ಹನೂರಿನಲ್ಲಿ ನೂತನ ಸಂಚಾರಿ ನ್ಯಾಯಾಲಯ ಉದ್ಘಾಟನೆ 

ಹನೂರಿನಲ್ಲಿ ನೂತನ ಸಂಚಾರಿ ನ್ಯಾಯಾಲಯ ಉದ್ಘಾಟನೆ 

ಹನೂರು:- ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಸಂಕೀರ್ಣದ ಕಟ್ಟಡವನ್ನು ಉದ್ಘಾಟನೆ ಮಾಡಿ ಶನಿವಾರ ಜನತೆಯ ಸೇವೆಗೆ ಸಮರ್ಪಿಸಿದ್ದಾರೆ.ಹೊಸ ಕಟ್ಟಡ ಹಾಗೂ ಉತ್ತಮ ಪರಿ ಸರದಲ್ಲಿ ನ್ಯಾಯವಿತರಣೆಯ ಕಾರ್ಯವೈಖರಿ ಶ್ರೇಷ್ಠ ಮಟ್ಟವನ್ನು ತಲುಪಲಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಸೋಮಶೇಖರ್ ರವರು ಉದ್ಘಾಟನೆ ಮಾಡಿ ಹಾರೈಸಿದರು.ಪಟ್ಟಣದ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು

 

 

 

 

 

 

 

 

 

 

ಇದೆ ವೇಳೆ ಮಾತನಾಡಿದ ಕೊಳ್ಳೇಗಾಲ ತಾಲೂಕಿನ ಹಿರಿಯ ವಕೀಲರು ನಾಗರಾಜು ರವರು ಮಾತನಾಡಿ ಬಂದ ಕಾಲದಿಂದಲೂ ನಮ್ಮ ಹನೂರು ಭಾಗದ ಜನತೆ ಕೋರ್ಟ್ ಕಚೇರಿ ವಿಚಾರದಲ್ಲಿ ವಿಚಾರದಲ್ಲಿ ಬಹಳ ನೋವು ಕಷ್ಟವನ್ನು ಅನುಭವಿಸಿದ್ದಾರೆ. ರಾಜ್ಯದಲ್ಲೇ ಅತೀ ದೊಡ್ಡ ವಿಸ್ತೀರ್ಣ ಹೊಂದಿರುವ ಎರಡನೇ ಕ್ಷೆತ್ರ ನಮ್ಮ ಹನೂರು. ನ್ಯಾಯಾಲಯ ಸಂಬಂಧಿತ ವಿಚಾರವಾಗಿ ಸಾರ್ವಜನಿಕರು 100 ರಿಂದ 150 ಕಿಲೋಮೀಟರ್ ಅಲೆದಾಡುವ ಪರಸ್ಥಿತಿ ಇತ್ತು ಅದಕ್ಕೆಲ್ಲ ಮುಕ್ತಿ ಸಿಗುವ ಸಮಯ ಇವತ್ತು ಬಂದಿದೆ. ಹನೂರು ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ನಮ್ಮ ಜಿಲ್ಲೆಯ ವರಪುತ್ರರಾದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಸೋಮಶೇಖರ್ ರವರು ಬಹಳ ಶ್ರಮ ಪಟ್ಟಿದ್ದಾರೆ.ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಲೈ ಮಹದೇಶ್ವರ ಸ್ವಾಮಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಹಾರೈಸಿದರು.

 

 

ಇನ್ನು ಇದೆ ಸಂದರ್ಭದಲ್ಲಿ ಮಾತನಾಡಿದ ಉಚ್ಛ ನ್ಯಾಯಾಲಯ ಮೂರ್ತಿಗಳು ಶಿವಶಂಕರ್ ರವರು ಈ ಭಾಗದ ಜನರು ಸದುಪಯೋಗ ಪಡೆದುಕೊಳ್ಳಬೇಕು. ವಕೀಲರು ನ್ಯಾಯಾದಿಶಾರ ಜೊತೆ ಸ್ಪಂದಿಸಿ ಉತ್ತಮ ಸಮಾಜ ನಿರ್ಮಾಣ ವಾಗಲು ಸಾರ್ವಜನಿಕರ ಪ್ರೋತ್ಸಾಹ ತುಂಬಾ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯದಿಷರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಕಟ್ಟಡ ನಿರ್ಮಾಣ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಮಾತನಾಡಿದರು.

 

 

 

 

 

 

 

 

 

ಇದೆ ವೇಳೆ ಮಾತನಾಡಿದ ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳು ಸೋಮಶೇಖರ್ ರವರು ಸಮಯದ ಅಭಾವ ಎಷ್ಟಿದೆ ಆ ಸಮಯದ ಮೌಲ್ಯವನ್ನು ನಾವು ತಿಳಿದು ಕೊಳ್ಳಬೇಕು. ಸಂವಿಧಾನ ರಚಿಸಲು ಶ್ರಮಿಸಿದ ಮಹಾನ್ ನಾಯಕರುಗಳು 365 ಜನ ಸದಸ್ಯರು ರಚನಾ ಸಮಿತಿಯಲ್ಲಿ ಇದ್ದರು ಅದರಲ್ಲಿ ಮುಖ್ಯವಾದವರು

 

 

 

 

 

 

 

 

 

 

 

 

ಬಾಬಾಸಾಹೇಬ್ ಅಂಬೇಡ್ಕರ್ ರವರು 2 ವರ್ಷ 11 ತಿಂಗಳು 18 ದಿನಗಳ ಕಾಲ ಹಗಲು ರಾತ್ರಿ ಕಷ್ಟ ಪಟ್ಟು 295 ಆರ್ಟಿಕಲ್ ಗಳನ್ನು ಒಳಗೊಂಡ ಬೃಹತ್ ಲಿಖಿತ ಸಂವಿಧಾನ ವನ್ನು ನಮ್ಮ ದೇಶಕ್ಕೆ ಅರ್ಪಣೆ ಮಾಡಿದ್ದಾರೆ ಅದೆಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕು.ಎಲ್ಲರನ್ನು ಸಮಾನವಾಗಿ ಪ್ರತಿಪಾದಿಸಿದರೆ ಸಂವಿಧಾನ ಗೌರವಿಸಿದಂತೆ. ಸಂವಿಧಾನ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಆದರೂ ನಾವು ಸಂವಿಧಾನ ಸಂಪೂರ್ಣವಾಗಿ ಓದಿಕೊಳ್ಳಬೇಕು ಅತ್ಯಂತ ದೊಡ್ಡ ಲಿಖಿತ ಸಂವಿಧಾನ ನಮ್ಮ ಭಾರತೀಯ ಸಂವಿಧಾನ.ಎಲ್ಲರನ್ನು ಸಮಾನವಾಗಿ ಪ್ರತಿಪಾದಿಸಿದರೆ ಸಂವಿಧಾನ ಗೌರವಿಸಿದಂತೆ ನಾವೆಲ್ಲರೂ ಕಾನೂನಿಗೆ ಗೌರವ ಕೊಡಲೆಬೇಕು.

 

 

 

 

 

 

 

 

 

 

 

ನಮ್ಮದು ಜಾತ್ಯತೀತ ರಾಷ್ಟ್ರ ಈ ದೇಶದಲ್ಲಿ ಬೇಕಾದಷ್ಟು ಧರ್ಮಗಳಿವೆ ಎಲ್ಲ ಧರ್ಮವನ್ನು ನಾವು ಪ್ರೀತಿಸುವವರಾಗಬೇಕು. ಎಂದು ಸಂವಿಧಾನ ಕಾನೂನಿನ ಬಗ್ಗೆ ಬಹಳ ಅರ್ಥಪೂರ್ಣವಾಗಿ ವಿವರಿಸಿ ಮಾಹಿತಿ ನೀಡಿದರು.ಹಾಗೂ ಮಲೈ ಮಹದೇಶ್ವರ ಸ್ವಾಮಿ ಯ ಚರಿತ್ರೆ ಬಗ್ಗೆ ವಿವರಿಸಿ ಮಲೈ ಮಹದೇಶ್ವರ ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಸಿರುವ ಜೀವಂತ ದೇವರು ಅವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಹೇಳಿದರು. ಹಾಗೂ ಇಲ್ಲಿನ ತಾಲೂಕು ನ್ಯಾಯದಿಶಾರು ಜಾತಿ. ಧರ್ಮ. ಬಡವ. ಶ್ರೀಮಂತ ಎಂಬ ಬೇಧ ಬಾವವಿಲ್ಲದೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸೋ ನಿಟ್ಟಿನಲ್ಲಿ ಇಲ್ಲಿನ ನ್ಯಾಯದೀಶರುಗಳು. ಸೇವೆ ಸಲ್ಲಿಸಲು ಸೂಚಿಸಿದರು.

 

 

 

 

 

 

 

ಶುದ್ದೋದಾನ ರಾಜರ ಒಬ್ಬನೇ ಮಗ ಭಗವನ್ ಬುದ್ಧ ಅರಮನೆಯಲ್ಲಿ ಇದ್ದು ಬೇಜಾರಾಗಿ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಒಂದು ದಿನ ಅರಮನೆ ಇಂದ ಹೊರ ಹೋಗುವ ಪ್ರಯತ್ನ ಮಾಡಿ ಹೊರ ನಡೆದಾಗ ಹೊರಗಿನ ಪ್ರಪಂಚದಲ್ಲಿ ಒಬ್ಬ ಮನುಷ್ಯ ರೋಗದಿಂದ ಬಳಲುತ್ತಿರುವವನ್ನು ನೋಡುತ್ತಾರೆ. ಒಬ್ಬ ವ್ಯಕ್ತಿ ಕಷ್ಟ ಪಟ್ಟು ದುಡಿಯುವವನನ್ನು ನೋಡುತ್ತಾನೆ. ಒಬ್ಬ ಊಟ ವಿಲ್ಲದೆ ಸಂಕಟ ಅನುಭವಿಸುತ್ತಿರುವವನನ್ನು ನೋಡುತ್ತಾನೆ.ಒಬ್ಬ ಸತ್ತ ವ್ಯಕ್ತಿ ಯನ್ನು ನೋಡುತ್ತಾನೆ.

 

 

 

 

 

 

 

 

 

 

 

 

 

 

ಇದೆಲ್ಲವನ್ನು ಕಂಡ ಬುದ್ಧ ಇದೆಲ್ಲದಕ್ಕೂ ಪರಿಹಾರ ಕಂಡು ಹಿಡಿಯಲು ನಾಡಿನಿಂದ ಕಾಡಿಗೆ ಹೊರಟು ಮನುಷ್ಯ ಕಷ್ಟ ಕಾರ್ಪಣ್ಯಗಳನ್ನು ನಿವಾರಣೆ ಮಾಡಲು ಸಮಾಜದಲ್ಲಿ ಶಾಂತಿ ನೆಲೆಸಲು 16 ವರ್ಷ ತಪ್ಪಾಸ್ಸು ಮಾಡುತ್ತಾರೆ ಭಗವಾನ್ ಬುದ್ದರು ಅವಾಗ ಆಸ್ತಿ ಪಂಜರವಾಗಿ ಮಲಗಿದ್ದ ಸಂದರ್ಭದಲ್ಲಿ ಸುಜಾತ ಎಂಬ ಹೆಣ್ಣು ಮಗಳು ಅದನ್ನು ಕಂಡು ಅಮೃತ ಎಂಬ ಪಾಯಸವನ್ನು ಕೊಟ್ಟಿ ಮರುಜಿವಾ ಕೊಡುತ್ತಾಳೆ ಬುದ್ಧರಿಗೆ ಜೀವ ಬರುತ್ತದೆ ಜೀವ ಬಂದ ತಕ್ಷಣ ರೋಹಿಣಿ ನದಿಗಾಗಿ ಎರಡು ಸಂಘಗಳ ನಡುವೆ ಜಗಳ ನಡೆಯುತ್ತಿರುತ್ತದೆ ಆ ಸಂದರ್ಭದಲ್ಲಿ ಅಲ್ಲಿ ನ್ಯಾಯ ಕೊಡಿಸೋ ಕೆಲಸವನ್ನು ಮಾಡುತ್ತಾನೆ. ನ್ಯಾಯಸ್ಸಮ್ಮತವಾಗಿ ಸತ್ಯವಾದವನ್ನು ಮಂಡಿಸಿದ ಅದನ್ನು ಒಪ್ಪದ ಅಲ್ಲಿನ ಜನರು ಬುದ್ಧರನ್ನು ಸಂಘದಿಂದಲೇ ಉಚ್ಚಟನೆ ಮಾಡುತ್ತಾರೆ. ಭಗವಾನ್ ಬುದ್ಧರ ಬಗ್ಗೆ ಹೇಳಿದ ಉದ್ದೇಶ ಏನೆಂದರೆ ನ್ಯಾಯವನ್ನು ಬುದ್ಧರಲ್ಲಿ ನೋಡಿ ಕಲಿಬೇಕು ಅಂತಹ ಮಹಾ ಪುರುಷ ಭಗವಾನ್ ಬುದ್ಧ ಎಂದು ಹೇಳಿದರು.

 

 

 

 

 

 

 

 

 

 

 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯದಿಸರು ಸೋಮಶೇಖರ್. ನ್ಯಾಯಮೂರ್ತಿಗಳು ಶಿವಶಂಕರ್. ಜಿಲ್ಲಾ ನ್ಯಾಯಮೂರ್ತಿಗಳು ಶ್ರೀಮತಿ ಭಾರತಿ.ಕೊಳ್ಳೇಗಾಲ ವಕೀಲರ ಸಂಘದ ಅಧ್ಯಕ್ಷರು ಬಸವರಾಜ್. ಹನೂರು ತಾಲೂಕು ತಹಸೀಲ್ದಾರ್ ಗುರುಪ್ರಸಾದ್.ಹಾಗೂ ಜಿಲ್ಲೆಯ ವಿವಿಧ ವಿಭಾಗದ ನ್ಯಾಯದಿಶಾರು. ಸಾರ್ವಜನಿಕರು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!