ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬಹುತೇಕ ಎ.20ರಿಂದ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆಯಾಗುವ ಸಾಧ್ಯತೆಗಳಿವೆ.
ಸಾರ್ವಜನಿಕ ಸಮಾರಂಭಗಳು, ಆಚರಣೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಮಿತಿಯನ್ನು ಹೇರಲಾಗಿದೆ. ಈ ಹೊಸ ಮಾರ್ಗಸೂಚಿಯು ಏಪ್ರಿಲ್ 30 ರ ವರೆಗೆ ಜಾರಿಯಲ್ಲಿರಲಿದೆ.
ಮಾರ್ಗಸೂಚಿಗಳು ಏನೇನು..?:
ತೆರೆದ ಪ್ರದೇಶದಲ್ಲಿ ನಡೆಸುವ ಮದುವೆ ಕಾರ್ಯಕ್ರಮಗಳಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಹಾಗೂ ಕಲ್ಯಾಣ ಮಂಟಪ, ಹಾಲ್ ಹಾಗೂ ಸಭಾಂಗಣಗಳಲ್ಲಿ ನಡೆಸುವ ಮದುವೆಗೆ 100 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
ಹುಟ್ಟು ಹಬ್ಬ ಆಚರಣೆ ಹಾಗೂ ಇತರ ಸಂಭ್ರಮಾಚರಣೆಗಳಲ್ಲಿ ತೆರೆದ ಪ್ರದೇಶದಲ್ಲಿ 50 ಮಂದಿಗೆ ಹಾಗೂ ಸಭಾಂಗಣ ಮತ್ತು ಹಾಲ್ ಗಳಲ್ಲಿ 25 ಮಂದಿಗೆ ಅವಕಾಶ.
ಶವ ಸಂಸ್ಕಾರದಲ್ಲಿ 50 ಮಂದಿಗೆ ಪಾಲ್ಗೊಳ್ಳಲು ಮಾತ್ರ ಅವಕಾಶ. ಇತರ ಸಮಾರಂಭಗಳಲ್ಲೂ 50 ಮಂದಿಯನ್ನು ಮೀರದಂತೆ ಕಾರ್ಯಕ್ರಮಗಳನ್ನು ನಡೆಸಲು ಮಿತಿ ಹೇರಲಾಗಿದೆ.
ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರಿಗೆ ಕರೋನಾ ಸೋಂಕು ಬಂದಿದೆ. ಬೆಂಗಳೂರು ಕರೋನಾಕ್ಕೆ ಮತ್ತೆ ಬಲಿಯಾಗುವ ಸಾಧ್ಯತೆಗಳಿವೆ. ಆದರೆ ಅತಿರೇಕದ ಮಾಧ್ಯಮಗಳ ಸೃಷ್ಟಿ ಕೂಡ ಜನತೆಗೆ ಭಯ ಹುಟ್ಟಿಸಲಿದೆ. ಚುನಾವಣೆಗಳಲ್ಲಿ ಅಪಾರ ಸಂಖ್ಯೆಯ ಜನ ಸೇರುತ್ತಿರುವುದು ಮತ್ತಷ್ಟು ಅಪಾಯಕ್ಕೆ ಕಾರಣವಾಗಿದೆ.
ಚುನಾವಣೆಗೆ ಕರೋನಾ ನಿಯಮ ಏಕಿಲ್ಲ ಎಂಬ ಪ್ರಶ್ನೆಯನ್ನು ಜನ ಮುಂದೆ ಮಾಡುತ್ತಿದ್ದಾರೆ.
ಬದುಕಲು ಬಿಡಿ ಪ್ಲೀಸ್!: ಜನತೆ ಈಗಷ್ಟೇ ಕಳೆದುಕೊಂಡ ಪುಟ್ಟ ಬದುಕನ್ನು ಸರಿ ಮಾಡಿಕೊಳ್ಳುವಾಗಲೇ ಮತ್ತೆ ಕರೋನಾ ರಾಕ್ಷಸ ಬಂದಿದ್ದಾನೆ. ಎಲ್ಲರೂ ಜಾಗೃತಿ ಮಾಡುವ ಮೂಲಕ ಈ ಯುದ್ಧದಲ್ಲಿ ಗೆಲ್ಲಲೇಬೇಕಿದೆ.