ತುಮಕೂರಿನಲ್ಲಿ ಡಾ. ಮಾರುತಿ ಎನ್ ಎನ್ ರವರ ಚೊಚ್ಚಲ ಕಥಾಸಂಕ ಲವಾದ ನಿಗೂಡ ನಿಶಾಚರಿಗಳು ಕೃತಿ ಬಿಡುಗಡೆ ಸಮಾರಂಭವನ್ನ ಕನ್ನಡ ಭವನ ದಲ್ಲಿ ಆಯೋಜಿಸಲಾಗಿತ್ತು.
ಪುಸ್ತಕ ಬಿಡುಗಡೆ ನಂತರ ಮಾತನಾಡಿದ ತುಮಕೂರು ವಿ ವಿ ಯ ಕುಲಸಚಿವರಾದ ಪ್ರೊ. ವೈ ಎಸ್ ಸಿದ್ದೇಗೌಡ ರವರು ಓರ್ವ ವ್ಯಕ್ತಿಯ ಸ್ವಭಾವ ಸಮಾಜಕ್ಕೆ ಪೂರಕವಾಗಿ ಇರಬೇಕು ಇದಗೆ ಪೂರಕವಾಗಿ ನಮ್ಮ ಸಾಹಿತ್ಯ ಮಹತ್ವ ಸ್ಥಾನ ಪಡೆತ್ತಿದೆ, ಪುಸ್ತಕವನ್ನು ಕೇವಲ ಓದಿದರೆ ಸಾಲದು ಅದುನೂ ನಮ್ಮ ಜೀವನಕ್ಕೆ ಅಳವಡಿಸಿ ಕೊಳ್ಳಬೇಕು ಎಂದರು.
ಶ್ರೀನಾಥ ಕೆ (ನಟ – ಕನ್ನಡ ಬೆಳ್ಳಿತೆರೆ ಕಿರುತೆರೆ ಲೇಕಕರು, ಅನುವಾದಕರು) ನಿಗೂಡ ನಿಶಾಚರಿಗಳು ಪುಸ್ತಕದ ಬಗ್ಗೆ ವಿಮರ್ಶೆ ಮಾಡಿದರು. ಡಾ. ಮಲ್ಲಿಕಾ ಬಸವರಾಜು ಅಧ್ಯಕ್ಷರು ಕರ್ನಾಟಕ ಲೇಖಕಿ ಸಂಘ. ಇವರ ಅದ್ಭುತ ಲೇಖನ ಮುಂದೊಂದು ದಿನ ಯಾವುದಾದರೂ ಒಂದು ಚಿತ್ರದಲ್ಲಿ ಅಥವಾ ಧಾರಾವಾಹಿ ಒಂದು ಭಾಗದಲ್ಲಾ ದರೂ ಕಥೆಯ ವಿಮರ್ಶೆ ನೋಡುತ್ತೇವೆ ಎಂದರು.
ಕರ್ನಾಟಕ ಲೇಖಕಿ ಸಂಘ, ತುಮಕುರು ವಿಶ್ವವಿದ್ಯಾನಿಲಯ ಪ್ರ ಶಿಕ್ಷಕರ ಸಂಘದ ವತಿಯಿಂದ ಡಾ. ಮಾರುತಿ ಎನ್‌ಎನ್ ಅವರಿಗೆ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಪರಮಶಿ ವಮೂರ್ತಿ ಡಿ.ವಿ. ಮುಖ್ಯಸ್ಥರು ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ತುಮಕೂರು ವಿವಿ, ಹನುಮಂತೇಗೌಡ ಕನ್ನಡ ಚಲನಚಿತ್ರ ನಟ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರು ಡಾ. ಗುರುಬಸಪ್ಪ ಡಿ .ಎಚ್. ಬಾ ಹ ರಮಾಕುಮಾರಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್. ಡಾ. ಮಲ್ಲಿಕಾ ಬಸವರಾಜು ಅಧ್ಯಕ್ಷರು ಕರ್ನಾಟಕ ಲೇಖಕಿ ಸಂಘ. ಡಾ. ರವಿಕುಮಾರ್ ನಿಹಾ ಕವಿಗಳು ನಿರ್ಮಾಪಕರು. ಸಾಹಿತ್ಯಲೋಕ ಅಪ್ಲಿ ಕೇಶನ್‌ನ ರಘುವೀರ್ ಸಮರ್ಥ್, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ವೈ.ಎಂ.ರೆಡ್ಡಿ ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದರು.