿ , ಕಾರ್ಮಿಕರ ಗಲಿ ಹೋರಾಟ ಮಾಡಿದ ನಿದರ್ಶನವೇ ಇಲ್ಲ ನನ್ನ ಪ್ರಕಾರ ರೈತರು ಈ ಮೂರು ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಹೋರಾಟ ಮಾಡಿದರು. ಅದು ಒಂದು ಐತಿಹಾಸಿಕ ಹೋರಾಟ ಅಂತ ಭಾವಿಸಿದ್ದೇನೆ ನರೇಂದ್ರ ಮೋದಿಯವರಿಗೆ ಮೂರು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ ಆದರೆ ರೈತರ ದೀರ್ಘಾವಧಿ ಪ್ರತಿಭಟನೆಗೆ ಮುಂಚೆಯೇ ಈ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ ಸುಮಾರು 700ಕ್ಕೂ ಹೆಚ್ಚು ರೈತರ ಪ್ರಾಣವನ್ನು ಉಳಿಸಬಹುದಿತ್ತು ಎಂದರು.
ಇನ್ನು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿಲ್ಲ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ ಅದಕ್ಕೆ ರೈತರು ಹೋರಾಟಗಾರರು ವಾಪಸ್ ತೆಗೆದುಕೊಳ್ಳುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ ಹಾಗಾಗಿ ಈ ಮೂರು ಕಾಯ್ದೆಗಳನ್ನು ಅವರು ಪಡೆಯಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಂದು ಗ್ಯಾಸ್ ಸಿಲೆಂಡರ್ ಹೊತ್ತುಕೊಂಡು ಐದರಿಂದ ಹತ್ತು ರೂಪಾಯಿ ಹೆಚ್ಚಾದಾಗ ಖಾಲಿ ಸೆಂಟರ್ ಹೊತ್ತುಕೊಂಡು ಪ್ರತಿಭಟನೆ ಮಾಡಿದರು ಆದರೆ ಶೋಭಾಜಿ ರಾಜ್ ಕಹಾ ಹೇ ಎಲ್ಲಮ್ಮ ಇದ್ದೀಯ ತಾಯಿ ಎಂದು ಕಾರ್ಯಕ್ರಮದುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.